For the best experience, open
https://m.kannadavani.news
on your mobile browser.
Advertisement

Maharashtra| ಪ್ರವಾಸಕ್ಕೆ ಹೋಗುವ ಜನರೇ ಎಚ್ಚರ| ಚಲಿಸುವ ವಾಹನದಲ್ಲೇ ನಡೆಯುತ್ತೆ ದರೋಡೆ

shocking incident occurred on Maharashtra’s National Highway 52 near Solapur, where robbers targeted a tourist TT vehicle from Kumta returning from a Shirdi–Ayodhya trip. Though valuables were safe, the family narrowly escaped a night-time highway robbery attempt. Travelers heading to pilgrimage destinations like Shirdi and Ayodhya are advised to stay alert during night travel on this route.
06:35 PM Oct 10, 2025 IST | ಶುಭಸಾಗರ್

ಮಹಾರಾಷ್ಟ್ರ/ಕುಮಟಾ(10 october):- ಮಹಾರಾಷ್ಟ್ರ (maharashtra) ಮೂಲಕ ಅಯೋಧ್ಯೆ ,ಶೀರ್ಡಿ ಅಂತ ಪ್ಯಾಮಿಲಿ ಜೊತೆ ಪ್ರವಾಸಕ್ಕೆ ( tour) ಹೋಗಬೇಕು ಅಂತ ನೀವೇನಾದ್ರು ಪ್ಲಾನ್ ಮಾಡಿಕೊಂಡಿದ್ದೀರಾ ಹಾಗಿದ್ರೆ ಈ ಸುದ್ದಿ ಓದಲೇ ಬೇಕು .

Advertisement

ಹೌದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಕುಟುಂಬವೊಂದು ಕುಮಟಾದ ಗಜಾನನ ಟ್ರಾವೆಲ್ಸ್ ಎಂಬ ಟ್ರಾವೆಲ್ ಏಜನ್ಸಿಯ  ಟಿಟಿ ಮಾಡಿಕೊಂಡು ಶಿರಡಿ,ಅಯೋದ್ಯೆಗೆ ಪ್ರವಾಸಕ್ಕೆ ತೆರಳಿದ್ದರು.

ಬರುವಾಗ ಮಹರಾಷ್ಟ್ರದಿಂದ (Maharashtra) ರಾಷ್ಟ್ರೀಯ ಹೆದ್ದಾರಿ 52 ರ ಮಾರ್ಗವಾಗಿ ಸೊಲ್ಲಾಪುರ ಭಾಗದಲ್ಲಿ ಟಿ.ಟಿ ವಾಹನ ಬರುತಿದ್ದ ಸಂದರ್ಭದಲ್ಲಿ ಈ ಟಿ.ಟಿ ವಾಹನವನ್ನು ಫಾಲೋ ಮಾಡಿದ ಮೂರು ಬೈಕ್ ಸವಾರರು ಹಿಂಭಾಗದಿಂದ ವೇಗವಾಗಿ ಹೋಗುತಿದ್ದ ಕುಮಟಾದ ಗಣಪತಿ ನಾಯ್ಕ ರವರ  ಟಿಟಿಯ ಹಿಂಭಾಗಕ್ಕೆ ಜಿಗಿದು ಬಾಗಿಲು ತೆರೆದು ಹಿಂಭಾಗದಲ್ಲಿ ಇದ್ದ ಬ್ಯಾಗ್ ಗಳನ್ನು ಲೂಟಿ ಮಾಡಿದ್ದಾರೆ. ಅದೃಷ್ಟವಶಾತ್ ಈ ಬ್ಯಾಗ್ ನಲ್ಲಿ ಯಾವುದೇ ಹಣ,ಆಭರಣ ಇರಲಿಲ್ಲ. ಇನ್ನು ಮಧ್ಯರಾತ್ರಿ ಹೊತ್ತು ಹೀಗೆ ಅಟ್ಯಾಕ್ ಮಾಡಿ ದೋಚಿದ್ದರಿಂದ ತಕ್ಷಣ ವಾಹನ ನಿಲ್ಲಿಸಿದರೂ ಕಳ್ಳರು ಇಡೀ ಟಿ.ಟಿ ಮೇಲೆ ದಾಳಿ ಮಾಡಲು ಸಜ್ಜಾಗಿದ್ದರು.

ಇದನ್ನು ಅರಿತ ಟಿಟಿ ಚಾಲಕ ಗಣಪತಿ ನಾಯ್ಕ ವಾಹನದಲ್ಲಿ ಅಡಿಗೆಗೆ ಇಟ್ಟಿದ್ದ ಚಾಕು ಕೊಂಡೊಯ್ದಾಗ ದರೋಡೆಕೋರರು ಓಡಿ ಹೋಗಿದ್ದಾರೆ. ಇನ್ನು ದೂರು ಸಹ ಕೊಡಲು ಸಾಧ್ಯವಾಗದೇ ಅಮೂಲ್ಯ ವಸ್ತುಗಳು ಕಳೆದುಹೋಗದ ಕಾರಣ ಮರಳಿ ಕುಮಟಾಗೆ ಪ್ರಯಾಣ ಬೆಳಸಿದ್ದಾರೆ.

Karnataka Rains : ಮತ್ತೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ| ಎಷ್ಟು ದಿನ ಮಳೆ ವಿವರ ಇಲ್ಲಿದೆ

ಇನ್ನು ಈ ಭಾಗದಲ್ಲಿ ಇವರಿಗೊಂದೇ ಅಲ್ಲದೇ ಮೈಸೂರು,ಮಂಗಳೂರಿನ ಪ್ರವಾಸಿಗರಿಗೂ ಇದೇ ಅನುಭವವಾಗಿದೆ. ಇಲ್ಲಿ ಪ್ರತಿ ಭಾರಿ ರಾತ್ರಿ ವೇಳೆ ಚಲಿಸುತ್ತಿರುವ ವಾಹನಗಳನ್ನು ತಡೆದು ದರೋಡೆ ಮಾಡುವುದು ,ಅಪಘಾತ ವಾದ ರೀತಿ ನಟಿಸಿ ವಾಹನ ನಿಂತರೇ ಆ ವಾಹನಸವಾರರನ್ನು ದೋಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಹೀಗಾಗಿ ಪ್ರಯಾಗ,ಶಿರಡಿ ಸೇರಿದಂತೆ ಇತರೆ ಭಾಗಕ್ಕೆ ತೆರಳುವ ವಾಹನ ಸವಾರರು ಎಚ್ಚರದಿಂದ ಇರಬೇಕಿದ್ದು ರಾಷ್ಟ್ರೀಯ ಹೆದ್ದಾರಿ 52 ರ ಭಾಗದ ಸೊಲ್ಲಾಪುರ ಭಾಗದಲ್ಲಿ ತೆರಳುವ ಪ್ರವಾಸಿಗರು ರಾತ್ರಿ ವೇಳೆ ಪ್ರಯಾಣ ಮಾಡುವಾಗ ಇಂತಹ ಘಟನೆ ಬಗ್ಗೆ ಎಚ್ಚರ ಇರಲಿ.

ಕುಮಟಾದ ಟಿ.ಟಿ ದರೋಡೆ ಮಾಡಿದ ವಿಡಿಯೋ ನೋಡಿ:-

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ