Karavali| ಕಾಲೇಜು ಯುವತಿಯೊಂದಿಗೆ ಬುರ್ಖಾ ಹಾಕಿ ಹೋದವನಿಗೆ ಬಿತ್ತು ಧರ್ಮದೇಟು
Mangalore news 29 November 2024:- ಕಾಲೇಜಿನಿಂದ ಹೊರಟ ಯುವತಿಯರೊಂದಿಗೆ ಬುರ್ಖಾ ಹಾಕಿ ಹೋಗುತಿದ್ದ ಯುವಕನಿಗೆ ಧರ್ಮದೇಟು ಬಿದ್ದಿದೆ.
ಈ ಘಟನೆ ನಡೆದಿರುವುದು ಮಂಗಳೂರಿನ (Mangalore) ಗಡಿ ಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ನಸೀಬುಲ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನಾಗಿದ್ದು ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಬುರ್ಖಾ( burka) ಹಾಕಿ ಬಸ್ ನಲ್ಲಿ ಪ್ರಯಾಣಿಸುತಿದ್ದ. ಈ ವೇಳೆ ಗಾಳಿ ರಭಸಕ್ಕೆ ಈತನ ಮುಖದ ಬಟ್ಟೆ ಹರಿದು ಹೋಗಿದ್ದು ಯುವತಿಯಲ್ಲ ಯುವಕ ಎಂಬುದು ಬಸ್ ಪ್ರಯಾಣಿಕರಿಗೆ ತಿಳಿದಿದೆ.
ನಂತರ ಈತನನ್ನು ಬಸ್ (Bus) ನಿಂದ ಇಳಿಸಿ ಧರ್ಮದೇಟು ನೀಡಿ ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ.
ಇದನ್ನೂ ಓದಿ:-Karnataka:ಬೋರ್‌ವೆಲ್ ಹಾಕಿಸಿದವರಿಗೆ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿ ,ಏನದು ವಿವರ ಇಲ್ಲಿದೆ.
ಇತ್ತೀಚಿನ ದಿನದಲ್ಲಿ ಕಾಮುಕರು ಬುರ್ಖಾ ಹಾಕಿ ಹಲವು ಕಡೆ ತಮ್ಮ ತೆವಲು ತೀರಿಸಿಕೊಳ್ಳುತಿದ್ದಾರೆ. ಈತ ಕೂಡ ಯುವತಿಯರನ್ನು ಕೆಟ್ಟದ್ದಕ್ಕೆ ಬಳಸಿಕೊಳ್ಳಲು ಬುರ್ಖಾ ಹಾಕಿ ಬಸ್ ಏರಿದ್ದಾನೆ . ಅದೃಷ್ಟವಶಾತ್ ಈತನ ಬಣ್ಣ ಬಯಲಾಗಿದೆ.
ಓದುಗರಲ್ಲಿ ವಿನಂತಿ:-
ಕನ್ನಡವಾಣಿ.ನ್ಯೂಸ್ ಇದೀಗ ಗೂಗಲ್ ಆಪ್ ನಲ್ಲಿಯೂ ಲಭ್ಯವಿದೆ.ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಮಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಪ್ರಮುಖ ಸುದ್ದಿಗಳನ್ನು ಓದಲು ಕನ್ನಡವಾಣಿ ಆಪ್ ಡೌನ್ ಲೋಡ್ ಮಾಡಿ.
ಕೆಳಗಿನ ಲಿಂಕ್ ಬಳಸಿ ಪ್ಲೇ ಸ್ಟೋರ್ ನಲ್ಲಿ ಕನ್ನಡವಾಣಿ ಆಪ್ ಡೌನ್ ಲೋಡ್ ಮಾಡಿ:-
https://play.google.com/store/apps/details?id=com.kannadavani.app