Mangalur : ಸುಹಾಸ್ ಹ*ತ್ಯೆ ಆರೋಪಿಗಳ ಬಂಧನ ! ಹ*ತ್ಯೆಗೆ ಕಾರಣ ರಿವೀಲ್ ಮಾಡಿದ ಕಮೀಷಿನರ್
Mangalur : ಸುಹಾಸ್ ಹ*ತ್ಯೆ ಆರೋಪಿಗಳ ಬಂಧನ ! ಹ*ತ್ಯೆಗೆ ಕಾರಣ ರಿವೀಲ್ ಮಾಡಿದ ಕಮೀಷಿನರ್
ಮಂಗಳೂರು:- ಮಂಗಳೂರಿನ(mangalur) ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಆಗಿದ್ದ ಸುಹಾಸ್ ನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಪ್ರಮುಖ ಆರೋಪಿ ಅಬ್ದುಲ್ ಸಫ್ವಾನ್ ಶಾಂತಿಗುಡ್ಡೆ ಬಜಪೆ,ನಿಯಾಝ್ ಶಾಂತಿಗುಡ್ಡೆ ಬಜಪೆ
ಮಹಮ್ಮದ್ ಮುಝಂಬಿಲ್ ,ಕಲಂದರ್ ಶಾಫಿ,ಕಳವಾರು ಬಜಪೆ,ಆದಿಲ್ ಮೆಹಬೂಬು ಬಜಪೆರಂಜಿತ್, ಕಳಸ,ಚಿಕ್ಕಮಗಳೂರು,ಮಹಮ್ಮದ್ ರಿಝ್ವಾನ್,ನಾಗರಾಜ್ ಕಳಸ,ಚಿಕ್ಕಮಗಳೂರು ಬಂಧಿತರು.
ಘಟನೆಗೆ ಕಾರಣ ಏನು?.
ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ,ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಆಗಿದ್ದಾನೆ.
ಸಫ್ವಾನ್ ಮೇಲೆ 2023ರಲ್ಲಿ ಮಾರಣಾಂತಿಕ ಹಲ್ಲೆಯಾಗುತ್ತದೆ. ಈತನ ಮೇಲೆ ಪ್ರಶಾಂತ್,ಧನರಾಜ್ ಹಲ್ಲೆ ಮಾಡಿದ್ದರು.ಈ ಇಬ್ಬರು ಸುಹಾಸ್ ಶೆಟ್ಟಿ ಸ್ನೇಹಿತರಾಗಿದ್ದರು.
ಸಫ್ವಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತುಈ ಹಿನ್ನಲೆ ಸುಹಾಸ್ ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದರು.ಇದೇ ವೇಳೆ ಹತ್ಯೆಯಾಗಿದ್ದ ಫಾಝೀಲ್ ನ ತಮ್ಮನನ್ನು ಸಂಪರ್ಕಿಸಿ ಸುಹಾಸ್ ನ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ.
ಇದನ್ನೂ ಓದಿ:-Mangalore : ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತನ ಹ**
ಸುಹಾಸ್ ಕೊಲೆಗೆ ಐದು ಲಕ್ಷ ರೂಪಾಯಿ ಯನ್ನು ಫಾಜಿಲ್‌ನ ತಮ್ಮ ಆದಿಲ್ ಸಫ್ವಾನ್ ನ ತಂಡಕ್ಕೆ ನೀಡುವುದಾಗಿ ಹೇಳಿರುತ್ತಾನೆ.ಅದರಲ್ಲಿ ಮೂರು ಲಕ್ಷ ಅಡ್ವಾನ್ಸ್ ನೀಡಿರುತ್ತಾನೆ,ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡ್ತಾನೆ.
ನಿಯಾಜ್ ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿನ್ ನ್ನು ಸಂಪರ್ಕ ಮಾಡುತ್ತಾರೆಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ,ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಕಮಿಷಿನರ್ ಹೇಳಿದ್ದಾರೆ.
ಈ ಪ್ರಕರಣವನ್ನು ರಿವೇಂಜ್ ಎಂದು ಹೇಳಲಿ ಆಗದು ತನಿಖೆ ಕೈಗೊಂಡಿದ್ದೇವೆ.ಸಫ್ವಾನ್ ಗೂ ಸುಹಾಸ್ ನಿಂದ ಕೊಲೆ ಆಗುವ ಆತಂಕ ಇತ್ತು, ಹಾಗಾಗಿ ಆದಿಲ್ ನ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ.
ಸುಹಾಸ್ ಶೆಟ್ಟಿ ಗೆ ಕೊಲೆಗೆ ಬುರ್ಖಾಧಾರಿ ಮಹಿಳೆ ಸಾಥ್ ನೀಡಿರೋ ವೀಡಿಯೋ ವೈರಲ್ ಆಗಿದೆ.ಆ ಇಬ್ಬರು ಮಹಿಳೆಯರು ಕೊಲೆ ಆರೋಪಿ ನಿಯಾಜ್ ನ ಸಂಬಂಧಿಕರು.ಯಾವುದೋ ಕೆಲಸಕ್ಕೆ ಆ ಹೆಂಗಸು ಅಲ್ಲಿ ಬಂದಿರೋದಾಗಿ ಹೇಳಿದ್ದಾಳೆ,ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ.
ಕೊಲೆ ಆರೋಪಿಗಳು ಪಿಎಫ್ಐ ಕಾರ್ಯಕರ್ತರ ಬಗ್ಗೆ ಮಾಹಿತಿ ಇಲ್ಲ, ಅವರ ಸೋಷಿಯಲ್ ಮಿಡಿಯಾ ತಪಾಸಣೆ ಮಾಡುತ್ತಿದ್ದೇವೆ,ಆರೋಪಿಗಳು ಬಾಡಿಗೆಯಲ್ಲಿ ಹತ್ಯೆಗೆ ಬಳಸಿದ ವಾಹನವನ್ನು ಪಡೆದುಕೊಂಡಿದ್ದರು ಎಂದು ಮಂಗಳೂರು ಕಮಿಷಿನರ್ ತಿಳಿಸಿದ್ದಾರೆ.