ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Actor Darshan ಗೆ ಷರತ್ತುಬದ್ಧ ಜಾಮೀನು ಇಂದೇ ಬಿಡುಗಡೆ ಸಾಧ್ಯತೆ.

Actor Darshan case news 30 October 2024:- ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ಆರೋಪಿ ನಟ ದರ್ಶನ್‌ಗೆ‌ (Darshan) ದೀಪಾವಳಿಯ ಗಿಫ್ಟ್‌ ಸಿಕ್ಕಿದೆ.
12:33 PM Oct 30, 2024 IST | ಶುಭಸಾಗರ್
Actor Darshan case

Actor Darshan case news 30 October 2024:- ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ಆರೋಪಿ ನಟ ದರ್ಶನ್‌ಗೆ‌ (Darshan) ದೀಪಾವಳಿಯ ಗಿಫ್ಟ್‌ ಸಿಕ್ಕಿದೆ.

Advertisement

ರೇಣುಕಾಸ್ವಾಮಿ (Renuka swami) ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್‌ಗೆ ಬರೋಬ್ಬರಿ 140 ದಿನಗಳ ಬಳಿಕ ಕರ್ನಾಟಕ ಹೈಕೋರ್ಟ್‌ (Karnataka High Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ವೇಳೆ ಹಲವು ಷರತ್ತುಗಳನ್ನೂ ಸಹ ವಿಧಿಸಿದೆ

ದರ್ಶನ್‌ಗೆ‌ 6 ವಾರಗಳ ಕಾಲ ಮೆಡಿಕಲ್‌ ಬೇಲ್‌ (Medical Bail) ಮಂಜೂರು ಮಾಡಿರುವ ಕೋರ್ಟ್‌ ಪಾಸ್‌ಪೋರ್ಟ್‌ ಸರೆಂಡರ್‌ ಮಾಡುವಂತೆ ಸೂಚಿಸಿದೆ. ಚಿಕಿತ್ಸೆಯನ್ನು ಎಲ್ಲಿ ಪಡೆಯಬೇಕು ಎಂದು ಕೋರ್ಟ್‌ ನಿರ್ದಿಷ್ಟವಾಗಿ ಸೂಚಿಸಿಲ್ಲ.

ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇರುವ ಕಾರಣ ಒಂದು ವೇಳೆ ಜಾಮೀನು ಮಂಜೂರು ಮಾಡಿದರೂ ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಎಸ್‌ಪಿಪಿ ಪ್ರಸನ್ನ ಕುಮಾರ್‌ (SPP Prasannakumar) ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್‌ ಸ್ಪಂದಿಸಿ ಪಾಸ್‌ಪೋರ್ಟ್‌ ಅನ್ನು ತನಗೆ ಒಪ್ಪಿಸುವಂತೆ ಷರತ್ತು ವಿಧಿಸಿದೆ. ಅಷ್ಟೇ ಅಲ್ಲದೇ ಆಸ್ಪತೆಗೆ ದಾಖಲಾಗುತ್ತಿದ್ದಂತೆ 1 ವಾರದೊಳಗೆ ಪ್ರಾಥಮಿಕ ವೈದ್ಯಕೀಯ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

Advertisement

ಇಂದೇ ಬಿಡುಗಡೆ ಸಾಧ್ಯತೆ !

ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು (Interim Bail) ಮಂಜೂರು ಮಾಡಿದ ಬೆನ್ನಲ್ಲೇ ಇಂದೇ ದರ್ಶನ್‌ (Darshan) ಬಳ್ಳಾರಿ ಜೈಲಿನಿಂದ (Ballari Jail) ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:-Darshan bail case| ನಟ ದರ್ಶನ್ ,ಪವಿತ್ರಾ ಗೌಡಾಗೆ ಜಾಮೀನು ನಿರಾಕರಣೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್‌ ಪರ ವಕೀಲರು, ಕೋರ್ಟ್‌ ಆರೋಗ್ಯ ಕಾರಣದಿಂದ 6 ವಾರಗಳ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿದರೆ ಇಂದು ಸಂಜೆಯೇ ದರ್ಶನ್‌ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:-Actor Darshan ಗೆ ಐಟಿಸಂಕಷ್ಟ- ಜೈಲಲ್ಲೇ ನಡೆಯಲಿದೆ ವಿಚಾರಣೆ!

ಕೋರ್ಟ್‌ (court )ನಿರ್ದಿಷ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಹೇಳಿಲ್ಲ. ದರ್ಶನ್‌ ಅವರು ಈ ಹಿಂದೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅಪೋಲೋ ಆಸ್ಪತ್ರೆಗೆ ತೆರಳುತ್ತಾರೋ ಅಥವಾ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೋ ಎನ್ನುವುದು ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ತಿಳಿಸಿದರು.

Advertisement
Tags :
Actor darshan casedarshan bailkannda actorKannda newsKarnatakaNewsನಟ ದರ್ಶನ್
Advertisement
Next Article
Advertisement