CONGRESS ಪ್ರೋತ್ಸಾಹ ದಿಂದ ಸಿದ್ಧರಾಮಯ್ಯ ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ -ಕಾಗೇರಿ
ಶಿರಸಿ 21 October 2024 :- ಕೇಂದ್ರದ ಕಾಂಗ್ರೆಸ್ ಭ್ರಷ್ಟಾಚಾರದ ಜನಕ, ರಕ್ಷಕ ಹಾಗೂ ಪ್ರೋತ್ಸಾಹಕಆದ್ದರಿಂದಲೇ ಸಿದ್ಧರಾಮಯ್ಯ (siddaramaih) ರಾಜೀನಾಮೆ ಕೊಡೋಕೆ ಸಾಧ್ಯವಾಗ್ತಿಲ್ಲ.
ಸಿದ್ಧರಾಮಯ್ಯ (siddaramaih) ಹುಂಬತನ ಮಾಡದೇ ನೈತಿಕತೆ ಪ್ರದರ್ಶಿಸಬೇಕು,ಭೈರತಿ ಸುರೇಶ್ ಅವರ ಪಾತ್ರ ಕೂಡ ಇದರಲ್ಲಿದೆ,ಮೂಡಾ ಹಗರಣವನ್ನ ಸಿಬಿಐ ಗೆ ವಹಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಆಗ್ರಹಿಸಿದ್ದಾರೆ.
ಇದನ್ನೂ ಓದಿ:-Sirsi-ಹಾವೇರಿ KSRTC ಬಸ್ಸ್ ಚಲಿಸೋದು ಒಂದುಕಡೆ ಹೋಗೋದು ಇನ್ನೊಂದು ಕಟೆ! Video ನೋಡಿ
ಇಂದು ಸಂಜೆ ಶಿರಸಿ ಬಿಜೆಪಿ (Bjp) ಕಚೇರಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ನವರು ನೋಡೋದಕ್ಕೆ ಕೈಯಲ್ಲಿ ಸಂವಿಧಾನ ಪುಸ್ತಕ ಪ್ರದರ್ಶನಕ್ಕೆ ಹಿಡ್ಕೋತಾರೆ.
ಆದ್ರೆ ಅನುಷ್ಠಾನದಲ್ಲಿ ಸಂವಿಧಾನಕ್ಕೆ ಯಾವುದೇ ರೀತಿಯ ಗೌರವ ಕೊಡಲ್ಲ,ರಾಜ್ಯಪಾಲರ ಹುದ್ದೆಗೆ ಬೆಲೆ ಕೊಡಲ್ಲ, ಅಧಿಕಾರಿಗಳ ಮೇಲೆ ಒತ್ತಡ ತಂದು ಕಡತಗಳನ್ನ ತನಿಖಾ ಸಂಸ್ಥೆಗಳಿಗೆ ಕೊಡದಂತೆ ತಡೆದಿದ್ದಾರೆ.
ಇದನ್ನೂ ಓದಿ:-Rain News: ಮಲೆನಾಡಿನಲ್ಲಿ ಅಬ್ಬರಿಸಿದ ಮಳೆ ಶಿರಸಿಯಲ್ಲಿ ಸೇತುವೆ ಜಲಾವೃತ
ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕುಮ್ಮಕ್ಕೂ ಸಹ ಇದೆ.ಕಾಂಗ್ರೆಸ್ ಸರ್ಕಾರ (congress government )ಎಫ್.ಐ.ಆರ್ ಸರ್ಕಾರ
ಕೋರ್ಟ್ ನಲ್ಲಿರೋ ಸರ್ಕಾರ, ಬಿಜೆಪಿ ನಾಯಕರನ್ನ ಹುಡುಕಿ ಹುಡುಕಿ ಎಫ್.ಐ.ಆರ್ ಹಾಕುತ್ತಿದೆ
ನಮ್ಮ ಪ್ರಭಾವಿ ನಾಯಕರುಗಳ ಮೇಲೆ ಕಪ್ಪು ಮಸಿ ಬಳಿಯೋ ಷಡ್ಯಂತ್ರ ಇದು .ಅಭಿವೃದ್ಧಿ ಶೂನ್ಯ ಎಫ್.ಐ.ಆರ್ ಸರ್ಕಾರವಿದು.
ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಹಾಫ್ ಕಾಮ್ಸ್ ಮಳಿಗೆಗಳು ಬಂದ್ ಆಗಿವೆ, ಇದೊಂದು ರೈತವಿರೋಧಿ ಸರ್ಕಾರ ಎಂದು ಟೀಕಿಸಿದರು.