ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mukaleppa case| ಮಗಳು ಮುಂದೆ ಬೆಳೆತಾಳೆ ಅಂತಾ ಆತನ ಜೊತೆ ಕಳಿಸಿದ್ವಿ! 

In the Mukaleppa case, Gayathri Shivakka, mother of the victim, met Sri Rama Sene leader Pramod Muthalik and submitted a memorandum to the Karwar DC and SP demanding a fair investigation. She alleged that YouTuber Mukaleppa deceived her daughter and police have not yet taken action.
10:38 PM Oct 13, 2025 IST | ಶುಭಸಾಗರ್

ಕಾರವಾರ (october 13):-  ಯೂಟ್ಯೂಬರ್ ಮುಕೆಳಪ್ಪ (mukaelappa)ಪ್ರಕರಣ ಇನ್ನೇನು ತಣ್ಣಗಾಯಿತು ಎನ್ನುವಾಗಲೇ ಶ್ರೀರಾಮ ಸೇನೆಯ ರಾಜ್ಯಾಧ್ಗಕ್ಷ ಪ್ರಮೋದ್ ಮುತಾಲಿಖ್ ಜೊತೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಗಾಯಿತ್ರಿ ತಾಯಿ ಶಿವಕ್ಕ ತೆರಳಿ ತನಿಖೆಗೆ ಆಗ್ರಹಿಸಿ ಮನವಿ ನೀಡಿದ್ದಾರೆ.

Advertisement

ಅಂಕೋಲ ದಲ್ಲಿ ಶೀಘ್ರ ಪ್ರಾರಂಭ

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕ್ಕ ನನ್ನ ಮಗಳಿಗೆ ಮೋಸ ಮಾಡಿ ಮದುವೆಯಾಗಿದ್ದು, ಪೊಲೀಸರಿಗೆ ದೂರು ನೀಡಿದ್ದೇವೆ,ಸುಳ್ಳು ದಾಖಲೆ ನೀಡಿ ಮಗಳನ್ನು ಮದುವೆಯಾಗಿದ್ದು, ಪೊಲೀಸರು ಯಾವುದೇ ಕ್ರಮ‌ ಕೈಗೊಂಡಿಲ್ಲ.ಪೊಲೀಸರು ಇನ್ನೂ ಯಾಕೆ ಆತನನ್ನು ಬಂಧಿಸಿಲ್ಲ ಎಂದು ಸಿಟ್ಟು ಬಂದಿದೆ.

Youtuber Mukleppa case| ಮುಂಡಗೋಡಿನ ವಿವಾಹ ನೊಂದಣಿ ಕಚೇರಿಯಲ್ಲಿ  ಶಿವಕ್ಕ ರಂಪಾಟ| ಜೀವ ಬೆದರಿಕೆ ಇದೆ ಎಂದ ಮಗಳು ಗಾಯಿತ್ರಿ

ಮಗಳು ಮುಂದೆ ಬೆಳೆತಾಳೆ ಅಂತಾ ಆತನ ಜತೆ ಕಳಿಸಿದ್ವಿ, ಆದ್ರೆ, ಆತ ಉಂಡ ಮನೆಗೆ ಮೋಸ ಮಾಡಿದ್ದಾನೆ,ಫಿಲ್ಮಂ ಶೂಟ್‌ ಮಾಡಲು ನಮ್ಮ ಮನೆಯಲ್ಲೇ ಇದ್ದ, ಆದ್ರೆ, ಮೋಸ ಮಾಡಿ ನಾನು ಮಲಗಿದ್ದಾಗ ಮಗಳನ್ನು ಕರೆದುಕೊಂಡು ಹೋಗಿದ್ದಾನೆ.

Advertisement

ನಮ್ಮ ಮಗಳು ಬೆಳೆಯುತ್ತಾಳೆ ಎಂದು ಬೆಂಬಲ ಕೊಟ್ಟಿದ್ವಿ, ಆದ್ರೆ, ಅತ ಮೋಸ ಮಾಡಿದ್ದಾನೆ,ದೂರು ಕೊಡ್ತಿವಿ ಅಂದ್ರೆ ಪೊಲೀಸರು ನಿಮಗೆ ಒದ್ದು ಒಳಗೆ ಹಾಕ್ತಾರೆ ಅಂತಾ ನಮಗೆ ಬೆದರಿಕೆ ಹಾಕಿದ್ದ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಕ್ಕ ಹಾಗೂ ಪ್ರಮೋದ್ ಮುತಾಲಿಖ್

ಆತನ ಜತೆ ನಾವು ಅಕ್ಕ ತಂಗಿಯಂತೆ  ನಡೆದುಕೊಂಡಿದ್ವಿ, ಆದ್ರೆ, ಆತ ಅಕ್ಕಾ ಅಕ್ಕಾ ಅಂದು ಉಂಡ ಮನೆಗೆ ಕನ್ನ ಹಾಕಿದ್ದಾನೆ ಎಂದು ಆರೋಪಿಸಿದ್ದು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

Advertisement
Tags :
Gayathri ShivakkaKarnataka latest newsKarnataka newsKarwar newsKarwar policeMukaleppaMukaleppa CaseMukaleppa case Karwarpolice investigationPramod muthalikSri Rama SeneUttara KannadaYouTuber Controversy
Advertisement
Next Article
Advertisement