ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mundgod|ಮನೆದಲ್ಲಿ ಅಕ್ರಮ ದಾಸ್ತಾನು| 60 ಕೆಜಿ ಶ್ರೀಗಂಧ ವಶ, ಆರೋಪಿ ಪರಾರಿ

Mundgod: 60 kg Illegal Sandalwood Seized Accused Absconding ಅರಣ್ಯ ಇಲಾಖೆ ದಾಳಿ ಮುಂಡಗೋಡು ತಾಲೂಕಿನ ಅಗಡಿ ಗ್ರಾಮದಲ್ಲಿ
12:20 PM Dec 03, 2025 IST | ಶುಭಸಾಗರ್
Mundgod: 60 kg Illegal Sandalwood Seized Accused Absconding ಅರಣ್ಯ ಇಲಾಖೆ ದಾಳಿ ಮುಂಡಗೋಡು ತಾಲೂಕಿನ ಅಗಡಿ ಗ್ರಾಮದಲ್ಲಿ

Mundgod|ಮನೆದಲ್ಲಿ ಅಕ್ರಮ ದಾಸ್ತಾನು| 60 ಕೆಜಿ ಶ್ರೀಗಂಧ ವಶ, ಆರೋಪಿ ಪರಾರಿ

Advertisement

ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 60 ಕೆಜಿ ಶ್ರೀಗಂಧ ವಶಆರೋಪಿ ಪರಾರಿ.

ಕಾರವಾರ :- ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ,ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 60 ಕೆ.ಜಿ ತೂಕದ ಶ್ರೀಗಂಧದ (Sandalwood)ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಮುಂಡಗೋಡು ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

Mundgod| ಟಿಬೇಟಿಯನ್ ಗೆ ಮಾರಾಟ ಮಾಡುತಿದ್ದ 8 ಲಕ್ಷ ಮೌಲ್ಯದ ಚರಸ್ ವಶಕ್ಕೆ 

ಮುಂಡಗೋಡು(mundgod) ವಲಯ ಅರಣ್ಯ ವ್ಯಾಪ್ತಿಯ ಅಗಡಿ ಗ್ರಾಮದ ನಿವಾಸಿಯಾದ ಪರಶುರಾಮ ಲೋಕಪ್ಪ ಲಮಾಣಿ ಎಂಬುವವರ ಮನೆಯಲ್ಲಿ ಶ್ರೀಗಂಧವನ್ನು ದಾಸ್ತಾನು ಇರಿಸಲಾಗಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

Advertisement

ಮನೆಯನ್ನು ಪರಿಶೀಲಿಸಿದಾಗ 4 ಗೋಣಿ ಚೀಲಗಳಲ್ಲಿ ಕಟ್ಟಿ ಇಡಲಾಗಿದ್ದ ಅಂದಾಜು 60 ಕೆ.ಜಿ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಾಲನ್ನು ಜಪ್ತಿ ಮಾಡಿಕೊಂಡಿದ್ದಾರೆ.

ದಾಳಿಯ ಸುಳಿವು ಅರಿತ ಆರೋಪಿ ಪರಶುರಾಮ ಲಮಾಣಿ ಮನೆಯಿಂದ ಪರಾರಿಯಾಗಿದ್ದಾನೆ. ಈ ಕುರಿತು ಅರಣ್ಯ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಯಾರು ಭಾಗಿಯಾಗಿದ್ರು.

ಕಾರ್ಯಾಚರಣೆಯಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹರ್ಷಬಾನು ಜಿ.ಪಿ. ಹಾಗೂ ಮುಂಡಗೋಡು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ರವಿ ಎಂ. ಹುಲಕೋಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಮುಂಡಗೋಡು ವಲಯ ಅರಣ್ಯಾಧಿಕಾರಿ (RFO) ಅಪ್ಪಾರಾವ ಕಲಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಶ್ರೀಕಾಂತ ವಿ. ವರ್ಣೇಕರ ಹಾಗೂ ಗಸ್ತು ಅರಣ್ಯ ರಕ್ಷಕರಾದ ಮರ್ದಾನಲಿ ಕಳಸ ಮತ್ತು ನಾರಾಯಣಸಿಂಗ ರಜಪೂತ ಭಾಗವಹಿಸಿದ್ದರು.

Advertisement
Tags :
Illegal SandalwoodKarnatakaMundgodNewsUttara Kannada newsಅರಣ್ಯ ಇಲಾಖೆಕಾರವಾರ ಸುದ್ದಿಶ್ರೀಗಂಧ
Advertisement
Next Article
Advertisement