Mundgod ಬೀಗ ಮುರಿದು ಐದು ಮನೆಗಳಲ್ಲಿ ಕಳ್ಳತನ ಪೊಲೀಸರು ಬಂದ್ರೂ ಬರಲಿಲ್ಲ ಮನೆ ಮಾಲೀಕರು!
Mundgod news :-ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ (mundgodu ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಐದು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿದ್ದು ನಗ ನಾಣ್ಯ ಲೂಟಿ ಮಾಡಿದ್ದಾರೆ.
ಮುಂಡಗೋಡ (Mundgod) ತಾಲೂಕಿನ ಗಣೇಶಪುರದಲ್ಲಿ 2 ಮನೆ ,ಹಿರೇಳ್ಳಿಯಲ್ಲಿ 1 ಮನೆ , ಶಿಂಗನಳ್ಳಿಯಲ್ಲಿ 1 ಮನೆ ಹಾಗೂ ಭದ್ರಾಪುರದಲ್ಲಿ 1 ಮನೆ ಕಳ್ಳತನ ಮಾಡಲಾಗಿದೆ.
ಮನೆಗಳ ಮಾಲೀಕರು ತಮ್ಮ ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗಿರುವುದು ಖಚಿತಪಡಿಸಿಕೊಂಡಿದ್ದ ಕಳ್ಳರು ರಾತ್ರಿ ವೇಳೆ ಬೈಕ್ ನಲ್ಲಿ ಕಬ್ಬಿಣದ ರಾಡ್ ,ಕಟರ್ ಹಿಡಿದು ಬಂದು ಮನೆಯ ಬೀಗ ತುಂಡರಿಸಿ ಕಳ್ಳತನ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:-Mundgod:125 ಕ್ಕೆ ಏರಿಕೆ ಕಂಡ ಮಂಗನಬಾವು ಸೊಂಕು-ಶಾಲೆಗೆ ಮೂರುದಿನ ರಜೆ ಘೋಷಣೆ
ಇನ್ನು ಘಟನಾ ಸ್ಥಳಕ್ಕೆ ಕಾರವಾರದ(karwar) ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆದರೇ ಸರಣಿ ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಈವರೆಗೆ ಮನೆಯ ಮಾಲೀಕರು ದೂರು ನೀಡಿಲ್ಲ. ಇದಲ್ಲದೇ ತಮ್ಮ ಮನೆ ಕಳ್ಳತನವಾದ ಬಗ್ಗೆ ಮಾಹಿತೆಯೇ ಅವರಿಗೆ ತಿಳಿದಿಲ್ಲ. ಹೀಗಾಗಿ ಪೊಲೀಸರೇ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಹೀಗಾಗಿ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕಳ್ಳತನವಾದ ಮನೆ ಮಾಲಕರು ಬೇರೆ ಊರಿನಲ್ಲಿದ್ದದ್ರಿಂದ ಠಾಣೆಗೆ ಬಂದ ಬಳಿಕ ಪ್ರಕರಣ ದಾಖಲಿಸೋದಾಗಿ ಪೊಲೀಸರಿಂದ ಮಾಹಿತಿ ಬಂದಿದ್ದು ತನಿಖೆ ಮುಂದುವರೆದಿದೆ.