Mundgodu:ವಾಹನ ತಡೆದು ದರೋಡೆ ಮಾಡುತಿದ್ದ ಎಂಟುಜನ ದರೋಡೆಕೋರರ ಬಂಧನ
ಕಾರವಾರ :- ದಾರಿಹೋಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ 8 ದರೊಡೆಕೋರರನ್ನು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡಿರುವಾಗಲೇ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸುತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.
11:39 PM Feb 07, 2025 IST | ಶುಭಸಾಗರ್
ವಾಹನ ತಡೆದು ದರೋಡೆ ಮಾಡುತಿದ್ದ ಎಂಟುಜನ ದರೋಡೆಕೋರರ ಬಂಧನ
Advertisement

ಕಾರವಾರ :- ದಾರಿಹೋಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ 8 ದರೊಡೆಕೋರರನ್ನು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡಿರುವಾಗಲೇ ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (Mundgod) ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸುತಿದ್ದ ಕಬ್ಬಿಣದ ರಾಡ್, ಚಾಕು, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !

ಮುಂಡಗೋಡಿನ ಮಲ್ಲಿಕ್ ಜಾನ್ ಶೇಖ್(31), ಮಹಮ್ಮದ್ ಇಬ್ರಾಹಿಂ(30), ಶಾಹಿಲ್ ನಂದಿಗಟ್ಟಿ(28), ಹರುನ್ ಶೇಖ್(20), ಮಹಮದ್ ಯೂಸುಫ್(22), ಮಹಮ್ಮದ್ ಇಸ್ಮಾಯಿಲ್(25), ತನ್ವಿರ್ ಅಕ್ಕಿಆಲೂರು(29), ದಾದಾಖಲಂದರ್ ಮಲ್ಲಿಗಾರ(22) ಎಂದಾಗಿದ್ದು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement