For the best experience, open
https://m.kannadavani.news
on your mobile browser.
Advertisement

Mundgod: ಮೀಟರ್ ಬಡ್ಡಿ -ಸಾಲ ಹೆಚ್ಚು ಕೊಡದಿದ್ದಕ್ಕೆ ಫೈನಾನ್ಸರ್ ಕಿಡ್ನಾಪ್

ಕಾರವಾರ :- ಮೈಕ್ರೋ ಫೈನಾನ್ಸ್ ,ಮೀಟರ್ ಬಡ್ಡಿ ಕಾಟಕ್ಕೆ ರಾಜ್ಯದಲ್ಲಿ (state) ಹಲವರು ಮನೆ ಬಿಟ್ಟರೇ ಕೆಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣ್ಣಮುಂದಿರುವಾಗಲೇ ಸಾಲ ಹೆಚ್ಚು ನೀಡಲಿಲ್ಲ ಎನ್ನುವ ಕಾರಣಕ್ಕೆ ಫೈನಾನ್ಸಿಯರ್ ನನ್ನೇ ಕಿಡ್ನಾಪ್ ಮಾಡಿದ ವಿಚಿತ್ರ ಘಟನೆ ಮುಂಡಗೋಡಿನಲ್ಲಿ (Mundgod) ನಡೆದಿದೆ.
08:48 PM Jan 31, 2025 IST | ಶುಭಸಾಗರ್
mundgod  ಮೀಟರ್ ಬಡ್ಡಿ  ಸಾಲ ಹೆಚ್ಚು ಕೊಡದಿದ್ದಕ್ಕೆ ಫೈನಾನ್ಸರ್ ಕಿಡ್ನಾಪ್
Mundgod ಮೀಟರ್ ಬಡ್ಡಿ -ಸಾಲ ಹೆಚ್ಚು ಕೊಡದಿದ್ದಕ್ಕೆ ಫೈನಾನ್ಸರ್ ಕಿಡ್ನಾಪ್

Mundgod ಮೀಟರ್ ಬಡ್ಡಿ -ಸಾಲ ಹೆಚ್ಚು ಕೊಡದಿದ್ದಕ್ಕೆ ಫೈನಾನ್ಸರ್ ಕಿಡ್ನಾಪ್ !

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಮೈಕ್ರೋ ಫೈನಾನ್ಸ್ ,ಮೀಟರ್ ಬಡ್ಡಿ ಕಾಟಕ್ಕೆ ರಾಜ್ಯದಲ್ಲಿ (state) ಹಲವರು ಮನೆ ಬಿಟ್ಟರೇ ಕೆಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣ್ಣಮುಂದಿರುವಾಗಲೇ ಸಾಲ ಹೆಚ್ಚು ನೀಡಲಿಲ್ಲ ಎನ್ನುವ ಕಾರಣಕ್ಕೆ  ಫೈನಾನ್ಸಿಯರ್ ನನ್ನೇ ಕಿಡ್ನಾಪ್ ಮಾಡಿದ ವಿಚಿತ್ರ ಘಟನೆ ಮುಂಡಗೋಡಿನಲ್ಲಿ (Mundgod) ನಡೆದಿದೆ.

ಹೌದು ಜನವರಿ 9 ರ ರಾತ್ರಿ ಉತ್ತರ ಕನ್ನಡ(uttara kannda) ಜಿಲ್ಲೆಯ ಮುಂಡಗೋಡಿನಲ್ಲಿ ಜಮೀರ್ ದರ್ಗಾವಾಲೆ ಎಂಬಾತನು ತನ್ನ ಸ್ಕೂಟಿಯಲ್ಲಿ ಮನೆಗೆ ತೆರಳುತಿದ್ದವೇಳೆ ಹಿಂಭಾಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಆತನನ್ನು ಕಿಡ್ನಾಪ್ ಮಾಡಿ ಕತೆದೊಯ್ಯುತ್ತಾರೆ.

ಈತನ ಕುಟುಂಬಕ್ಕೆ ಕರೆಮಾಡಿದ ಅಪಹರಣಗಾರರು 32 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ. ಆದ್ರೆ ಕುಟುಂಬದವರು 18 ಲಕ್ಷ ಹಣ ನೀಡುತ್ತಾರೆ. ಈ ಹಣ ಪಡೆದು ಜಮೀರ್ ನನ್ನು ಹಾವೇರಿ ಬಳಿ ಬಿಟ್ಟು ತೆರಳುತ್ತಾರೆ.ಈ ಸಂದರ್ಭದಲ್ಲಿ ಮುಂಡಗೋಡು ಪೊಲೀಸರು ಕಳ್ಳರನ್ನು ಬಂಧಿಸುತ್ತಾರೆ.

ಆದ್ರೆ ಪ್ರಮುಖ ಆರೋಪಿ ಸಾದಿಕ್ ಮುಂಬೈ ನಲ್ಲಿ ತಲೆಮರಸಿಕೊಂಡಿದ್ದು ಕೊನೆಗೆ ಆತನೂ ಸಿಕ್ಕಿದ್ದು ಒಟ್ಟು ಹದಿಮೂರು ಜನ ಸಿಕ್ಕಾಗ ಮೀಟರ್ ಬಡ್ಡಿದಂದೆಯ ಕರಾಳ ಮುಖ ಅನಾವರಣಗೊಳ್ಳುತ್ತದೆ.

ಇದನ್ನೂ ಓದಿ:-Mundgod : ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಅಪಹರಣ

ಜಮೀರ್ ಮೀಟರ್ ಬಡ್ಡಿ ವ್ಯವಹಾರ ಮಾಡುತಿದ್ದು ,ಅಪಹರಣ ಮಾಡಿದ ಪ್ರಮುಖ ಆರೋಪಿ

ಖ್ವಾಜಾ ಜಮೀರ್ ಬಳಿ ಒಂದು ಲಕ್ಷ ಹಣ ಸಾಲವಾಗಿ ಪಡೆದಿದ್ದ. ಇನ್ನು ಒಂದು ಲಕ್ಷಕ್ಕೆ 30 ಸಾವಿರ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಿತ್ತು.

ಮೀಟರ್ ದಂದೆ ಮಾಡುತಿದ್ದ ಜಮೀರ್

ಆದ್ರೆ ಈತ ಬಡ್ಡಿ ಕಟ್ಟಲು ಆಗದ ಕಾರಣ ಆತನಿಗೆ ಹಣ ಬಡ್ಡಿ ಸಮೇತ ನೀಡುವಂತೆ ಒತ್ತಡ ಹೇರಿದ್ದ. ಆದ್ರೆ ಆತನಿಗೆ ಇನ್ನೂ ಹೆಚ್ಚಿನ ಹಣ ಬೇಕಾಗಿದ್ದು ಈಗ ಈತನ ಹಣ ಮೀಟರ್ ಬಡ್ಡಿ ಸಮೇತ ನೀಡಲು ಆಗದೇ ಇದ್ದಾಗ ಹುಬ್ಬಳ್ಳಿಯ ತನ್ನ ಸ್ನೇಹಿತರೊಂದಿಗೆ ಸೇರಿ ಆತನನ್ನೇ ಕಿಡ್ನಾಪ್ ಮಾಡಿ ಹಣ ದಕ್ಕಿಸಿಕೊಳ್ಳಲು ಅಪಹರಣ ಮಾಡುತ್ತಾರೆ.

ಕೊನೆಗೆ 18 ಲಕ್ಷ ಪಡೆದು ಪರಾರಿಯಾಗುವಾಗ ಒಟ್ಟು 13 ಜನ ಆರೋಪಿಗಳು ಮುಂಡಗೋಡು ಪೊಲೀಸರ ಅಥಿತಿಯಾಗುತ್ತಾರೆ.

ಕೊನೆಗೆ ತಾವು ಮೀಟರ್ ಬಡ್ಡಿ ಹಣ ಕಟ್ಟಲಾಗದೇ ಹೀಗೆ ಕಿಡ್ನಾಪ್ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮೀಟರ್ ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ತನಿಖೆ ಪ್ರಾರಂಭಿಸಿದ್ದು ಜಮೀರ್ ಜೊತೆ ಮೀಟರ್ ಬಡ್ಡಿ ವ್ಯವಹಾರ ಮಾಡುತಿದ್ದ ನವಲೆ ಎಂಬಾತನ ಮನೆಗೆ ಪೊಲೀಸರು ದಾಳಿ ಮಾಡಿ 250 ವಿವಿಧ ಖಾತೆಯ ಜನರ ಕಾಲಿ ಚಕ್ ನನ್ನು ವಶಕ್ಕೆ ಪಡೆಯಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ