ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mundgod | ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ ಗಂಟೆ ಘಟ್ಟಲೇ ರಸ್ತೆ ಬಂದ್ !

Wild elephant sighted at Katoor in Mundgod taluk, blocking Pala-Kodambi road for over an hour. No casualties reported. Public gathered to watch.
07:33 AM Dec 14, 2025 IST | ಶುಭಸಾಗರ್
Wild elephant sighted at Katoor in Mundgod taluk, blocking Pala-Kodambi road for over an hour. No casualties reported. Public gathered to watch.

Mundgod | ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ ಗಂಟೆ ಘಟ್ಟಲೇ ರಸ್ತೆ ಬಂದ್ !

Advertisement

Mundgod news:- ಮುಂಡಗೋಡ (mundgodu) ತಾಲೂಕಿನ ಕಾತೂರ ವಲಯದ ಪಾಳಾ ಕೊಡಂಬಿ ರಸ್ತೆಯಲ್ಲಿ ಶನಿವಾರ ಕಾಡಾನೆ ಕಾಣಿಸಿಕೊಂಡಿದೆ.

ಒಂಟಿಸಲಗವೊಂದು ಈ ಭಾಗದಲ್ಲಿ ಓಡಾಡುತಿದ್ದು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ಬಂದು ನಿಂತಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಬಂದಾಗಿತ್ತು.

ಕಾತೂರು ಅರಣ್ಯ ವಲಯದಿಂದ ಬಂದ ಈ ಗಜರಾಜನು ಪಾಳಾ ಕೊಡಂಬಿ ರಸ್ತೆಯ ನಡುಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಗ್ರಾಮೀಣ ಭಾಗಗಳಿಗೆ ತೆರಳಲು ಬಂದ ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಹೋಗಿದ್ದರು. ಭಯದಿಂದ ಯಾರೂ ಮುಂದುವರೆಯದೆ ರಸ್ತೆಯಲ್ಲೇ ನಿಂತಿದ್ದರು.

Advertisement

Mundgod| ಹತ್ತು ಅಡಿ ಉದ್ದದ ಹೆಬ್ಬಾವು,ನಾಗರಹಾವು ರಕ್ಷಣೆ | ವಿಡಿಯೋ ನೋಡಿ

ಆನೆ ಮಾತ್ರ ಜನ ಅಥವಾ ವಾಹನಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು. ಈ ಅನಿರೀಕ್ಷಿತ ಅತಿಥಿಯನ್ನು ನೋಡಲು ಜಮಾಯಿಸಿದ್ದ ಜನರು, ಸಮಯ ಕಳೆಯಲು ಮೊಬೈಲ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡರು. ವಿಡಿಯೋ ಮಾಡುವವರಿಗೆ ಪೋಸ್ ನೀಡುವಂತೆ ನಿಂತಿದ್ದ ಆನೆಯು, ಯಾರಿಗೂ ತೊಂದರೆ ಮಾಡದೆ, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆಯಿತು.

ನಂತರ, ತನ್ನಷ್ಟಕ್ಕೆ ತಾನೇ ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು. ಆನೆಯು ಕಾಡಿನೊಳಗೆ ತೆರಳಿದ ಬಳಿಕವಷ್ಟೇ ಜನರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಈ ಕುತೂಹಲಕಾರಿ ಘಟನೆಯನ್ನು ಮೊಟ್ಟೆ ವ್ಯಾಪಾರಿ ಆನಂದ ಮಿರಜಕರ ಅವರು ಸೆರೆ ಹಿಡಿದಿದ್ದಾರೆ.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ದತ್ತ ಆನೆ ಹಿಂಡು!

ಮೈಸೂರು,ಹಾಸನ ಭಾಗದಿಂದ ಪ್ರತಿವರ್ಷ ಸಂಚಾರ ಮಾಡುವ ಆನೆಗಳು ಸೊರಬಾ ಮೂಲಕ ಉಳವಿ ,ಬರ್ಗಿ ಹಾದು ಬನವಾಸಿ ಮೂಲಕ ದಾಂಡೇಲಿ ಅರಣ್ಯ ಪ್ರವೇಶಿಸುತ್ತದೆ.

Shivamogga | ಮನೆ ಕಳ್ಳತನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಇನ್ನು ಸಧ್ಯ ಈಗಾಗಲೆ ಸೊರಬಾ ತಾಲೂಕಿನ ಉಳವಿ , ಜೋಯಿಡಾ ತಾಲೂಕಿನ ಪಣಸೋಲಿ , ಯಲ್ಲಾಪುರ,ಹಳಿಯಾಳ ಭಾಗದಲ್ಲಿ ಆನೆಗಳು ಬೀಡು ಬಿಟ್ಟಿವೆ.

 

Advertisement
Tags :
Dandeli forest elephantElephant on road KarnatakaElephant video MundgodHaliyal elephantJoida elephant movementKarnataka forest newsKatoor elephant sightingKatoor road blockedMundgod elephantMundgod forest newsmundgod newsSoraba elephant corridorUttara Kannada elephant movementUttara Kannada wildlifeWild elephant KarnatakaYellapur elephant news
Advertisement
Next Article
Advertisement