ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ

ಕಾರವಾರ :- ವಯಕ್ತಿಕ ಕಾರಣಕ್ಕೆ ಸರ್ಕಾರಿ ಕಚೇರಿಯಲ್ಲೇ ಉಪತಹಶಿಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಹೊಡೆದಾಡಿಕೊಂಡ ಘಟನೆ ಮುಂಡಗೋಡಿನ ತಹಶಿಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.
10:03 AM Feb 19, 2025 IST | ಶುಭಸಾಗರ್

Mundgodu: ಕಚೇರಿಯಲ್ಲೇ ಹೊಡೆದಾಡಿಕೊಂಡ ಉಪತಹಶಿಲ್ದಾರ್ ,ಕಂದಾಯ ಅಧಿಕಾರಿ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ವಯಕ್ತಿಕ ಕಾರಣಕ್ಕೆ ಸರ್ಕಾರಿ ಕಚೇರಿಯಲ್ಲೇ ಉಪತಹಶಿಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಹೊಡೆದಾಡಿಕೊಂಡ ಘಟನೆ ಮುಂಡಗೋಡಿನ(Mundgod) ತಹಶಿಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.

ಉಪ ತಹಶಿಲ್ದಾರ್ ಜಿ.ಬಿ ಭಟ್ ಹಾಗೂ ಕಂದಾಯ ಅಧಿಕಾರಿ ವಿಕ್ರಮ್ ಸಿಂಗ್ ರಜಪೂತ್ ಹೊಡೆದಾಡಿಕೊಂಡ ಅಧಿಕಾರಿಗಳು.

ಘಟನೆ ಏನು?

Advertisement

ಕಂದಾಯ ಇಲಾಖೆಯಿಂದ ಹಲವು ಬಗೆಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ. ಈ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ದಾಖಲೆಗಳ ಪರಿಶೀಲಿಸಿ ವರದಿ ಬರೆದು ತಹಸೀಲ್ದಾರ ಕಚೇರಿಗೆ ಕಳುಹಿಸಬೇಕು.

ಇದನ್ನೂ ಓದಿ:-Uttara kannda ಹುಚ್ಚುನಾಯಿ ಕಡಿತ-ಮೂವರು ಮಕ್ಕಳಿಗೆ ಗಾಯ

ಆದರೆ ಕೆಲವು ಬಾರಿ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ್ ಸರಿಯಾಗಿ ಪರಿಶೀಲನಾ ವರದಿ ನೀಡುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಉಪತಹಸೀಲ್ದಾರ್ ಜಿ.ಬಿ.ಭಟ್ ಕಂದಾಯ ನೀರಿಕ್ಷಕನಿಗೆ ಪೊನ್ ಕರೆ ಮಾಡಿ ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ? ಎಂದು ಕೇಳಿದ್ದರಂತೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಅವಾಚ್ಯವಾಗಿ ಬೈದಾಡಿಕೊಂಡಿದ್ದಾರಂತೆ , ನಂತರ ತಹಸೀಲ್ದಾರ್ ಕಚೇರಿಗೆ ಬಂದ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ಉಪತಹಶಿಲ್ದಾರ್ ಜಿ.ಬಿ.ಭಟ್‌ ಅವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ .

ಈ ವೇಳೆ ಜಿ.ಬಿ.ಭಟ್ ಸಹ ಕಂದಾಯ ನೀರಿಕ್ಷಕನಿಗೆ ಮರಳಿ ಹೊಡೆದಿದ್ದಾರೆ ಎನ್ನಲಾಗಿದೆ. ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಜಗಳ ಬಿಡಿಸಿದ್ದಾರೆ.

ಕಂದಾಯ ಇಲಾಖೆಯ ಇಬ್ಬರ ಅಧಿಕಾರಿಗಳ ಹೊಡೆದಾಟ ಮಾಡಿಕೊಂಡ ನಂತರ ಕಚೇರಿಯ ಕೆಲ ಸಿಬ್ಬಂದಿಗಳು ಇಬ್ಬರನ್ನು ಕರೆದು ರಾಜಿ ಸಂಧಾನ ಮಾಡಲು ಪ್ರಯತ್ನ ನಡೆಸಿದ್ದಾರೆ.

Astrology advertisement

ಈ ಕಂದಾಯ ನಿರೀಕ್ಷಕ ಈ ಹಿಂದೆ ಎಸ್ಸಿ ,ಎಸ್ಟಿ ಜಮೀನಿನ ಷರತ್ತುಗಳನ್ನು ಗಾಳಿಗೆ ತೂರಿ ಎಸ್ಟಿ ವ್ಯಕ್ತಿಯೊಬ್ಬರ ಜಮೀನನ್ನು ಬೇರೆವರಿಗೆ ಮಾರಾಟ ಮಾಡಲು ಸಹಕರಿಸಿದ ಆರೋಪ ಸಹ ಇವರ ಮೇಲಿದೆ.
ಇದನ್ನೂ ಓದಿ:-Mundgod: ಆನೆ ದಾಳಿ -ಮೆಕ್ಕೆ ಜೋಳ ಬೆಳೆ ನಾಶ.

ಇನ್ನು ಈ ಕುರಿತು ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಸಹ ಪ್ರತಿಕ್ರಿಯಿಸಿದ್ದು ಕಂದಾಯ ಇಲಾಖೆಯ ಸಿಬ್ಬಂದಿಗಳು ಏನೇ ಸಮಸ್ಯೆಗಳಿದ್ದರು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಬಗೆ ಹರಿಸಿಕೊಳ್ಳಬೇಕು. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಯಾರಿಗೂ ಅಧಿಕಾರವಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಎಸಿ ಹಾಗೂ ತಹಸೀಲ್ದಾರ್‌ಗೆ ಸೂಚಿಸುತ್ತೆನೆ ಎಂದಿದ್ದಾರೆ.

ವಯಕ್ತಿಕ ವಿಷಯಕ್ಕೆ ಜಗಳವಾಗಿದೆ- ತಹಶಿಲ್ದಾರ್ ಶಂಕರ್

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಂಡಗೋಡ ತಹಶಿಲ್ದಾರ ಶಂಕರ್ ,ಕಚೇರಿಯಲ್ಲಿ ಇಬ್ಬರು ಜಗಳ ಮಾಡಿಕೊಂಡಿರುವುದು ನಿಜ. ವೈಯಕ್ತಿಕ ಕಾರಣದಿಂದ ಇಬ್ಬರ ನಡುವೆ ಜಗಳ ಆಗಿದೆ
,ಕಚೇರಿಯ ಕೆಲಸದ ಕಾರಣಕ್ಕೆ ಜಗಳ ಆಗಿಲ್ಲ,ಈ ಹಿಂದೆ ಅವರ ನಡುವೆ ಏನಾಗಿತ್ತು ನಂಗೆ ಗೊತ್ತಿಲ್ಲ
,ಈ ಜಗಳ ನಡೆದಾಗ ನಾನು ಕಚೇರಿಯಲ್ಲಿ ಇರಲಿಲ್ಲ
ಹೆಚ್ಚಿನ ಮಾಹಿತಿಯನ್ನ ಪಡೆಯುತಿದ್ದೇನೆ ಎಂದು ಹೇಳಿದ್ದಾರೆ.

Advertisement
Tags :
BreakingNewsDeputyTahsildarGovernmentOfficeGovernmentOfficialsKarnatakaNewsMundgodMundgodu newsOfficeFightRevenueOfficerViralNewsWorkplaceConflict
Advertisement
Next Article
Advertisement