Mundgodu| ksrtc ಬಸ್ ಪಲ್ಟಿ ಪ್ರಾಣಾಪಾಯದಿಂದ ಪಾರಾದ 60 ಕ್ಕೂ ಹೆಚ್ಚು ಪ್ರಯಾಣಿಕರು
Mundgodu| ksrtc ಬಸ್ ಪಲ್ಟಿ ಪ್ರಾಣಾಪಾಯದಿಂದ ಪಾರಾದ 60 ಕ್ಕೂ ಹೆಚ್ಚು ಪ್ರಯಾಣಿಕರು
Mundgodu (30 october 2025) :- ಶಿರಸಿಯಿಂದ ಹುಬ್ಬಳ್ಳಿಗೆ ತೆರಳುತಿದ್ಧ ಕೆ.ಎಸ್.ಆರ್‌ಟಿ.ಸಿ ಬಸ್ ಸ್ಟೇರಿಂಗ್ ತುಂಡಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗಟಾರಕ್ಕೆ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು(mundgodu) ತಾಲೂಕಿನ ಮಳಗಿ ಬಳಿ ನಡೆದಿದೆ.
Mundgod: ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂ ದಾನ ನೀಡಿದ ವ್ಯಕ್ತಿ ಕಾರಣ ಕೇಳಿದ್ರೆ ಶಾಕ್!
ಬಸ್ ನಲ್ಲಿ ಅರವತ್ತಕ್ಕೂ ಹೆಚ್ಚು ಜನ ಪ್ರಯಾಣಿಸುತಿದ್ದರು.ಅದೃಷ್ಟವಶಾತ್ ಬಸ್ ನಲ್ಲಿ ಸಂಚರಿಸುತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇಂದು ಬೆಳಗ್ಗೆ ಶಿರಸಿಯಿಂದ ಮುಂಡಗೋಡು ಮಾರ್ಗವಾಗಿ ಹುಬ್ಬಳ್ಳಿ ತೆರಳುತಿದ್ದ ಬಸ್ ಮಳಗಿ ಬಳಿ ಎದುರಿಗೆ ಬರುತಿದ್ದ ವಾಹನಕ್ಕೆ ದಾರಿ ಮಾಡಿಕೊಟ್ಟು ಹೋಗುವಾಗ ಏಕಾ ಏಕಿ ಸ್ಟೇರಿಂಗ್ ತುಂಡಾಗಿದೆ. ಇದರಿಂದ ರಸ್ತೆಯ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗಟಾಕ್ಕೆ ಬಿದ್ದು ಪಲ್ಟಿಯಾಗಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.