For the best experience, open
https://m.kannadavani.news
on your mobile browser.
Advertisement

Murdeshwar ಕಡಲ ತೀರದಲ್ಲಿ ನಿರ್ಬಂಧ ಬೆನ್ನಲ್ಲೇ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆ

ಕಾರವಾರ  :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal)ತಾಲೂಕಿನ ವಿಶ್ವ ವಿಖ್ಯಾತ ಮುರುಡೇಶ್ವರ (Murdeshwar)ಕಡಲ ತೀರದಲ್ಲಿ CRZ ನಿಯಮ ಉಲ್ಲಂಗಿಸಿ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಗ್ರಾಮಪಂಚಾಯ್ತಿ ಅಧಿಕಾರಿಗಳು ಬೆಳಂಬೆಳಗ್ಗೆ ತೆರವು ಗೊಳಿಸುವ ಕಾರ್ಯಾಚರಣೆಗಿಳಿದಿದೆ. 
08:41 AM Dec 29, 2024 IST | ಶುಭಸಾಗರ್
murdeshwar ಕಡಲ ತೀರದಲ್ಲಿ ನಿರ್ಬಂಧ ಬೆನ್ನಲ್ಲೇ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆ

Murdeshwar news 29 December 2024:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal)ತಾಲೂಕಿನ ವಿಶ್ವ ವಿಖ್ಯಾತ ಮುರುಡೇಶ್ವರ (Murdeshwar)ಕಡಲ ತೀರದಲ್ಲಿ CRZ ನಿಯಮ ಉಲ್ಲಂಗಿಸಿ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಗ್ರಾಮಪಂಚಾಯ್ತಿ ಅಧಿಕಾರಿಗಳು ಬೆಳಂಬೆಳಗ್ಗೆ ತೆರವು ಗೊಳಿಸುವ ಕಾರ್ಯಾಚರಣೆಗಿಳಿದಿದೆ.

Advertisement

ಪೊಲೀಸರ(police) ಬಿಗಿ ಬಂದವಸ್ತ್ ನಲ್ಲಿ ಕಡಲ ತಡಿಯಲ್ಲೇ ನಿರ್ಮಾಣವಾಗಿದ್ದ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸಲಾಗುತ್ತಿದೆ.

ಇದನ್ನೂ ಓದಿ:-Murdeshwar ಕಡಲ ತೀರ ನಿರ್ಬಂಧ ತೆರವಿಗಿಗೆ ನಾನಾ ವಿಘ್ನ – ಪ್ರವಾಸಿಗರಿಗೆ ನಿರಾಸೆ.

ಕಳೆದ 19 ದಿನದಿಂದ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ಕುರಿತು ಭಟ್ಕಳ ಎಸಿ ಡಾ.ನಯನಾ ರವರು ಆದೇಶ ಮಾಡಿದ್ದರು‌ .

ಇನ್ನು ಕಡಲ ತೀರಕ್ಕೆ ನಿರ್ಬಂಧ ತೆರವು ಗೊಳಿಸಲು ಸ್ಥಳೀಯ ಜನರ ಒತ್ತಡವು ಹೆಚ್ಚಾಗಿತ್ತು. ಆದರೇ ಅಧಿಕಾರಿಗಳ ಸಮನ್ವಯ ಕೊರತೆ ಹಿನ್ನಲೆಯಲ್ಲಿ ನಿರ್ಬಂಧ ತೆರವು ಗೊಳಿಸಿರಲಿಲ್ಲ.

ಆದ್ರೆ ಇದೀಗ ಜಿಲ್ಲಾಧಿಕಾರಿ ಆದೇಶ ಬೆನ್ನಲ್ಲೇ  CRZ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರವರ ಸೂಚನೆ ಮೇಲೆ ಗ್ರಾಮಪಂಚಾಯ್ತಿ ಅಧಿಕಾರಿಗಳೇ ಬೀಚ್ ನಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದರು.

ಇದೀಗ ಗ್ರಾಮಪಂಚಾಯ್ತಿಯಿಂದಲೇ ತೆರವು ಕಾರ್ಯಾಚರಣೆ ನಡೆದಲಾಗುತಿದ್ದು 50 ಕ್ಕೂ ಹೆಚ್ಚು ಮಳಿಗೆಯನ್ನು ತೆರವು ಮಾಡಲಾಗುತ್ತಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ