For the best experience, open
https://m.kannadavani.news
on your mobile browser.
Advertisement

Murdeshwar ದುರಂತ- ಆರು ಜನ ಶಿಕ್ಷಕರ ಮೇಲೆ ಪ್ರಕರಣ ದಾಖಲು- ತಲಾ5 ಲಕ್ಷ ಪರಿಹಾರ ಘೋಷಣ

ಕಾರವಾರ:- ಮುರುಡೇಶ್ವರದಲ್ಲಿ (Murdeshwar) ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಪ್ರಕರಣ ಸಂಬಂಧಿಸಿದಂತೆ ಕೋಲಾರ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯ ಆರು ಶಿಕ್ಷಕರ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಪೊಲೀಸರು (police) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
03:21 PM Dec 11, 2024 IST | ಶುಭಸಾಗರ್
murdeshwar ದುರಂತ  ಆರು ಜನ ಶಿಕ್ಷಕರ ಮೇಲೆ ಪ್ರಕರಣ ದಾಖಲು  ತಲಾ5 ಲಕ್ಷ ಪರಿಹಾರ ಘೋಷಣ

ಕಾರವಾರ:- ಮುರುಡೇಶ್ವರದಲ್ಲಿ (Murdeshwar) ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಪ್ರಕರಣ ಸಂಬಂಧಿಸಿದಂತೆ ಕೋಲಾರ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯ ಆರು ಶಿಕ್ಷಕರ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಪೊಲೀಸರು (police) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Advertisement

ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ (40), ಶಿಕ್ಷಕರಾದ ಸುನೀಲ್ ಆರ್. (33), ಚೌಡಪ್ಪ ಎಸ್. (34), ವಿಶ್ವನಾಥ್ ಎಸ್. (27), ಶಾರದಮ್ಮ ಸಿ.ಎನ್.‌ (37), ನರೇಶ ಕೆ. (30) ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Murdeshwar ಸಮುದ್ರದಲ್ಲಿ ಕಾಣಿಯಾಗಿದ್ದ ಮೂರು ವಿದ್ಯಾರ್ಥಿನಿಯರ ಶವ ಪತ್ತೆ

ನಿನ್ನೆ ಮುರುಡೇಶ್ವರ ಸಮುದ್ರದಲ್ಲಿ ನಡೆದ ದುರ್ಘಟನೆಯಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.ನಿನ್ನೆ ವಿದ್ಯಾರ್ಥಿನಿ ಶ್ರಾವಂತಿ (15) ಮೃತದೇಹ ಸಿಕ್ಕಿದ್ದು ಇಂದು ದೀಕ್ಷಾ, ಲಾವಣ್ಯ, ವಂದನಾ ಮೃತದೇಹ ಪತ್ತೆಯಾಗಿದೆ.

ಇನ್ನು ಯಶೋಧ, ಲಿಪಿಕಾ, ವೀಕ್ಷಣಾ ರಕ್ಷಣೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಕೋಲಾರ ಮುಳುಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ 19 ಬಾಲಕಿಯರು ಹಾಗೂ 27 ಬಾಲಕರು ಸೇರಿ 46 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿತ್ತು.

ಮೋನೋ ಟ್ರಾವೆಲ್ಸ್‌ನಲ್ಲಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಕರೆತಂದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಯಾವುದೇ ಸುರಕ್ಷತಾ ನಿಯಮ ಪಾಲಿಸದೇ ಮಕ್ಕಳನ್ನು ಸಮುದ್ರದ ನೀರಿನಲ್ಲಿ ಆಡವಾಡಲು ಅವಕಾಶ ಮಾಡಿಕೊಟ್ಟಿದ್ದರು.
ನಿನ್ನೆ ನಡೆದ ದುರ್ಘಟನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

. Murdeshwar Tragedy: Case filed against six teachers, Rs 5 lakh compensation announced

ಮೃತ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಿದ ರಾಜ್ಯ ಸರ್ಕಾರ

ಶೈಕ್ಷಣಿಕ ಪ್ರವಾಸಕ್ಕೆ ( tour ) ಬಂದು ಶಿಕ್ಷಕರ ನಿರ್ಲಕ್ಷದಿಂದ ಸಾವುಕಂಡ ನಾಲ್ಕು ವಿದ್ಯಾರ್ಥಿನಿ ಕುಟುಂಬಕ್ಕೆ ತಲಾ ಐದು ಲಕ್ಷವನ್ನು ರಾಜ್ಯಸರ್ಕಾರ ಪರಿಹಾರ ಘೋಷಿಸಿದ್ದು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿ ಸಂತಾಪ ಸೂಚಿಸಿದ್ದಾರೆ.
ಇದಲ್ಲದೇ ತಕ್ಷಣದಲ್ಲೇ ಮೃತ ಕುಟುಂಬದವರ ಖಾತೆಗೆ ತಲಾ ಐದು ಲಕ್ಷ ಪರಿಹಾರ ಹಣ ಸಂದಾಯ ಮಾಡಿದ್ದಾರೆ.

ಶಿಕ್ಷರ ಅಮಾನತು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ (school) ಪಾಂಶುಪಾಲೆ ಶಶಿಕಲಾ ಹಾಗೂ ಅಥಿತಿ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ. ಇನ್ನು ಮೃತ ವಿದ್ಯಾರ್ಥಿನಿಯರ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಉಳಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ