ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Murdeshwar:ಕಡಲ ತೀರ ನಿರ್ಬಂಧ ತೆರವು ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಆಗಮನ

ಕಾರವಾರ :-ಕಳೆದ 21 ದಿನದಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ (murdeshwar) ಕಡಲತೀರಕ್ಕೆ ಇಂದು ಸಂಜೆಯಿಂದ ನಿರ್ಬಂಧ ತೆರವು ಮಾಡಲಾಗಿದೆ. 
09:39 PM Jan 01, 2025 IST | ಶುಭಸಾಗರ್

ಕಾರವಾರ :-ಕಳೆದ 21 ದಿನದಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ (murdeshwar) ಕಡಲತೀರಕ್ಕೆ ಇಂದು ಸಂಜೆಯಿಂದ ನಿರ್ಬಂಧ ತೆರವು ಮಾಡಲಾಗಿದೆ.

Advertisement

ಈ ಮೂಲಕ 21 ದಿನದ ನಿರ್ಬಂಧ ತೆರವಾದಂತಾಗಿದೆ. ಕಡಲ ತೀರದಲ್ಲಿ ಕೋಲಾರ ಮೂಲದ ಶಾಲಾ ವಿದ್ಯಾರ್ಥಿನಿಯರ ಸಾವಾದ ನಂತರ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ವಿಧಿಸಿತ್ತು.

ಇದನ್ನೂ ಓದಿ:-Uttara kannda :ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಬಸ್ ಹಲವರಿಗೆ ಗಾಯ

ಇದೀಗ ಕಡಲ ತೀರದಲ್ಲಿ ಪ್ರವಾಸಿಗರ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು, ಸಮುದ್ರಕ್ಕೆ ಇಳಿಯುವರಿಗೆ ಸ್ವಿಮಿಂಗ್ ಜೋನ್  ವ್ಯವಸ್ಥೆ ಮಾಡಲಾಗಿದೆ.

Advertisement

ಹೆಚ್ಚುವರಿಯಾಗಿ  6 ಲೈಫ್ ಗಾರ್ಡ್ಸ್ ಗಳ ನೇಮಕ ನೇಮಕ ಮಾಡಲಾಗಿದ್ದು ಲೈಫ್ ಗಾರ್ಡ್ ಗಳಿಗೆ ವಿಶೇಷ ಜೀವ ರಕ್ಷಕ ಸಾಧನ ಪೂರೈಕೆ ಮಾಡಲಾಗಿದೆ. ಇದರ ಜೊತೆಗೆ ಕಡಲ ತೀರದಲ್ಲಿ  70 ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿ ತೆರವು ಮಾಡಿದ್ದು ಕಾರು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ:-Kumta ಶಾಸಕ ದಿನಕರ್ ಶಟ್ಟಿ ಬೆಂಬಲಿಗರ ದೂರು ಮತ್ತು ನೊಂದ ಮಹಿಳೆ ಹೇಳಿದ ಬೆಚ್ಚಿ ಬೀಳಿಸುವ ಲೈಂಗಿಕ ಶೋಷಣೆ ಆರೋಪದ ಕಥೆ !

ಸುರಕ್ಷತೆಗಾಗಿ ವಾಚ್ ಟವರ್, ಸೈರನ್ ಹಾಗೂ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ನಿರ್ಬಂಧ ತೆರವು ಮಾಡಿದ ಒಂದೇ ಗಂಟೆಯಲ್ಲಿ ಬೀಚ್ ಗೆ ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ.

Advertisement
Advertisement
Next Article
Advertisement