Earthquake :ಭೂಕಂಪ ನೋವಿನ ಚಿತ್ರಗಳು: photo ನೋಡಿ
Earthquake :ಭೂಕಂಪ ನೋವಿನ ಚಿತ್ರಗಳು: photo ನೋಡಿ
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಎರಡು ದೇಶಗಳು ಭೂ ಕಂಪನಕ್ಕೆ ನಡುಗಿ ಹೋಗಿದೆ.
7.7ರಷ್ಟು ತೀವ್ರತೆಯ ಭೂಕಂಪವು ಗಗನಚುಂಬಿ ಕಟ್ಟಡಗಳನ್ನು ಧರೆಗೆ ಉರುಳಿಸಿದೆ. ಸಣ್ಣ ಪುಟ್ಟ ಕಟ್ಟಡಗಳೂ ತೂಗಾಡಿ ನೆಲಕ್ಕೆ ಉರುಳಿವೆ, ಕೆಲವು ಬಿಲ್ಡಿಂಗ್‌ಗಳು ಅರ್ಧಂಬರ್ಧ ನೆಲಕ್ಕೆ ಒರಗಿ ನಿಂತಿವೆ. ಏಕಾಏಕಿ ಎದುರಾದ ಪ್ರಕೃತಿಯ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಗಂಟೆ ಗಂಟೆಗೂ ಏರುತ್ತಲೇ ಇದೆ. ಈಗಾಗಲೇ ಮ್ಯಾನ್ಮಾರ್‌ನಲ್ಲಿ ಮೃತಪಟ್ಟವರ ಸಂಖ್ಯೆ 1000ದ ಗಡಿ ದಾಟಿದೆ.
ಎರಡು ಸಾವಿರಕ್ಕೂ ಹೆಚ್ಚು ಜನರು ಭೂಕಂಪದ ಪರಿಣಾಮಗಳಿಂದ ಗಾಯಗೊಂಡಿದ್ದಾರೆ. ಆಸ್ಪತ್ರೆಯ ಬೆಡ್‌ಗಳು ಗಾಯಾಳುಗಳಿಂದ ತುಂಬಿ ಹೋಗಿದೆ. ಗಾಯಾಳುಗಳ ಚಿಕಿತ್ಸೆಗಾಗಿ ರಕ್ತದಾನಕ್ಕೆ ತೀವ್ರ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸರಕಾರಿ ಕಟ್ಟಡಗಳು ಸೇರಿದಂತೆ ದೊಡ್ಡ ದೊಡ್ಡ ಬಿಲ್ಡಿಂಡ್‌ಗಳು ಉರುಳಿ ಬಿದ್ದಿದ್ದು, ಅವುಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರೋರನ್ನು ಹೊರೆಗೆ ತೆಗೆಯು ಪ್ರಯತ್ನಗಳು ಮುಂದುವರಿದಿವೆ.
ಮಂಡಾಲೆ ನಗರದಲ್ಲಿ ರಸ್ತೆಗಳು, ಸೇತುವೆಗಳು ಹಾಗೂ ಡ್ಯಾಂಗಳಿಗೂ ಹಾನಿಯಾಗಿದೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 33 ಅಂತಸ್ತಿನ ಸ್ಕೈಸ್ಟ್ರಾಪರ್ ಸಂಪೂರ್ಣ ನೆಲಕ್ಕೆ ಕುಸಿದಿದೆ. ಎಲ್ಲ ಕಡೆಯೂ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿವೆ. ನಾಪತ್ತೆಯಾಗಿರುವ ಪಟ್ಟಿಯೂ ದೊಡ್ಡದಿದೆ. ಅವಶೇಷಗಳ ಅಡಿಯಿಂದ ದೇಹಗಳನ್ನು ತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಬ್ಯಾಂಕಾಕ್ ನಲ್ಲೂ ಸಹ ಪ್ರಭಲ ಭೂ ಕಂಪನದಿಂದ ದೊಡ್ಡ ದೊಡ್ಡ ಕಟ್ಟಡಗಳು ದರೆಗುರಿಳಿದ್ದು ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ.
ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಭೂಕಂಪದ ನಂತರ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬ್ಯಾಂಕಾಕ್‌ನ ಬಹುಮಹಡಿ ಕಟ್ಟಡ ಕುಸಿತದಲ್ಲಿ ಕನಿಷ್ಠ 43 ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಭೂಕಂಪದಿಂದಾಗಿ ಬ್ಯಾಂಕಾಕ್‌ನಲ್ಲಿ ಕಟ್ಟಡಗಳಿಗೆ ಹಾನಿಯಾಗಿದ್ದು, ನಗರದಲ್ಲಿ ಕೆಲವು ಮೆಟ್ರೋ ಮತ್ತು ಲಘು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಸದ್ಯ ಇಂದು ಸಹ ಕಾರ್ಯಾಚರಣೆ ಮುಂದುವರೆದಿದ್ದು ಭಾರತ ಸಹಾಯಹಸ್ತ ನೀಡಿದೆ.
ಫೋಟೋ ಗಳನ್ನು ನೋಡಿ:-


