For the best experience, open
https://m.kannadavani.news
on your mobile browser.
Advertisement

Darshan :ನನಗೆ ಸ್ವಲ್ಪ ಪಾಯಿಸನ್ ಕೊಡಿ ಎಂದು ನಟ ದರ್ಶನ್ ಕೇಳಿದ್ದೇಕೆ? ವಿವರ ನೋಡಿ

Actor Darshan shocks court asking for poison during jail hearing. Why did he say this? Full details of his struggles and VIP facilities denial inside.
01:55 PM Sep 09, 2025 IST | ಶುಭಸಾಗರ್
Actor Darshan shocks court asking for poison during jail hearing. Why did he say this? Full details of his struggles and VIP facilities denial inside.
darshan  ನನಗೆ ಸ್ವಲ್ಪ ಪಾಯಿಸನ್ ಕೊಡಿ ಎಂದು ನಟ ದರ್ಶನ್ ಕೇಳಿದ್ದೇಕೆ  ವಿವರ ನೋಡಿ

Darshan :ನನಗೆ ಸ್ವಲ್ಪ ಪಾಯಿಸನ್ ಕೊಡಿ ಎಂದು ನಟ ದರ್ಶನ್ ಕೇಳಿದ್ದೇಕೆ? ವಿವರ ನೋಡಿ

ಬೆಂಗಳೂರು: ದಯಮಾಡಿ ನನಗೆ ವಿಷ (Poison) ಕೊಡಿ ಎಂದು ನಟ ದರ್ಶನ್‌ (Darshan) ನ್ಯಾಯಾಧೀಶರ (Judge) ಮುಂದೆ ಮನವಿ ಮಾಡಿದ್ದಾರೆ.

Advertisement

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪರಪ್ಪನ ಅಗ್ರಹಾರದಿಂದ ಹಾಜರಾದ ದರ್ಶನ್‌, ನನಗೆ ದಯಮಾಡಿ ವಿಷ ನೀಡಿ. ಬಿಸಿಲು ನೋಡಿ ಬಹಳ ದಿನವಾಗಿದೆ. ಬಟ್ಟೆಗಳು ವಾಸನೆ ಬರುತ್ತಿವೆ. ಫಂಗಸ್‌ನಿಂದಾಗಿ ಇಲ್ಲಿ ಬದುಕಲು ಆಗುತ್ತಿಲ್ಲ. ದಯಮಾಡಿ ನನಗೆ ವಿಷ ನೀಡುವಂತೆ ಆದೇಶಿಸಿ ಎಂದು ಮನವಿ ಮಾಡಿದ್ದು ಎಲ್ಲರಿಗೂ ಶಾಕ್ ನೀಡಿದೆ.ನ್ಯಾಯಾಧೀಶರು ಅವರಿಗೆ ಸಂತೈಸಿ ಬುದ್ದಿವಾದ ಹೇಳಿದರು.

ನನಗೆ ಸ್ವಲ್ಪ ಪಾಯಿಸನ್ ಕೊಡಿ ಎಂದು ನಟ ದರ್ಶನ್ ಕೇಳಿದ್ದೇಕೆ? ಜೈಲಿನಲ್ಲಿ ನಟ ದರ್ಶನ್ ಗೆ ಎದುರಾಗಿರುವ ಸಂಕಷ್ಟ ಏನು?

ನಟ ದರ್ಶನ್ ಹೀಗೆ ಹೇಳಲು ಕಾರಣ ಏನು ಎಂಬುದರ ಡಿಟೇಲ್ಸ್ ಇಲ್ಲಿದೆ ನೋಡಿ.

ಈ ಪ್ರಶ್ನೆಗೆ  ನಟ ದರ್ಶನ್ ಅವರೇ ಉತ್ತರ ನೀಡಿದ್ದಾರೆ. ನಟ ದರ್ಶನ್ ರನ್ನು ಜೈಲಿನ ರೂಮುನಿಂದ ಈಗ ಮೊದಲಿನಂತೆ ಹೊರಗೆ ಬಿಡುತ್ತಿಲ್ಲ. ಊಟವನ್ನು ಕೂಡ ನೇರವಾಗಿ ದರ್ಶನ್ ಇರುವ ರೂಮಿಗೆ ತಲುಪಿಸಲಾಗುತ್ತಿದೆ.

Comedy Actor:ಕಾಮಿಡಿ ಆಕ್ಟರ್ ಮೃತ ಚಂದ್ರಶೇಖರ್ ಸಿದ್ದಿಗೆ ಪತ್ನಿಯಿಂದಲೇ ಹಲ್ಲೆ ಹಳೆಯ ವಿಡಿಯೋ ರಿಲೀಸ್!

ದರ್ಶನ್ ಒಂದು ಕ್ಷಣವೂ ಜೈಲಿನ ತನ್ನ ಕೊಠಡಿ ಬಿಟ್ಟು ಹೊರಬರಲು ಅವಕಾಶ ಕೊಟ್ಟಿಲ್ಲ. ಕಳೆದ ಭಾರಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ, ತನಗೆ ಬೇಕಾದ ಎಲ್ಲ ಸೌಲಭ್ಯ ಪಡೆದಿದ್ದರು. ಜೈಲಿನಲ್ಲೇ ಸಿಗರೇಟ್ ಧಮ್ ಹೊಡೆದಿದ್ದರು. ಜೈಲಿನ ಹುಲ್ಲುಹಾಸಿನ ಮೇಲೆ ಚೇರ್ ಹಾಕಿಕೊಂಡು ಕಾಫಿ ಮಗ್ ನಲ್ಲಿ ಕಾಫಿ ಕುಡಿಯುತ್ತಿದ್ದರು. ರೌಡಿಗಳ ಜೊತೆ ಸೇರಿ ಹರಟೆ ಹೊಡೆಯುತ್ತಿದ್ದರು. ಜೈಲಿನ ತನ್ನ ಕೊಠಡಿಯಲ್ಲಿ ಎರಡು ಮೂರು ಹಾಸಿಗೆಗಳನ್ನು ಒಟ್ಟಿಗೆ ಹಾಕಿಕೊಂಡು ಆರಾಮಾಗಿ ಮಲಗಿಕೊಳ್ಳುತ್ತಿದ್ದರು.  ಜೈಲಿನಲ್ಲಿ ವಿಡಿಯೋ ಕಾಲ್ ಮೂಲಕ ಜೈಲು ಹೊರಗಿರುವವರ ಜೊತೆ ದರ್ಶನ್ ಮಾತನಾಡುತ್ತಿದ್ದರು. ಜೈಲಿನಿಂದಲೇ ಹೊರಗಿನವರಿಗೆ ಪೋನ್ ಕಾಲ್  ಕೂಡ ಮಾಡಿ ಮಾತನಾಡಿದ್ದರು.   ಜೈಲಿನ ರೂಲ್ಸ್ ಗೆ ದರ್ಶನ್ ಡೋಂಟ್ ಕೇರ್ ಎಂದಿದ್ದರು.

ಇದೆಲ್ಲವನ್ನೂ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ, ಬೆಂಗಳೂರು ಪೊಲೀಸರ ಪರ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದಾಗಿ ಸುಪ್ರೀಂಕೋರ್ಟ್ ಜೈಲು ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡಿತ್ತು. ದರ್ಶನ್ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್ ಪಡೆದಾಗಲೇ ಜೈಲು ಅಧಿಕಾರಿಗಳನ್ನು ಅಮಾನತು ಮಾಡಬೇಕಾಗಿತ್ತು. ಜೈಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಪೀಠ ತನ್ನ ಲಿಖಿತ ಆದೇಶದಲ್ಲಿ ಹೇಳಿದೆ.

Actor Darshan ಕೋಪ ಬಿಡಬೇಕು,ಒಳ್ಳೆದಾರಿಯಲ್ಲಿ ಇದ್ರೆ ಅದು ಚರಿತ್ರೆ ,ಕೆಟ್ಟ ದಾರಿ ಯಲ್ಲಿ ಇದ್ರೆ ರಕ್ತ ಚರಿತ್ರೆ- ಓಂ ಸಾಯಿಪ್ರಕಾಶ್

ಹೀಗಾಗಿ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲಿನಂತೆ ವಿಐಪಿ ಸೌಲಭ್ಯ ಸಿಗುತ್ತಿಲ್ಲ. ರಾಜಾತಿಥ್ಯ ಸಿಗುತ್ತಿಲ್ಲ. ಜೈಲಿನಲ್ಲಿ ಓರ್ವ ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಜೈಲಿನ ಖೈದಿಗಳ ಕೊಠಡಿಯಿಂದಲೂ ಹೊರಗೆ ಬರಲಾಗುತ್ತಿಲ್ಲ.

ಈಗ ರಾಜ್ಯದ ಜೈಲುಗಳ ಎಡಿಜಿಪಿ ಆಗಿ ಬಿ.ದಯಾನಂದ್ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ಬಿ.ದಯಾನಂದ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದಾಗಲೇ, ರೇಣುಕಾಸ್ವಾಮಿ ಕೊಲೆ ಕೇಸ್ ಬೆಳಕಿಗೆ ಬಂದಿತ್ತು. ಮುಚ್ಚಿ ಹೋಗಬಹುದಾಗಿದ್ದ ಅಪರಿಚಿತ ಶವದ ಕೇಸ್  ಅನ್ನು ಪೊಲೀಸರು ತನಿಖೆ ಮಾಡಿ, ನಟ ದರ್ಶನ್ ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆ ತರಲು ಕೂಡ ಬಿ.ದಯಾನಂದ್ ಅವರು ಎಸಿಪಿ ಚಂದನ್ ಗೆ ಕೊಟ್ಟಿದ್ದ ಅನುಮತಿಯೇ ಕಾರಣ. ಈಗ ಅದೇ ಬಿ.ದಯಾನಂದ್, ರಾಜ್ಯದ ಜೈಲುಗಳ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಜೈಲಿನಲ್ಲಿ ನಟ ದರ್ಶನ್ ಗೆ ಮೊದಲಿನಿಂದ ಯಾವುದೇ ವಿಐಪಿ ಸೌಲಭ್ಯವೂ ಸಿಗದಂತೆ ಎಲ್ಲವನ್ನೂ ಬಂದ್ ಮಾಡಿದ್ದಾರೆ. ನಟ ದರ್ಶನ್ ಗೆ ಈಗ ಅಸಲಿ ಜೈಲು ವಾಸದ ಅನುಭವ ಆಗುವಂತೆ ಮಾಡಿದ್ದಾರೆ.

ಹೀಗಾಗಿ ಈಗ ದರ್ಶನ್ ಜೈಲಿನ ಕೊಠಡಿಯಿಂದ ಹೊರಗೆ ಬರಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ. ನಟ ದರ್ಶನ್ ಗೆ ಈಗ ಅಸಲಿ ಜೈಲು ವಾಸದ ಅನುಭವ ಆಗಿದ್ದರಿಂದ ಜೈಲಿನ ಕೊಠಡಿಯಲ್ಲಿ ನರಳಾಡುವಂತಾಗಿದೆ.

ಹಾಗಾಗಿ ಜಡ್ಜ್ ಗಮನಕ್ಕೆ ತರಲು ಎಮೋಷನಲ್ ಮಾತುಗಳನ್ನು ಆಡಿ ಪಾಯಿಸನ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೇ ನಮ್ಮ ದೇಶದಲ್ಲಿ ಖೈದಿಗಳು ಪಾಯಿಸನ್ ಕೇಳಿದ ತಕ್ಷಣ ಕೊಟ್ಟುಬಿಡಲು ಆಗಲ್ಲ.

ಕ್ಲಿನಿಕಲ್ ಡೆತ್ ಸನ್ನಿವೇಶದಲ್ಲಿ ಇರುವವರಿಗೆ ಮಾತ್ರವೇ ದಯಾಮರಣ ಕೊಡಬಹುದು ಎಂದು ಸುಪ್ರೀಂಕೋರ್ಟ್ ತನ್ನ ಹಿಂದಿನ ತೀರ್ಪಿನಲ್ಲಿ ಹೇಳಿದೆ.

ಜೈಲಿನ ಖೈದಿಗಳು ಕೋರ್ಟ್ ತೀರ್ಪು ನೀಡುವವರೆಗೂ ಜೈಲು ವಾಸವನ್ನು ಮುಂದುವರಿಸಲೇಬೇಕು.

ಜೈಲಿನಲ್ಲಿ ಈಗ ದರ್ಶನ್ ಗೆ ಕೊಠಡಿಯಿಂದ ಹೊರಗೆ ಓಡಾಡಲು ಅವಕಾಶ ಕೊಡಬೇಕೇ ಬೇಡವೇ ಎಂಬ ಬಗ್ಗೆ ಕೋರ್ಟ್ ಆದೇಶ ನೀಡಬೇಕಾಗಿದೆ.

ದರ್ಶನ್ , ಜೈಲಿನಲ್ಲಿ ತನಗೆ ತಲೆ ದಿಂಬು, ಹಾಸಿಗೆ, ಬೆಡ್ ಶೀಟ್ ನೀಡಬೇಕೆಂದು  ಕೋರ್ಟ್ ಗೆ ಮನವಿ ಮಾಡಿದ್ದಾರೆ.ಜೊತೆಗೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೂಡ ಜೈಲು ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆಯೂ ಇಂದು ಸಂಜೆ ಆದೇಶ ಬರುವ ನಿರೀಕ್ಷೆ ಇದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ