For the best experience, open
https://m.kannadavani.news
on your mobile browser.
Advertisement

AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್|ಇಂದು ಸಹ ತನಿಖೆ ಚುರುಕು

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer MD) ಗೆ ಮತ್ತೆ SIT ಡ್ರಿಲ್ ಮಾಡಿದೆ.
03:18 PM Aug 25, 2025 IST | ಶುಭಸಾಗರ್
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer MD) ಗೆ ಮತ್ತೆ SIT ಡ್ರಿಲ್ ಮಾಡಿದೆ.
ai ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್ ಇಂದು ಸಹ ತನಿಖೆ ಚುರುಕು

AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್|ಇಂದು ಸಹ ತನಿಖೆ ಚುರುಕು

Advertisement

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer MD) ಗೆ ಮತ್ತೆ SIT ಡ್ರಿಲ್ ಮಾಡಿದೆ.

ಸೋಮವಾರ (ಆ.25) ಮತ್ತೆ ಬೆಳ್ತಂಗಡಿ ಠಾಣೆಗೆ (Belthangady Police Station) ವಿಚಾರಣೆಗೆ ಹಾಜರಾದ ಜಮೀರ್ SIT ಪ್ರಶ್ನೆಗಳ ಸುರಿಮಳೆಗೆ ಉತ್ತರ ನೀಡಲಾಗದೇ ತಬ್ಬಿಬ್ಬಾಗಿದ್ದಾನೆ. (AI Video Proof Delay)

ಬೆಳ್ತಂಗಡಿ ಠಾಣೆಯಲ್ಲಿ ಸಮೀರ್ ನನ್ನು ಪಿಎಸ್‌ಐ ಸುಬ್ಬಾಪುರ್ ಮಠ್ ಉಪಸ್ಥಿತಿಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್‌ ನಾಗೇಶ್ ಕದ್ರಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ ಸೃಷ್ಟಿಯಲು ಯತ್ನಿಸಿದ್ದಾನೆ ಎಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಎರಡೆರಡು ನೊಟೀಸ್ ಕೊಟ್ಟಿದ್ದರು.

ಇದಾದ ಬಳಿಕ ಭಾನುವಾರ (ಆ.24) ಬೆಳ್ತಂಗಡಿ ಠಾಣೆಯಲ್ಲಿ ನಾಲ್ವರು ವಕೀಲರ ಜೊತೆ ಸಮೀರ್ ಹಾಜರಾಗಿದ್ದ. ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಅಧಿಕಾರಿಗಳು 4:30 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ದೂತನ ಬಂಡವಾಳ ಬಯಲು.

ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ.

 ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ಭೀಮ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಎನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

ಸ್ಕ್ರಿಫ್ಟ್ ಓದಿಸದ SIT

ಬೆಳ್ತಂಗಡಿ ಠಾಣೆಗೆ ಹಾಜುರಾಗುತ್ತಿರುವ ಸಮೀರ್

ಇನ್ನು ಆತ ಯೂಟ್ಯೂಬ್ ನಲ್ಲಿ ಹಾಕಿದ್ದ ಬುರುಡೆ ಕಥೆಯ ಸ್ಕ್ರೀಫ್ಟ್ ನನ್ನು ಮೂರು ಸಾರಿ ಓದಿಸಿ ದಾಖಲುಮಾಡಿಕೊಳ್ಳಲಾಯಿತು. ಇನ್ನು ಆತನ ದ್ವನಿ ಯ್ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ ದ್ವನಿಗೆ ಹೊಂದಲಿದೆಯೇ ಎಂಬುದಕ್ಕೆ ಈತನ ದ್ವನಿ ಮಾದರಿಯನ್ನು FSL ಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ:-Mangalore :ನಾನು ಭಾರತವನ್ನು ದ್ವೇಶಿಸುತ್ತೇನೆ ,ಕೊಳಕು ಹಿಂದುಗಳು ನನ್ನ ಹಿಂದೆ ಬಿದ್ದೀದ್ದಾರೆ ಎಂದು ವೈದ್ಯೆ X ನಲ್ಲಿ ಪೋಸ್ಟ್!

ಇನ್ನು AI ನಲ್ಲಿ ಕ್ರಿಯೇಟ್ ಮಾಡಿದ ಆಪ್ ಬಗ್ಗೆ ಕೇಳಿದ ಪ್ರಶ್ನೆಗೆ ಈತ ಉತ್ತರ ನೀಡಲು ಪಡಪಡಾಯಿಸಿದ್ದಾನೆ. AI ವಿಡಿಯೋದಲ್ಲಿ ಹೇಳಿದ ಸಾಕ್ಷಿಗಳನ್ನು ನೀಡುವಂತೆ SIT ಕೇಳಿದ್ದು ಸಾಕ್ಷಿಗಳಿಲ್ಲದೇ ತಡಬಡಿಸಿದ್ದಾನೆ.

ಇಂದು ಈತನ ಸುದೀರ್ಘ ತನಿಖೆ ನಡೆದಿದ್ದು ತನಿಖೆ ನಂತರ ಈತನ ಅಸಲಿಯತ್ತು ಹೊರಬರಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ