Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?
Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?
Ankola gode ganapathi :- ಗಣೇಶ ಚತುರ್ಥಿಯಂದು ವಿಘ್ನ ನಿವಾರಕ ಗಣಪತಿಯನ್ನು ಪೂಜೆ ಗೈಯುವುದು ಸಂಪ್ರದಾಯ.ಆದರೇ ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲದ ತಹಸೀಲ್ದಾರ ಕಚೇರಿಯ ಮಣ್ಣಿನ ಗಣಪ ಮಾತ್ರ ನೂರಾರು ವರ್ಷಗಳಿಂದ ಗೋಡೆಯಲ್ಲಿಯೇ ವಿರಾಜಮಾನನಾಗಿ ' ಗೋಡೆ ಗಣಪ ' ಎಂದು ಖ್ಯಾತನಾಗಿದ್ದಾನೆ.
ನೂರಾರು ವರ್ಷಗಳ ಹಿಂದೆ ಬ್ರಿಟೀಷರು ತಾಲೂಕು ದಂಡಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದರು. ಮಣ್ಣು, ಸುಣ್ಣ, ಬೆಲ್ಲವನ್ನು ಮಿಶ್ರಣ ಮಾಡಿ ಅದನ್ನು ಹದಗೊಳಿಸಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ತಾಲೂಕು ದಂಡಾಧಿಕಾರಿಗಳ ಕಚೇರಿಯನ್ನು ನಿರ್ಮಾಣ ಮಾಡುವುದಕ್ಕಾಗಿ ಗೋಡೆಯನ್ನು ನಿರ್ಮಾಣ ಮಾಡಿದ ನಂತರ ಅದು ಉದುರಿ ಬೀಳುತ್ತಿತ್ತು. ಎಷ್ಟೇ ಪ್ರಯತ್ನಿಸಿದ್ದರೂ ಗೋಡೆ ಮೇಲೇಳುತ್ತಿರಲಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರು ಮತ್ತು ಬ್ರಿಟಿಷ್ ಅಧಿಕಾರಿಗಳು ಗೊಂದಲಕ್ಕೀಡಾದರು.
ಅರ್ಧದಲ್ಲಿಯೇ ಸ್ಥಗಿತಗೊಂಡ ಗೋಡೆಯ ಮೇಲೆಯೇ ಕಟ್ಟಡ ಕಾರ್ಮಿಕರು ಮಣ್ಣಿನಿಂದ ಗಣಪನ ಮೂರ್ತಿಯನ್ನು ನಿರ್ಮಿಸಿ,ಕಟ್ಟಡ ಪೂರ್ಣಗೊಳಿಸುವಂತೆ ಬೇಡಿಕೊಂಡರು. ನಂತರ ಕಟ್ಟಡದ ಕೊನೆಯವರೆಗೂ ಯಾವುದೇ ಅಡೆತಡೆಯಾಗದೇ ಬ್ರಿಟೀಷರ ಯೋಜನೆಯಂತೆ ಕಟ್ಟಡವು ಪೂರ್ಣಗೊಂಡಿತು.
ಅಂದಿನಿಂದ ಇಂದಿನ ವರೆಗೆ ಹಿಂದೆ ನಿರ್ಮಿಸಿದ ತಹಶಿಲ್ದಾರ್ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತ ಬಂದಿವೆ. ಪ್ರತಿ ಸಂಕಷ್ಟಿಯಂದು ಇಲ್ಲಿಪೂಜೆ ನಡೆಯುತ್ತದೆ. ಹಾಗೂ ಗಣೇಶ ಚತುರ್ಥಿಯ ನಿಮಿತ್ತ ಐದು ದಿನಗಳವರೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ತಹಸೀಲ್ದಾರ್ ಕಚೇರಿಯ ಆವರಣದಲ್ಲಿಯೇ ಹಿಂದೆ ಪೊಲೀಸ್ ಠಾಣೆ ಇದ್ದಿದ್ದರಿಂದ ಅವರು ಕೂಡ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದಾರೆ.
Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್