Ankola: ಫಕ್ ಯು ಪಾಕಿಸ್ತಾನ್- ರಸ್ತೆಗೆ ಬಿತ್ತಿ ಪತ್ರ ಅಂಟಿಸಿ ಸರ್ಕಾರಿ ನೌಕರನ ಅಕ್ರೋಶ
Ankola: ಫಕ್ ಯು ಪಾಕಿಸ್ತಾನ್- ರಸ್ತೆಗೆ ಬಿತ್ತಿ ಪತ್ರ ಅಂಟಿಸಿ ಸರ್ಕಾರಿ ನೌಕರನ ಅಕ್ರೋಶ
ಕಾರವಾರ:-ಕಾಶ್ಮೀರ ದಲ್ಲಿ ಉಗ್ರರಿಂದ ಪ್ರವಾಸಿಗರ ನರಮೇಧ ನಡೆಯುತಿದ್ದಂತೆ ದೇಶಾಧ್ಯಾಂತ ಅಕ್ರೋಶ ಮುಗಿಲು ಮುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ(Ankola)ದಲ್ಲಿ ಸರ್ಕಾರಿ ನೌಕರನೊಬ್ಬ ಪಾಕಿಸ್ತಾನದ ವಿರೋಧಿ ಬಿತ್ತಿ ಚಿತ್ರಗಳ್ನು ಮುಖ್ಯ ರಸ್ತೆಗೆ ಅಂಟಿಸಿ ಅಕ್ರೋಶ ಹೊರಹಾಕಿದ್ದಾರೆ.

ಅಂಕೋಲಾ ಸರ್ವೆ ಇಲಾಖೆಯ ರಾಘವ ಮಂಜುನಾಥ ನಾಯಕ ಬಿತ್ತಿ ಚಿತ್ರ ಅಂಟಿಸಿದ ವ್ಯಕ್ತಿಆಗಿದ್ದು ,ಪಾಕಿಸ್ತಾನದ (pakisthan) ಭಾವುಟ ಹಾಗೂ ಮಿಟ್ಟಿ ಮೇ ಮಿಲಾಯಿಂಗೆ ತುಮೆ, ಫಕ್ ಯು ಪಾಕಿಸ್ತಾನ ಎಂಬ ಬಿತ್ತಿ ಚಿತ್ರ ಅಂಟಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:-Ankola:- ಪತ್ರಕರ್ತರನ್ನ ಪಕ್ಷವಾರು ಬೇರ್ಪಡಿಸಿತೇ ಜಿಲ್ಲಾ ಕಾಂಗ್ರೆಸ್ ! ಪತ್ರಕರ್ತರಿಗೂ ಬಂತು ಪಕ್ಷ ,ಜಾತಿ !
ಇನ್ನು ಈ ಘಟನೆ ನಡೆಯುತಿದ್ದಂತೆ ಅಂಕೋಲ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದು ಈ ವೇಳೆ ತಾನೇ ರಸ್ತೆಯಲ್ಲಿ ಅಂಟಿಸಿರುವುದಾಗಿ ಒಪ್ಪಿಕೊಂಡ ಇವರು ನಾನು ಸರ್ಕಾರಿ ನೌಕರನಾದರು ನಾನೊಬ್ಬ ಭಾರತೀಯ ದೇಶ ವಿರೋಧಿ ಕ್ರೂರತೆಗೆ ನಾನು ಕಣ್ಣು ಮುಚ್ಚಲಾರೆ ಎಂದು ಪೊಲೀಸರಿಗೆ ಪತ್ರ ಬರೆದುಕೊಟ್ಟಿದ್ದಾರೆ.
