Banavasi: ಕದಂಬೋತ್ಸವವ -2025 ಹೈಲೆಟ್ಸ್ ಇಲ್ಲಿದೆ.
Sirsi ಕದಂಬೋತ್ಸವವ -2025 ಹೈಲೆಟ್ಸ್ ಇಲ್ಲಿದೆ.
ಬನವಾಸಿಯಲ್ಲಿ ಸಾಹಿತಿ ವಿವೇಕ್ ರೈಗೆ ಪಂಪ ಪ್ರಶಸ್ತಿ ಪ್ರದಾನ
ಕಾರವಾರ :- ರಾಜ್ಯದ ಪ್ರತಿಷ್ಟಿತ 2025 ನೇ ಸಾಲಿನ ಪಂಪ ಪ್ರಶಸ್ತಿಯನ್ನು (Pampa Award) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಸಾಹಿತಿ ,ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿವಿವೇಕ್ ರೈ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ನೀಡಿ ಗೌರವಿಸಿದರು.
ಬನವಾಸಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕದಂಬೋತ್ಸವ ಕಾರ್ಯಕ್ರಮ ನೆರವೇರುತಿದ್ದು ಶನಿವಾರಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ್ ಸೈಲ್, ಅರಬೈಲ್ ಶಿವರಾಂ ಹೆಬ್ಬಾರ್, ಭಿಮಣ್ಣಾ ನಾಯ್ಕ್ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಇನ್ನು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ಎ ವಿವೇಕ ರವರು ಮಾತನಾಡಿ ಬಹು ಧರ್ಮವನ್ನು ಪ್ರೀತಿಸಬೇಕು ಪಂಪ ಹೇಳಿದ್ದು ಇದನ್ನೇ ಬನವಾಸಿ ಅಂತಹ ಕ್ಷೇತ್ರಕ್ಕೆ ಸೇರಿದೆ. ಪಂಪನನ್ನು ಪ್ರೀತಿಸುವ ನನಗೆ ಪಂಪನ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ.ಜಾತಿ ಕಾರಣಕ್ಕೆ ಈ ಪ್ರಶಸ್ತಿ ನೀಡಿಲ್ಲ.ಪಂಪನ ನೆನಪು ಹಸಿರಾಗಿಸಲು ಕ್ರಮವಾಗಬೇಕು,ಪಂಪ ಭವನ ಬನವಾಸಿಯಲ್ಲಿ ನಿರ್ಮಾಣವಾಗಬೇಕು,ಅಲ್ಲಿ ಪಂಪನ ಕುರಿತಾದ ನೆನಪುಗಳ ಬುತ್ತಿಯನ್ನ ಇಡಬೇಕು.ಈ ರೀತಿಯ ಕ್ರಮಗಳು ಬೇರೆ ರಾಜ್ಯದಲ್ಲಿವೆ,ಅದೇ ರೀತಿ ಇಲ್ಲೂ ಕೂಡ ಆಗಬೇಕು,ಈ ಪ್ರಶಸ್ತಿ ಬಂದಿದ್ದು ನನ್ನ ಜೀವಮಾನದ ಸಂತಸ ತಂದಿದೆ.ಅದನ್ನೂ ಕೂಡ ಬನವಾಸಿಯಲ್ಲೇ ಪಡೆದಿದ್ದು ವಿಶೇಷ.ಬನವಾಸಿಯ ಕಂಪು ಎಲ್ಲೆಡೆ ಪಸರಿಸಲಿ,ಇದೊಂದು ವೈವಿಧ್ಯಮಯ ತಾಣ.ಮಾವಿನ ಮರ ,ಮಲ್ಲಿಗೆ ಮರ ಗಳನ್ನು ಇಲ್ಲಿ ನೆಟ್ಟು ಬೆಳಸಬೇಕು,ಇಲ್ಲಿ ಸಮ ಧರ್ಮ, ಸಮ ಚಿತ್ತ ಭಾವವಿದೆ,ಎಲ್ಲಾ ಧರ್ಮದ ಕುರುಹುಗಳು ಕೂಡ ಇವೆ.ಇಲ್ಲಿಗೆ ಬಂದು ಪ್ರಶಸ್ತಿ ಸ್ವೀಕರಿಸಿದ್ದು ಅತೀವ ಸಂತಸ ತಂದಿದೆ ಎಂದರು.
ಇದನ್ನೂ ಓದಿ:-Sirsi :ಶಿರಸಿ ಸ್ಥಳೀಯ ಪತ್ರಿಕೆಯ ವರದಿಗಾರನ ಬೂಟು ಬಿಚ್ಚಿಸಿದ ಎಸ್.ಪಿ ಎಂ ನಾರಾಯಣ್ ! ನೀತಿ ಪಾಠ? ಏನದು?
ಬನವಾಸಿಯಲ್ಲಿ ಪಂಪ ಭವನ ನಿರ್ಮಾಣಕ್ಕೆ ಬದ್ಧ: ಸಚಿವ ಶಿವರಾಜ ತಂಗಡಗಿ
ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲು ಜಿಲ್ಲಾಡಳಿತ ಪ್ರಸ್ತಾವ ಕಳುಹಿಸಿದರೆ ಹಂತ ಹಂತವಾಗಿ ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಇದನ್ನೂ ಓದಿ:-Sirsi :ನೇಹಾ ಹೀರೇಮಠ್ ಹತ್ಯೆ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ.
ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಆರಂಭವಾದ ರಾಜ್ಯದ ಪ್ರಸಿದ್ಧ ಕದಂಬೋತ್ಸವ ಉದ್ಘಾಟಿಸಿ ಹಾಗೂ ಪಂಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮನುಷ್ಯ ಜಾತಿ ತಾನೊಂದೇ ವಲಂ ಎಂದು ಸಮಾಜ ಕಟ್ಟಿರುವ ಪಂಪನನ್ನು ಶಾಶ್ವತವಾಗಿಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಂಪ ಭವನ ನಿರ್ಮಿಸಲು ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿ ಕ್ರಮವಹಿಸಲಾಗುವುದು ಎಂದರು.
ಬನವಾಸಿಯಲ್ಲಿ ಪಂಪ ವನ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಅದರ ಸಮಗ್ರ ಅಭಿವೃದ್ಧಿಗೆ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ನೀಡಲಾಗುವುದು. ಇಲ್ಲಿನ ಹಿಂದುಳಿದ ವರ್ಗದ ವಸತಿ ನಿಲಯಕ್ಕೆ ಹಣ ನೀಡಲಾಗುವುದು' ಎಂದರು.
ಬನವಾಸಿಯಲ್ಲಿ ಕದಂಬೋತ್ಸವ ಆಚರಣೆ ಮಾಡುವುದು ಔಚಿತ್ಯವಾಗಿದೆ. ಈ ಪರಂಪರೆಯನ್ನು ಮುಂದುವರೆಸಲಾಗುವುದು ಕರಾವಳಿ ಉತ್ಸವಕ್ಕೆ ಐದು ಕೋಟಿ ಹಣ ನೀಡಲಾಗುವುದು ಎಂದರು.
ರಾಜ್ಯದ ಎಲ್ಲ ಸಮುದಾಯದಲ್ಲೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಡವರಿದ್ದು, ಎಲ್ಲರಿಗೂ ಸರ್ಕಾರದ ಯೋಜನೆಗಳು ಸಿಗಬೇಕೆಂದು ಜಾತಿ ಗಣತಿ ವರದಿ ಜಾರಿ ಮಾಡಲಾಗುತ್ತಿದೆ. ಆದರೆ, ಬಿಜೆಪಿಯವರಿಗೆ ಬಡವರ ಬಗ್ಗೆ ಚಿಂತೆ ಇಲ್ಲ,ರಾಜ್ಯದ ಎಲ್ಲ ಸಮುದಾಯದಲ್ಲೂ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಡವರಿದ್ದು, ಎಲ್ಲರಿಗೂ ಸರ್ಕಾರದ ಯೋಜನೆಗಳು ಸಿಗಬೇಕೆಂದು ಜಾತಿ ಗಣತಿ ವರದಿ ಜಾರಿ ಮಾಡಲಾಗುತ್ತಿದೆ. ಆದರೆ, ಬಿಜೆಪಿಯವರಿಗೆ ಬಡವರ ಬಗ್ಗೆ ಚಿಂತೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.