ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhadravathi: ಪಾಕಿಸ್ತಾನದ ಪರ ಘೋಷಣೆ ಕೂಗಿದ ಮತಾಂಧರು! 

Bhadravathi news: Pakistan Zindabad slogans during Eid Milad procession go viral. Police register case, investigation underway in Shivamogga district.
02:22 PM Sep 09, 2025 IST | ಶುಭಸಾಗರ್
Bhadravathi news: Pakistan Zindabad slogans during Eid Milad procession go viral. Police register case, investigation underway in Shivamogga district.

Bhadravathi: ಪಾಕಿಸ್ತಾನದ ಪರ ಘೋಷಣೆ ಕೂಗಿದ ಮತಾಂಧರು!

Advertisement

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ (Bhadravathi) ನಡೆದ ಈದ್ ಮಿಲಾದ್ ಮೆರವಣಿಗೆ (Eid Procession) ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಸದ್ದು ಮಾಡುತ್ತಿದೆ.

ಮಂಡ್ಯದಲ್ಲಿ ಗಲಾಟೆ ನಡೆದ ಬೆನ್ನಲ್ಲೇ ಇದೀಗ ಈ ವಿಡಿಯೋ ವೈರಲ್ ಆಗಿದ್ದು ಸೂಕ್ಷ್ಮ ಜಿಲ್ಲೆ ಶಿವಮೊಗ್ಗದಲ್ಲಿ ಭೂಧಿ ಮುಚ್ಚಿದ ಕೆಂಡದಂತಾಗಿದೆ.

Advertisement

Shivamogga: ಇಂದಿನ ಜೋಗದ ಸಿರಿ ಹೇಗಿದೆ ?ವಿಡಿಯೋ ನೋಡಿ

ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಯುವಕರು ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ್ದಾರೆ.

ವಿಡಿಯೋ ವೈರಲ್ ಆಗುತಿದ್ದಂತೆ ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಸತ್ಯಾಸತ್ಯತೆ ಜೊತೆಗೆ ಘೋಷಣೆ ಕೂಗಿದವರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.

ಶಿವಮೊಗ್ಗ ಎಸ್ .ಪಿ ಏನಂದ್ರು.

Bhadravathi news: Pakistan Zindabad slogans during Eid Milad procession go viral. Police register case, investigation underway in Shivamogga district.

ಈ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಇಂದು ಬೆಳಗ್ಗೆಯಿಂದ 12 ಸೆಕೆಂಡ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ್ದೇವೆ ಎಂದರು.

ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗಾಗಲೇ ಕಳುಹಿಸಲಾಗಿದೆ. ಯಾವಾಗ, ಯಾರು, ಎಲ್ಲಿ ವಿಡಿಯೋ ಮಾಡಿದ್ದಾರೆ. ಅದರ ಪರಿಶೀಲನೆ ಆಗಲಿದೆ. ಪ್ರಕರಣದ ತನಿಖೆಗಾಗಿ 3 ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 3 ಟೀಂ ರಚಿಸಿದ್ದೇವೆ. ವಿಡಿಯೋದಲ್ಲಿ ಇರುವವರನ್ನು ಗುರುತಿಸುತ್ತಿದ್ದೇವೆ. ವಿಡಿಯೋದಲ್ಲಿರುವವರ ಶೋಧಕ್ಕಾಗಿಯೇ ಒಂದು  ಟೀಮ್ ಕೆಲಸ ಮಾಡಲಿದೆ. ಈದ್ ಮೆರವಣಿಗೆ ವೇಳೆ ವಿಡಿಯೋ ರೆಕಾರ್ಡಿಂಗ್ ಸಹ ಮಾಡಲಾಗಿತ್ತು. ಎಲ್ಲವನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

Advertisement
Tags :
Bhadravathi newsBhadravathi viral videoCommunal slogan BhadravathiEid Milad processionKarnataka crime newsKarnataka viral newsNew Town police stationPakistan Zindabad sloganShivamogga newsShivamogga SP GK Mithun Kumar
Advertisement
Next Article
Advertisement