ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal| ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಆರೋಪಿ ಬಂಧನ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(Bhatkal) ಕುಕ್ಕನೀರ ವೆಂಕಟಾಪುರ ಹೊಳೆಯಲ್ಲಿ ಗರ್ಭ ಧರಿಸಿದ ಹಸುವನ್ನು ಕೊಂದು ಬ್ರೂಣವನ್ನು ಎಸೆದುಹೋದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಭಟ್ಕಳ ಪೊಲೀಸರು
10:57 PM Apr 19, 2025 IST | ಶುಭಸಾಗರ್

Bhatkal| ಗರ್ಭ ಧರಿಸಿದ ಗೋಹತ್ಯೆ ಪ್ರಕರಣ ಆರೋಪಿ ಬಂಧನ.

Advertisement

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(Bhatkal) ಕುಕ್ಕನೀರ ವೆಂಕಟಾಪುರ ಹೊಳೆಯಲ್ಲಿ ಗರ್ಭ ಧರಿಸಿದ ಹಸುವನ್ನು ಕೊಂದು ಬ್ರೂಣವನ್ನು ಎಸೆದುಹೋದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳ ಮೂಲದ ಇಬ್ರಾಹಿಂ ಮೊಹ್ಮದ್ ಹುವಾ (45) ಬಂಧಿತ ಆರೋಪಿಯಾಗಿದ್ದಾನೆ. ಕುಕ್ಕನೀರ ವೆಂಕಟಾಪುರ ಹೊಳೆಯ ದಂಡೆಯಲ್ಲಿ ಎರಡು ದಿನದ ಹಿಂದೆ ಕರುವಿನ ಬ್ರೂಣವಿರು  ಚೀಲ ಪತ್ತೆಯಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಹಲವು ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಇಂದು ಸಂಜೆ ಬಂಧಿಸಲಾಗಿದೆ.

ಘಟನೆ ಏನಾಗಿತ್ತು?

Advertisement

ಘಟನಾ ಸ್ಥಳದಲ್ಲಿ ಪೊಲೀಸರ ತಂಡ

ಉತ್ತರ ಕನ್ನಡ (uttara kannda) ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸು ಹತ್ಯೆ ಮಾಡಿದ ಘಟನೆ ಮಾಸುವ ಮುಂಚೆಯೇ ಗೋ ಹಂತಕರು ಇದೀಗ ಭಟ್ಕಳದಲ್ಲೂ ಅದೇ ಮಾದರಿಯ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು.

Bhatkal| ಗರ್ಭಿಣಿ ಹಸು ಹ** ಮಾಡಿ ಕರುವಿನ ಬ್ರೂಣ ಎಸೆದ ಕಿರಾತಕರು

 ಭಟ್ಕಳ ತಾಲೂಕಿನ  ಹೆಬ್ಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಕುಕನೀರ್‌ ವೆಂಕಟಾಪುರ ಹೊಳೆಯ ದಂಡೆ ಮೇಲೆ ಗರ್ಭಿಣಿ ಹಸುವನ್ನು ಹತ್ಯೆ ಗೈದು ಗೋ ಭಕ್ಷಕರು ಅದರ  ಅಂಗಾಂಗ ಹಾಗೂ ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ಎಸೆದು ಹೋಗಿರುವುದು ಪತ್ತೆಯಾಗಿತ್ತು.

ಇದನ್ನೂ ಓದಿ:-Bhatkal :ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಆತ ಪಡೆದಿದ್ದ ಹಣವೆಷ್ಟು ಗೊತ್ತಾ?

ಯಾರೋ ಗೋ ಭಕ್ಷಕರು ಜಾನುವಾರುವನ್ನು ಹಿಂಸಾತ್ಮವಾಗಿ ವಧೆ ಮಾಡಿ ಅದರ ಅಂಗಭಾಗಗಳನ್ನು ಮತ್ತು ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು  ವೆಂಕಟಾಪುರ ಕುಕ್ಕನೀರ ಹೊಳೆಯ ದಂಡೆ ಮೇಲೆ ಗೋಣಿ ಚೀಲದಲ್ಲಿ  ಸುತ್ತಿ ಎಸೆದು ಹೋಗಿದ್ದರು.

 

 ಬೀದಿ ನಾಯಿಯೊಂದು ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದೆ.ಬಳಿಕ ವಿಷಯ ತಿಳಿದು ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎಸ್.ಪಿ ಎಂ ನಾರಾಯಣ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೃತ್ಯ ನೆಡೆಸಿದವರನ್ನು ಬಂಧಿಸಲು ತಂಡ ರಚಿಸಿದ್ದರು. ಇದೀಗ ಘಟನೆ ನಡೆದು ಎರಡು ದಿನದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
BhatkalBhatkal newsCowcow deathKarnatakapolice arrest
Advertisement
Next Article
Advertisement