ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal|ಒಂದು ವಿಡಿಯೋ ದಿಂದ ಬಯಲಾಯ್ತು ಭಟ್ಕಳ ಬುರುಡೆ ರಹಸ್ಯ| ಅರಣ್ಯಾಧೀಕಾರಿ ಇಂದ ದೂರು ದಾಖಲು

ಕಾರವಾರ/Bhatkal news :- ಭಟ್ಕಳ ಅರಣ್ಯದಲ್ಲಿ ಗೋವುಗಳ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.
11:20 PM Sep 11, 2025 IST | ಶುಭಸಾಗರ್
ಕಾರವಾರ/Bhatkal news :- ಭಟ್ಕಳ ಅರಣ್ಯದಲ್ಲಿ ಗೋವುಗಳ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.

Bhatkal|ಒಂದು ವಿಡಿಯೋ ದಿಂದ ಬಯಲಾಯ್ತು ಭಟ್ಕಳ ಬುರುಡೆ ರಹಸ್ಯ| ಅರಣ್ಯಾಧೀಕಾರಿ ಇಂದ ದೂರು ದಾಖಲು

Advertisement

ಕಾರವಾರ/Bhatkal news :- ಭಟ್ಕಳ ಅರಣ್ಯದಲ್ಲಿ ಗೋವುಗಳ ನೂರಾರು ಬುರುಡೆಗಳು, ಸಾವಿರಾರು ಎಲುಬುಗಳು ಪತ್ತೆಯಾಗಿವೆ. ಪೊಲೀಸರು ಇದೀಗ ಇದರ ರಹಸ್ಯ ಹೊರಗೆಳೆಯಲು ತನಿಖೆಗಿಳಿದಿದ್ದಾರೆ.

ಹೌದು ಮೊದಲು ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಈ ಸುದ್ದಿ ಸುಳ್ಳೇ ಸುಳ್ಳು ಎಂದು ವಾಧಿಸಿದ್ದರು. ಹಳೆಯ ವಿಡಿಯೋ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

Advertisement

ಆದರೇ ಮಾಧ್ಯಮಗಳು ಜಿಪಿಆರ್.ಎಸ್ ,ಸಮಯ ನೊಂದಣಿಯಾಗಿದ್ದ ವಿಡಿಯೋ ವನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಿತು. ಇನ್ನು ಹಿಂದೂಪರ ಸಂಘಟನೆಗಳು ಸಹ ಈ ವಿಷಯವಾಗಿ ತನಿಖೆಗೆ ಆಗ್ರಹಿಸಿತು.

Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?

ಕೊನೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ,ಪುರಸಭೆಯ. ವೇಸ್ಟ್ ಡಂಪಿಂಗ್ ಟ್ಯಾಂಕ್ ತೆರೆದಾಗ ಮತ್ತಷ್ಟು ಸತ್ಯಗಳು ಹೊರಬಂದವು.

 ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಗ್ದಮ್ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಬೆಳ್ನೆ ಅರಣ್ಯದ  ಸರ್ವೇ ನಂಬರ್74 ರ ಜಾಗದಲ್ಲಿ ರಾಶಿ ರಾಶಿ ಗೋವುಗಳ ಅಸ್ಥಿಪಂಜರ ಪತ್ತೆಯಾಗಿದೆ.

ಭಟ್ಕಳದಲ್ಲಿ ಪತ್ತೆಯಾದ ಗೋವುಗಳ ಅಸ್ತಿಪಂಜರ ವೀಕ್ಷಿಸುತ್ತಿರುವ ಅಧಿಕಾರಿಗಳು

ಸ್ಥಳೀಯ ಜನರು ಈ ಕಾಣಿನ ಭಾಗದಲ್ಲಿ ರಾಶಿ ರಾಶಿ ಬಿದ್ದ ಗೋವುಗಳ ಅಸ್ಥಿಪಂಜರವನ್ನು ನೋಡಿ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹಿಂದೂ ಕಾರ್ಯಕರ್ತರು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಮಾಧ್ಯಮಗಳಿಗೆ ತಲುಪುತಿದ್ದಂತೆ ಅರಣ್ಯದಲ್ಲಿ ರಾಶಿ ರಾಶಿ ಬಿದ್ದಿದ್ದ ಅಸ್ಥಿಪಂಜರಗಳನ್ನ ಆ ಸ್ಥಳದಿಂದ ಅನಾಮಿಕ ವ್ಯಕ್ತಿಗಳು ಬೇರೆಡೆ ಸಾಗಿಸಿದ್ದಾರೆ.ಇನ್ನು ಸಾಗಿಸುವ ವೇಳೆ ಅವಸರದಲ್ಲಿ ಇಲ್ಲಿಯೇ ಪಕ್ಕದಲ್ಲಿದ್ದ ಪುರಸಭೆಯ ವೇಸ್ಟ್ ಡಂಪಿಂಗ್ ಟ್ಯಾಂಕ್ ಗೂ ಅಸ್ಥಿಪಂಚರಗಳನ್ನು ಹಾಕಲಾಗಿದೆ.ಇನ್ನು ಭಟ್ಕಳದಲ್ಲಿ ನಿರಂತರ ಗೋ ವಧೆ ನಡೆಯುತ್ತಿರುವ ನಗ್ಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ,ಅಕ್ರಮವಾಗಿ ಗೋವುಗಳನ್ನು ಭಟ್ಕಳಕ್ಕೆ ತಂದು ವಧಿಸಲಾಗುತ್ತಿದೆ,ಇದಕ್ಕೆ ಪೊಲೀಸ್ ಇಲಾಖೆಯೂ ಸೇರಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ.

ಭಟ್ಕಳ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು

 ಇನ್ನು ಮೊದಲು ಪೊಲೀಸರು ,ಪುರಸಭೆ ಅಧಿಕಾರಿಗಳು ಇದು ಹಳೆಯ ವಿಡಿಯೋ ಎಂದು ಘಟನೆಯನ್ನು ತಳ್ಳಿಹಾಕಿದ್ದರು. ನಂತರ ಒಂದು ದಿನದ ಹಿಂದೆ ನಡೆದಿದ್ದು ಎಂಬುದು ಸಾಕ್ಷಿ ಸಮೇತ ಸಿಕ್ಕಾಗ ಇದರ ಸತ್ಯತೆ ಅರಿವಾಗುತಿದ್ದಂತೆ,ಘಟನೆಯ ಸೂಕ್ಷ್ಮತೆ ಅರಿತ ಪೊಲೀಸರು ,ಅರಣ್ಯ ಇಲಾಖೆ ,ಪುರಸಭೆ ಅಧಿಕಾರಿಗಳು,ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಇನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವುಗಳ ವಧೆಯಾಗಿರುವುದನ್ನು ಮನಗಂಡು ಭಟ್ಕಳ ಶಹರ ಠಾಣೆಯಲ್ಲಿ ಉಪ ಅವಲಯ ಅರಣ್ಯಾಧಿಕಾರಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಇನ್ನು ಈ ಘಟನೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಎಸ್.ಪಿ ದೀಪನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Bhatkal:ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ|ಏನಿದು ಇ-ಸಿಗರೇಟ್ ,ನಿಷೇಧ ಏಕೆ ಗೊತ್ತಾ?

 ಇನ್ನು ಇಷ್ಟೊಂದು ಗೋವುಗಳ ಹತ್ಯೆ ಆದರೂ ಇವುಗಳ ಬಗ್ಗೆ ಯಾರಿಗೂ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಎದ್ದರೇ ಹೀಗೆ ನೂರಾರು ಗೋವುಗಳ ಹತ್ಯೆ ನಡೆಸಿ ಮಾಂಸ ಭಕ್ಷಿಸಿ ಕಾಡಿನಲ್ಲಿ ಬಿಸಾಡಿದ್ದು ಯಾರು? ಎಂಬ ಪ್ರಶ್ನೆ ಏಳುವಂತೆ ಮಾಡಿದ್ದು ತನಿಖೆಯಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Belne forestBhatkal newscow skeletons foundCow Slaughter CaseHindu organizations protestKarnataka illegal cattle tradepolice investigationUttara Kannadaviral video expose
Advertisement
Next Article
Advertisement