Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?
Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?
ಕಾರವಾರ/,Bhatkal news :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ಸಾವಿರಾರು ಹತ್ಯೆ ಮಾಡಿದ ಗೋವುಗಳ ಮೂಳೆ ಪತ್ತೆಯಾಗಿದೆ. ಭಟ್ಕಳ ಅರಣ್ಯ ಇಲಾಖೆಯ ಸೇರಿದ ಮುಗ್ದಂ ಕಾಲೋನಿ ಬಳಿಯ ಗುಡ್ಡದಲ್ಲಿ ಪತ್ತೆಯಾಗಿದೆ.

ನೂರಾರು ಗೋವುಗಳನ್ನು ಹತ್ಯೆಮಾಡಿ ಮಾಂಸ ಭಕ್ಷಿಸಿ ನಂತರ ಅವುಗಳ ಮೂಳೆಗಳನ್ನು ಅರಣ್ಯದಲ್ಲಿ ಎಸೆಯಲಾಗಿದೆ.ಇನ್ನು ಎರಡ್ಮೂರು ದಿನಗಳ ಹಿಂದೆಯೂ ಗೋಹತ್ಯೆ ಮಾಡಿದ ರಕ್ತದ ಕಲೆಗಳು, ಮೂಳೆಗಳು ಸ್ಥಳದಲ್ಲಿ ಪತ್ತೆಯಾಗಿದೆ. ಹೀಗಾಗಿ ನಿರಂತರ ಗೋಹತ್ಯೆ ಮಾಡಿ ಅವುಗಳ ಮೂಳೆಗಳನ್ನು ತಂದು ಎಸೆದಿರುವುದು ಇದೀಗ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬರುತಿದ್ದಂತೆ ಪುರಸಭೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಯಾರಿಗೂ ತಿಳಿಯದಂತೆ ಸ್ವಚ್ಛ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಹ ತೆರಳಿ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಪೊಲೀಸರು ನಾಕಾ ಬಂದಿ ಹಾಕಿ ದನಗಳ್ಳರನ್ನು ಹಿಡಿದರೂ ಅಕ್ರಮವಾಗಿ ಪೂರೈಕೆಯಾಗುತ್ತಿದೆ, ಇದಕ್ಕೆ
ಕೆಲವು ಪೊಲೀಸ್ ಸಿಬ್ಬಂದಿ ಕೂಡಾ ಜಾನುವಾರು ಪೂರೈಕೆಯಲ್ಲಿ ಕೈ ಜೋಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Bhatkal:ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ|ಏನಿದು ಇ-ಸಿಗರೇಟ್ ,ನಿಷೇಧ ಏಕೆ ಗೊತ್ತಾ?
ಇನ್ನು ಈ ಫೋಟೋ ವಿಡಿಯೋ ಗಳು ಹಳೆಯದ್ದು ಎಂದು ಪೊಲೀಸರು ಈ ಘಟನೆಯನ್ನು ತಳ್ಳಿಹಾಕಿದ್ದಾರೆ.ಈ ಘಟನೆ ನಡೆದಿದ್ದು ಹಳೆಯದ್ದು ಎಂದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಕೈ ಹಾಕಲಾಗಿದ್ದು , ನಿಜವಾಗಿಯೂ ಏನಾಗಿದೆ ಎಂಬ ಬಗ್ಗೆ ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ.