Bhatkal|ಬೆಂಕಿ ಅವಘಡ ಹಣ್ಣು ತರಕಾರಿಗಳು ಬೆಂಕಿಗಾಹುತಿ
Bhatkal|ಬೆಂಕಿ ಅವಘಡ ಹಣ್ಣು ತರಕಾರಿಗಳು ಬೆಂಕಿಗಾಹುತಿ


ಕಾರವಾರ:- ಹಣ್ಣು ತರಕಾರಿ ಹೋಲ್ ಸೇಲ್ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಲಕ್ಷಾಂತರ ಹಾನಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal) ನಗರದ ಜಾಲಿ ಕ್ರಾಸ್ ಬಳಿ ನಡೆದಿದೆ. ನಗರದ ಜಾಲಿ ಕ್ರಾಸ್‌ನ ತಾಸಿನ್ ಫ್ರೂಟ್ಸ್ ಹಾಗೂ ವೆಜಿಟೇಬಲ್ ಹೋಲ್‌ಸೇಲ್, ರಿಟೇಲ್ ಶಾಪ್ ಇದಾಗಿದ್ದು ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ಹಣ್ಣು,ತರಕಾರಿಗಳು ಸಂಪೂರ್ಣ ಸುಟ್ಟು ಹೋಗಿದೆ.

ಇದರಿಂದಾಗಿ ಲಕ್ಷಾಂತರ ರುಪಾಯಿ ನಷ್ಟವಾಗಿದ್ದು , ಸ್ಥಳಕ್ಕಾಗಮಿಸಿದ ಭಟ್ಕಳ, ಹೊನ್ನಾವರ, ಬೈಂದೂರು ಘಟಕದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತಿದ್ದಾರೆ. ಇನ್ನು ಸ್ಥಳಕ್ಕೆ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಂಶಯ ವ್ಯಕ್ತಪಡಿಸಿದ್ದಾರೆ.ಘಟನೆ ಸಂಬಂಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-Bhatkal|ಮಗಳ ಅಶ್ಲೀಲ ವೀಡಿಯೋ ಹೊರಬಿಡುವ ಬೆದರಿಕೆ 20 ಲಕ್ಷ ಬೇಡಿಕೆಇಟ್ಟ ಮೂವರು ಯುವಕರ ಬಂಧನ