ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal:ಮುರುಡೇಶ್ವರ ಸಮುದ್ರದಲ್ಲಿ ದೋಣಿ ಮುಳುಗಡೆ-ಓರ್ವ ಸಾವು ,ಇನ್ನೋರ್ವ ನಾಪತ್ತೆ

A tragic incident occurred off the coast of Murudeshwar in Bhatkal, where a boat capsized in the sea. One person has been confirmed dead, while another is reported missing. Rescue operations are underway.
12:32 PM Jul 10, 2025 IST | ಶುಭಸಾಗರ್
A tragic incident occurred off the coast of Murudeshwar in Bhatkal, where a boat capsized in the sea. One person has been confirmed dead, while another is reported missing. Rescue operations are underway.

Bhatkal:ಮುರುಡೇಶ್ವರ ಸಮುದ್ರದಲ್ಲಿ ದೋಣಿ ಮುಳುಗಡೆ-ಓರ್ವ ಸಾವು ,ಇನ್ನೋರ್ವ ನಾಪತ್ತೆ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ದೋಣಿ (boat)ಅಲೆಗಳ ಹೊಡೆತಕ್ಕೆ ಮುಳುಗಿ ಓರ್ವ ಮೀನುಗಾರ ಸಾವು ಕಂಡಿದ್ದು, ಇನ್ನೋರ್ವ ಮೀನುಗಾರ ಕಾಣೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ತಾಲೂಕಿನ ಮುರ್ಡೇಶ್ವರ ಸಮೀಪದ ಸಮುದ್ರದಲ್ಲಿ ನಡೆದಿದೆ.

ಇದನ್ನೂ ಓದಿ:-Bhatkal: ಎಮ್ಮೆ ಕಡಿದು ತಲೆ ಎಸೆದುಹೋದ ಮದರಸಾ ಶಿಕ್ಷಕನ ಬಂಧನ!

ಜನಾರ್ಧನ ಹರಿಕಾಂತ್  ಎಂಬುವವರಿಗೆ ಸೇರಿದ ನವಗ್ರಹ  ಹೆಸರಿನ ದೋಣಿ ಇದಾಗಿದ್ದು ಈ ದೋಣಿಯಲ್ಲಿದ್ದ ಮಾಧವ ಹರಿಕಾಂತ (45) ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡರೇ

Advertisement

ವೆಂಕಟೇಶ್ ಅಣ್ಣಪ್ಪ ಹರಿಕಾಂತ್ (26) ಎಂಬಾತ  ನಾಪತ್ತೆಯಾಗಿದ್ದಾನೆ. ಇನ್ನು ಆನಂದ ಅಣ್ಣಪ್ಪ ಹರಿಕಾಂತ ಎಂಬಾತನನ್ನು ಸ್ಥಳೀಯ ಮೀನುಗಾರರು  ರಕ್ಷಣೆ ಮಾಡಿದ್ದಾರೆ. ಕಾಣೆಯಾದ ಮೀನುಗಾರನಿಗಾಗಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತಿದ್ದಾರೆ. ಘಟನೆ ಸಂಬಂಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
beach fishingBhatkal boat missingfishermenFishermen RescuedKarnatakaMurdeshwarಭಟ್ಕಳಮುರುಡೇಶ್ವರ
Advertisement
Next Article
Advertisement