Biggbos| ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು
Bigboos| ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು
ಬೆಂಗಳೂರು: ಹಣ -ಆಸ್ತಿ ಮೋಹ ಎ.ತವರನ್ನೂ ಕೆಟ್ಟವರನ್ನಾಗಿಸುತ್ತೆ. ಹೌದು ಇನ್ನೊಬ್ಬರಿಗೆ ಮಾದರಿಯಾಗಬೇಕಿದ್ದ ನಟನೊಬ್ಬನ ಸಂಸಾರದ ಗಲಾಟೆ ಇದೀಗ ಬೀದಿಗೆ ಬಿದ್ದಿದೆ.
ಒಬ್ಬರಿಗೊಬ್ಬರು ಹೊಡೆದಾಡಿ ಬೈದುಕೊಂಡು ಅವರೇ ವಿಡಿಯೋ ಮಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ಹೌದು ಬಿಗ್ ಬಾಸ್ (Bigg Boss) ರಂಜಿತ್ (Ranjith) ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ (Amruthahalli Police Station) ದೂರು ದಾಖಲಾಗಿದೆ.ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಜಗದೀಶ್ ಅವರು ದೂರು ನೀಡಿದ್ದು ಪೊಲೀಸರು ಎನ್‌ಸಿಆರ್ (NCR) ದಾಖಲಿಸಿದ್ದಾರೆ.
ಏನಿದು ಗಲಾಟೆ?
2018 ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್ ಕುಟುಂಬ ವಾಸವಾಗಿದ್ದು, 2025 ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಬಾವನ ಜೊತೆ ರಂಜಿತ್ ವಾಸವಿದ್ದರು. ಈಗ ಈ ಮನೆ ನನ್ನದು ಎಂದು ಅಕ್ಕ ತಮ್ಮನ ನಡುವೆ ಗಲಾಟೆ ನಡೆದಿದೆ. ರಂಜಿತ್ , ರಂಜಿತ್ ಪತ್ನಿ ಜೊತೆ ರಂಜಿತ್ ಅಕ್ಕ ಗಲಾಟೆ ಮಾಡಿ ಒಬ್ಬರಿಗೊಬ್ಬರು ಹಲ್ಲೆ ನಡೆಸಿದ್ದಾರೆ.
ಮನೆ ಬಿಟ್ಟು ಹೋಗದೆ ಈ ಮನೆ ನನ್ನದು ಎಂಧು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ದೂರು ನೀಡಿದ್ದಾರೆ. ದೂರಿಗೆ ಸಾಕ್ಷ್ಯವಾಗಿ ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೋವನ್ನು ನೀಡಿದ್ದಾರೆ.
Karnataka Rain: ರಾಜ್ಯಾದ್ಯಂತ 7 ದಿನ ಮಳೆ, ಈ ಜಿಲ್ಲೆಗಳಿಗೆ ಅಲರ್ಟ್
ದೂರು ದಾಖಲಾದ ಬೆನ್ನಲ್ಲೇ ರಂಜಿತ್ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು ಎಂದು ಹೇಳಿ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚನೆ ನೀಡಿ ಕಳುಹಿಸಿದ್ದಾರೆ.
ಗಲಾಟೆ ವಿಡಿಯೋ ವನ್ನು ನಮ್ಮ ಫೇಸ್ ಬುಕ್ ಫೇಜ್ ನಲ್ಲಿ ನೋಡಿ:-
https://www.facebook.com/share/r/1BhhAYBxy7/

