Uttara kannda :5 ವರ್ಷದಲ್ಲಿ 1,221 ಗೋವುಗಳ ರಕ್ಷಣೆ: ಎಸ್‌ಪಿ ಎಂ ನಾರಾಯಣ್
Uttara kannda :5 ವರ್ಷದಲ್ಲಿ 1,221 ಗೋವುಗಳ ರಕ್ಷಣೆ: ಎಸ್‌ಪಿ ಎಂ ನಾರಾಯಣ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda) ಗೋವು ಕಳವು, ಗೋಮಾಂಸ ಸಾಗಾಟ, ಗೋ ವಧೆ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆ ಆದ್ಯತೆ ನೀಡುತ್ತಿದ್ದು, ಐದು ವರ್ಷದಲ್ಲಿ 324 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು 2020 ರಿಂದ 2025ರವರೆಗೆ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ 193, ಗೋಮಾಂಸ ಸಾಗಾಟದ 56 ಸೇರಿದಂತೆ 252 ಪ್ರಕರಣ ದಾಖಲಿಸಿದ್ದು 657 ಜನರನ್ನು ಈವರೆಗೆ ಬಂಧಿಸಲಾಗಿದೆ.
ಇದನ್ನೂ ಓದಿ:-Uttara kannda Latest news: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನಾಯ್ತು? ವಿವರ ನೋಡಿ
ಈ ಪ್ರಕರಣದಲ್ಲಿ 1,221 ಗೋವುಗಳನ್ನು ರಕ್ಷಣೆ ಮಾಡಲಾಗಿದೆ. 16,933 ಕೆ.ಜಿಯಷ್ಟು ಗೋಮಾಂಸ ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೋವು ಕಳವಿಗೆ ಸಂಬಂಧಿಸಿದಂತೆ 32 ಪ್ರಕರಣಗಳು ಐದು ವರ್ಷದಲ್ಲಿ ದಾಖಲಾಗಿದ್ದು, 43 ಜನರನ್ನು ಬಂಧಿಸಲಾಗಿತ್ತು. ಕಳುವಾಗಿದ್ದ 35 ಗೋವುಗಳ ಪೈಕಿ 16ನ್ನು ಮಾತ್ರ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:-Karwar :ಮನೆ ಕಳ್ಳತನ ಆರೋಪ ಯುವಕನನ್ನು ಕಟ್ಟಿಹಾಕಿದ ಗ್ರಾಮಸ್ಥರು!
ಇನ್ನು ನಿನ್ನೆ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹೆಬಳೆಯ ವೆಂಕಟಾಪುರ ನದಿಯಂಚಿನಲ್ಲಿ ಗೋವು ಹತ್ಯೆ ನಡೆಸಿದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರೆ.