Honnavar : ಭೀಕರ ಅಪಘಾತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ-ಓರ್ವ ಸಾವು
Honnavar : ಭೀಕರ ಅಪಘಾತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ-ಓರ್ವ ಸಾವು

Honnavar :-ಕೆ.ಎಸ್ ಆರ್.ಟಿ ಬಸ್ ಗೆ ಪ್ರವಾಸಿಗರಿದ್ದ ಸ್ಕಾರ್ಫಿಯೋ ವಾಹನ ಅತೀ ವೇಗದಲ್ಲಿ ಬಂದು ಡಿಕ್ಕಿಯಾಗಿ ಓರ್ವ ಸಾವುಕಂಡು ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉಪ್ಪೋನಿ ಯಲ್ಲಿ ನಡೆದಿದೆ.
ಹೊನ್ನಾವರ (Honnavar)ದಿಂದ ಮಾವಿನಗುಂಡಿ ಕಡೆಗೆ ಬರುತಿದ್ದ ಕೆಎಸ್.ಆರ್.ಟಿಸಿ ಬಸ್ ಗೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತೆರಳುತಿದ್ದ ಬೆಂಗಳೂರು ಮೂಲದ ಸ್ಕಾರ್ಪಿಯೋ ವಾಹನ ಅತೀ ವೇಗದಲ್ಲಿ ಬಂದು ಡಿಕ್ಕಿಯಾಗಿದೆ.
ಡಿಕ್ಕಿಯಾದ ಪರಿಣಾಮ ಸ್ಕಾರ್ಫಿಯೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಕಾರ್ಫಿಯೋದಲ್ಲಿ ಇದ್ದ ಬೆಂಗಳೂರು ಮೂಲದ ಓರ್ವ ಸಾವು ಕಂಡರೇ ಆರು ಜನರಿಗೆ ಗಂಭೀರ ಗಾಯವಾಗಿದೆ. ಇನ್ನು ಬಸ್ ನಲ್ಲಿದ್ದ ಚಾಲಕ ಸೇರಿ ನಾಲ್ಕು ಜನಜನರಿಗೆ ಗಾಯಗಳಾಗಿದ್ದು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:-Honnavar|ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್ ಗೆ ಜೈಲು ಶಿಕ್ಷೆ
ಮೃತರಾದ ಹಾಗೂ ಗಾಯಾಳುಗಳ ಮಾಹಿತಿ ತಿಳಿದು ಬರಬೇಕಿದ್ದು ಘಟನೆ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.