ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Crime :ವಿಂಗ್ ಕಮಾಂಡರ್ ನವಟಂಕಿ ಆಟ ಬಯಲು: ವೈರಲ್ ಆದ ವಿಡಿಯೋ ಹಿಂದಿದೆ ಅಸಲಿ ಸತ್ಯ! ಏನದು

Bangalur :-ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್‌ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿದೆ.
11:25 PM Apr 21, 2025 IST | ಶುಭಸಾಗರ್

Crime :ವಿಂಗ್ ಕಮಾಂಡರ್ ನವಟಂಕಿ ಆಟ ಬಯಲು: ವೈರಲ್ ಆದ ವಿಡಿಯೋ ಹಿಂದಿದೆ ಅಸಲಿ ಸತ್ಯ! ಏನದು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Bangalur :-ಬೆಂಗಳೂರಿನ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್‌ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿದೆ.

ಸಿ.ಸಿ ಕ್ಯಾಮರಾದಲ್ಲಿ ವಿಂಗ್ ಕಮಾಂಡರ್ ಗಲಾಟೆ ,ಸೆರೆಯಾದ ದೃಶ್ಯಗಳು
ಹಲ್ಕೆ ಬಗ್ಗೆ ತೋರಿಸುತ್ತಿರುವ ಚಿತ್ರ

ಆರಂಭದಲ್ಲಿ ಕನ್ನಡ ಭಾಷಾ ವಿಷಯಕ್ಕಾಗಿ ನಡೆದ ಜಗಳ ಎಂದು ವೈರಲ್ ಆಗಿತ್ತಾದರೂ ಬಳಿಕ ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಈ ರೀತಿ ವರ್ತಿಸಲಾಗಿದೆ ಎನ್ನಲಾಗಿತ್ತು.

Advertisement

ಇನ್ನು ವಿಂಗ್‌ ಕಮಾಂಡರ್‌ ಸ್ವತಃ ವಿಡಿಯೋ ಮೂಲಕ ತನ್ನ ಮೇಲೆ ಕನ್ನಡಿಗನೊಬ್ಬ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡಿದ್ದ. ಮುಖಕ್ಕೆ ರಕ್ತ ಬರಿಸಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.

ಈ ವಿಡಿಯೋ ಸಖತ್ ವೈರಲ್ ಆಗಿದ್ದಲ್ಲದೇ ಮಾಧ್ಯಮಗಳಲ್ಲೂ ಸುದ್ದಿಯಾಯಿತು.ಇದನ್ನೇ ನಂಬಿದ ಪೊಲೀಸರು, ಯುವಕನ ವಿರುದ್ಧ ಎಫ್​​ಐಆರ್ ದಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು.

 ಆದ್ರೆ, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಬೋಸ್​ನ ನವರಂಗಿ ಆಟ ಬಟಾಬಯಲಾಗಿದೆ.

ಇದನ್ನೂ ಓದಿ:-Karnataka|ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು ! ಬ್ರಾಹ್ಮಣರ ಜನಿವಾರಕ್ಕೂ ಬಂತು ಕುತ್ತು!?

ಸಿಸಿಟಿವಿ ದೃಶ್ಯದಲ್ಲಿ ಯುವಕ ಹಲ್ಲೆ ಮಾಡಿಲ್ಲ. ಬದಲಾಗಿ ವಿಂಗ್ ಕಮಾಂಡ್​ ಬೋಸ್ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಎಷ್ಟೇ ಬಿಡಿಸಲು ಪ್ರಯತ್ನಿಸಿದ್ದರೂ ಸಹ ಕೇಳದ ಬೊಸ್​ ಯುವಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ.

ಯುವಕ ನೆಲಕ್ಕೆ ಬಿದ್ದರೂ ಸಹ ಕೇಳಿದೇ ಮನಬಂದಂತೆ ಥಳಿಸಿದ್ದಾನೆ. ಅಲ್ಲದೇ ಯುವಕನ ಮೊಬೈಲ್​ ಕಿತ್ತುಕೊಂಡು ಎಸೆದಿದ್ದಾನೆ. ಬೋಸ್​ನ ಕ್ರೌರ್ಯ ಅಷ್ಟು ಕ್ರೂರವಾಗಿದೆ.

ಆದರೇ ಹಲ್ಲೇ ಮಾಡಿದ ಕಮಾಂಡರ್ ತನಗೆ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿ ಸುಳ್ಳನ್ನು ಸತ್ಯಮಾಡಲು ಹೊರಟಿದ್ದು ಇದೀಗ ಆತನ ಬಣ್ಣ ಹೊರಬರುತಿದ್ದಂತೆ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು  ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.

Advertisement
Tags :
BangalurCrimeFact checkKannda newsKarnatakaPoliceWing Commander viral video
Advertisement
Next Article
Advertisement