Dandeli: ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗು ಮಾರಾಟ ಮಾಡಿದ ಪೋಷಕರು
Damdeli: ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗು ಮಾರಾಟ ಮಾಡಿದ ಪೋಷಕರು
ಕಾರವಾರ :- ಬ್ಯಾಂಕ್ (bank) ಹಾಗೂ ಸಹಕಾರಿ ಸಂಘದಲ್ಲಿ ಮಾಡಿದ ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗುವನ್ನೇ ಪೋಷಕರು ಮಾರಾಟ ಮಾಡಿದ ಮನವಿದ್ರಾವಕ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದ್ದು ಅಂಗನವಾಡಿ ಕಾರ್ಯಕರ್ತೆ ದೂರಿನ ಮೇಲೆ ಮಗುವನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ವಾಸೀಂ ಚಂಡು ಪಟೇಲ್ ಹಾಗೂ ಮಾಹೀನ್ ಸಾಲ ತೀರಿಸಲು ಮಗುವನ್ನು ಮಾರಾಟ ಮಾಡಿದ ಪೋಷಕರಾಗಿದ್ದು ,ಬೆಳಗಾವಿ ಆನಗೋಳದ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47), ಕಿಶನ್ ಐರೇಕರ(42) ಮಗು ಖರೀದಿ ಮಾಡಿದ ಬಂಧಿತ ಆರೋಪಿಗಳಾಗಿದ್ದಾರೆ.ಹಳೇ ದಾಂಡೇಲಿಯ ದೇಶಪಾಂಡೆ ನಗರದ ನಿವಾಸಿ ಮಾಹೀನ್ ಜೂನ್ 17 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು , ವಾಸಿಂ
ಕೈ ಸಾಲ ನೀಡಿದ ಬಡ್ಡಿ ದಂದೆಗಾರರು ಹಾಗೂ ಸಂಘದಿಂದ ಐದು ಲಕ್ಷಕ್ಕೂ ಹೆಚ್ಚು ಹಣವನ್ನು ಬಡ್ಡಿ ಸಮೇತ ತೀರಿಸಲು ಕಿರುಕುಳ ನೀಡುತಿದ್ದರು.

ಸಾಲ ತೀರಿಸಲು ಅನ್ಯ ಮಾರ್ಗ ವಿಲ್ಲದೇ ಮಗು ಮಾರಾಟಕ್ಕೆ ದಂಪತಿಗಳು ತೀರ್ಮಾನಿಸಿ ಜುಲೈ 8ರಂದು ಧಾರವಾಡಕ್ಕೆ ಹೋಗಿ ಬೆಳಗಾವಿಯ ನೂರ್ ಅಹಮ್ಮದ್ ಎಂತಾನಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.ಮಾಹೀನ್ ಮನೆಯಲ್ಲಿ ಮಗು ಕಾಣದಿದ್ದ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ದೂರು ನೀಡಿದ್ದು ತಕ್ಷಣ ತನಿಖೆ ನಡೆಸಿದ ದಾಂಡೇಲಿ ಪೊಲೀಸರು
ಮಗು ಖರೀದಿ ಮಾಡಿದ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದು ,ರಕ್ಷಣೆ ಮಾಡಿದ ಮಗುವನ್ನು ಶಿರಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.