Dandeli:ಧರ್ಮಸ್ಥಳ ವಿಚಾರದಲ್ಲಿ ಸರ್ಕಾರದ ನಿರ್ಣಯವನ್ನು ಯಾರೂ ಪ್ರಶ್ನಿಸಬಾರದು|ಆರ್.ವಿ.ಡಿ ಹೇಳಿದ್ದೇನು?
Dandeli:ಧರ್ಮಸ್ಥಳ ವಿಚಾರದಲ್ಲಿ ಸರ್ಕಾರದ ನಿರ್ಣಯವನ್ನು ಯಾರೂ ಪ್ರಶ್ನಿಸಬಾರದು|ಆರ್.ವಿ.ಡಿ ಹೇಳಿದ್ದೇನು?
ಕಾರವಾರ :- ಧರ್ಮಸ್ಥಳದ ವಿಚಾರದಲ್ಲಿ ಸರ್ಕಾದ ನಿರ್ಣಯವನ್ನು ಯಾರೂ ಪ್ರಶ್ನೆ ಮಾಡಬಾರದು , ಜೆಡಿಎಸ್ ಮತ್ತು ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಬೇಕು ಎಂದು ಮನಸ್ಸು ಇದ್ರೆ ಅದು ಸಫಲವಾಗುವುದಿಲ್ಲ ಎಂದು ಜೋಯಿಡಾದ ಗಣೇಶ ಗುಡಿಯಲ್ಲಿ ಆಡಳಿತಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (RV Deshpande) ಹೇಳಿದರು.
ಇದನ್ನೂ ಓದಿ:-Dandeli|ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ -ಆರು ಬೈಕ್ ವಶಕ್ಕೆ
ಇಂದು ಸೂಫಾ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ಮಾತನಾಡಿದ ಅವರು ಸರ್ಕಾರದ ನಿರ್ಣಯವನ್ನು ಯಾರೂ ಪ್ರಶ್ನಿಸಬಾರದು ,ಸರ್ಕಾರ ಆದೇಶ ಮಾಡಿ ತನಿಖೆ ಮಾಡುತ್ತಿದೆ.ಅಲ್ಲಿ ಏನೂ ಸಿಕ್ಕಿಲ್ಲ, ಸತ್ಯ ಸತ್ಯವಾಗಿರುತ್ತದೆ ,ಅಸತ್ಯ ಸದ್ದುಮಾಡುವ ಪ್ರಯತ್ನ ಮಾಡಿದರೇ ಅದು ವಿಫಲವಾಗುತ್ತದೆ.ಪವಿತ್ರ ಸ್ಥಾನದ ಪಾವಿತ್ರತೆ ಇಟ್ಟು ನಾವು ಹೆಜ್ಜೆ ಹಾಕಬೇಕು ,ಧರ್ಮಸ್ಥಳದ ಪಾವಿತ್ರತೆಗೆ ಯಾರೂ ವಿರೋಧ ಮಾಡಿಲ್ಲ .ಜೆಡಿಎಸ್ ಮತ್ತು ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಬೇಕು ಎಂದು ಮನಸ್ಸು ಇದ್ರೆ ಅದು ಸಫಲವಾಗುವುದಿಲ್ಲ .
ಸತ್ಯ ಎಲ್ಲರಿಗೂ ಗೊತ್ತಾಗಬೇಕಿದೆ ,ತನಿಖೆ ಮುಖಾಂತರ ಹೊರಬರಲಿದೆ ಎಂದರು. ಇನ್ನು ದಸರಾ ಉದ್ಘಾಟನೆ ವಿವಾದ ಕುರಿತು ಮಾತನಾಡಿದ ಅವರು ದಸರಾ ಉದ್ಘಾಟನೆ ಮಾಡುವಾಗ ಅಲ್ಪಸಂಖ್ಯಾತರು,ಹಿಂದುಳಿದವರು ಮುಂದುವರೆದವರು ಎಂದು ವಿಚಾರ ಬರುವುದಿಲ್ಲ,ಬಾನು ಮುಷ್ತಾಕ್ ಅವರು ಪ್ರಖ್ಯಾತ ಲೇಖಕರು ,ಅನಾವಷ್ಯಕವಾಗಿ ಯಾರೂ ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಮಾತನಾಡಬಾರದು.
ಮೈಸೂರು ದಸರಾ ರಾಜ್ಯದ ನಾಡ ಹಬ್ಬ ಆಗಿದೆ, ಇದ್ರಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರು ಅಂತ ತಾರತಮ್ಯ ಮಾಡಬಾರದು,ಎಲ್ಲ ಜನಾಂಗದವರಿಗೂ ದಸರಾ ಉದ್ಘಾಟನೆಗೆ ಹಕ್ಕಿದೆ,ಅವರ ಸಾಧನೆಯನ್ನ ಮೆಚ್ಚಿ ಸರ್ಕಾರ ನೇಮಕ ಮಾಡಿದೆ ಎಂದರು.