EX -DG-IGP ಓಂ ಪ್ರಕಾಶ್ ಹತ್ಯೆ ಮಾಡಿದ ಪತ್ನಿ -ಉತ್ತರ ಕನ್ನಡ ಜಿಲ್ಲೆಯ ಲಿಂಕ್ ! ಏನದು?
DG-IGP ಓಂ ಪ್ರಕಾಶ್ ಹತ್ಯೆ ಮಾಡಿದ ಪತ್ನಿ -ಉತ್ತರ ಕನ್ನಡ ಜಿಲ್ಲೆಯ ಲಿಂಕ್ ! ಏನದು?
ಬೆಂಗಳೂರಲ್ಲಿ ಇಂದು ನಿವೃತ್ತ DG-IGP ಓಂ ಪ್ರಕಾಶ್ ಅವರನ್ನ ಅವರ ಪತ್ನಿ ಪಲ್ಲವಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ನಿವೃತ್ತ DG-IGP ಓಂ ಪ್ರಕಾಶ್ ಕೊಲೆ ಆದ ಬಳಿಕ ಪತ್ನಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಹೇಳಿದ್ದಾರೆ.
ನಿವೃತ್ತ ಡಿಜಿ-ಐಜಿಪಿ ಪತ್ನಿಗೆ ವಿಡಿಯೋ ಕರೆ ಮಾಡಿದ್ದ ಓಂ ಪ್ರಕಾಶ್ ಪತ್ನಿ ನಾನು ‘monster’ ಮುಗಿಸಿದೆ ಎಂದಿದ್ದಾರೆ.

ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.
ಓಂ ಪ್ರಕಾಶ್ ಅವರು ವಾಸಿಸುತ್ತಿದ್ದ HSR ಲೇಔಟ್ ಮನೆಗೆ ಪೊಲೀಸರು ಭೇಟಿ ನೀಡಿ ಪತ್ನಿ ಪಲ್ಲವಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಓಂ ಪ್ರಕಾಶ್ ಅವರ ಮೃತದೇಹ ರಕ್ತಸಿಕ್ತವಾಗಿ ಪತ್ತೆಯಾಗಿದ್ದು, ಮನೆಯಲ್ಲಿದ್ದ ಚಾಕುವನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತ್ನಿಯ ರಕ್ತಪಾತಕ್ಕೆ ಕಾರಣವೇನು?
ನಿವೃತ್ತ DG-IGP ಓಂ ಪ್ರಕಾಶ್ ಪತ್ನಿಯ ಹೆಸರು ಪಲ್ಲವಿ. ಇವರಿಗೆ ಇಬ್ಬರು ಮಕ್ಕಳು. ಕೆಲ ದಿನಗಳ ಹಿಂದೆ ವೈಯಕ್ತಿಕ ವಿಚಾರಗಳಲ್ಲಿ ಮನಸ್ತಾಪ ಇದ್ದು, ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.ಈ ಹಿಂದೆ ಓಂ ಪ್ರಕಾಶ್ ವಿರುದ್ಧ ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ಆಗಿದ್ದು, ಕೆಲ ತಿಂಗಳ ಹಿಂದೆ ಓಂ ಪ್ರಕಾಶ್ ಮನೆ ಮುಂದೆಯೇ ಪತ್ನಿ ಪಲ್ಲವಿ ಅವರು ಧರಣಿ ನಡೆಸಿದ್ದರು.
ವಾರದ ಹಿಂದೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಐಪಿಎಸ್ ಅಧಿಕಾರಿಗಳಿಗೆ ಮೆಸೇಜ್ ಮಾಡಿದ್ದರು. ನನಗೆ ಮತ್ತು ಮಗಳಿಗೆ ಸಾಕಷ್ಟು ಹಿಂಸೆ ನೀಡುತ್ತಾ ಇದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಇದ್ದಾರೆ. ಓಂ ಪ್ರಕಾಶ್ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ವಾಟ್ಸಾಪ್ ಗ್ರೂಪ್ನಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ:-Honnavar: ದೋಣಿವಿಹಾರ ತಾತ್ಕಾಲಿಕ ಸ್ಥಗಿತ
ನನ್ನ ಪತಿ ಗನ್ ಹಿಡಿದುಕೊಂಡು ಮನೆಯಲ್ಲಿ ಓಡಾಡ್ತಾ ಇದ್ದಾರೆ. ಪ್ರತಿ ಬಾರಿ ಶೂಟ್ ಮಾಡ್ತೀನಿ ಅಂತ ಭಯ ಬೀಳಿಸ್ತಾ ಇದ್ರು. ಬಿಯರ್ ಬಾಟಲ್ ಮತ್ತು ಚಾಕುವಿನಿಂದ ಚುಚ್ಚಿದ್ದಾರೆ. ಗನ್ ಅಲ್ಲಿ ಜೀವ ಬೆದರಿಕೆ ನೀಡ್ತಾ ಇದ್ರು. ಯಾವ ಕ್ಷಣದಲ್ಲಿ ಬೇಕಾದ್ರೂ ನನ್ನ ಸಾಯಿಸಬಹುದು. ಹೀಗಾಗಿ ಸುಮೋಟೋ ದಾಖಲಿಸಿ ಎಂದು ಪಲ್ಲವಿ ಅವರು ತಿಳಿಸಿದ್ದರು ಎನ್ನಲಾಗಿದೆ.
ಉತ್ತರ ಕನ್ನಡದ ಎಸ್.ಪಿ ಆಗಿದ್ದ ಓಂ ಪ್ರಕಾಶ್.
ನಿವೃತ್ತ DG-IGP ಓಂ ಪ್ರಕಾಶ್ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಆಗಿ 1996 ರಲ್ಲಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಇವರ ಸಹೋದರಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತಿದ್ದರು.
ಇನ್ನು ನಿವೃತ್ತಿ ನಂತರ ಜೋಯಿಡಾದ ಸಾಮಜೋಯಿಡಾ ದಲ್ಲಿ ಪುತ್ರ ಕಾರ್ತಿಕೇಶ ಹೆಸರಿನಲ್ಲಿ ಎರಡು ಎಕರೆ 20 ಗುಂಟೆ ಜಮೀನು ಕರೀದಿಸಿದ್ದರು.
ಇಲ್ಲಿ ಶ್ರೀಗಂಧ ಸೇರಿದಂತೆ ಬೆಲೆ ಬಾಳುವ ಗಿಡಗಳನ್ನು ನೆಟ್ಟಿದ್ದು ಇಲ್ಲಿಯೇ ಐಷಾರಾಮಿ ಗೆಸ್ಟ್ ಹೌಸ್ ಕಟ್ಟಿಸಿದ್ದರು. ವಿಶ್ರಾಂತಿಗಾಗಿ ಇಲ್ಲಿಗೆ ಬರುತಿದ್ದ ಅವರು ಕೆಲವು ದಿನ ಇಲ್ಲಿಯೇ ತಂಗಿ ನಂತರ ಬೆಂಗಳೂರಿಗೆ ತೆರಳುತಿದ್ದರು.
ಕೆಲವು ತಿಂಗಳ ಹಿಂದ ಜೋಯಿಡಾದ ತಮ್ಮ ಗೆಷ್ಟ್ ಹೌಸ್ ಗೆ ಬಂದು ವಿಶ್ರಾಂತಿ ಪಡೆದು ಹೋಗಿದ್ದರು.
ಈ ಜಮೀನ ವಿಷಯವಾಗಿ ಹಲವು ಬಾರಿ ಕುಟುಂಬದೊಂದಿಗೆ ಗಲಾಟೆಯಾಗಿತ್ತು ಎನ್ನಲಾಗಿದೆ. ಇನ್ನು ಈ ಜಮೀನನ್ನು ಪುತ್ರನ ಹೆಸರಿನಿಂದ ತಂಗಿಯ ಹೆಸರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಿದ್ದರು. ಇದು ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.