Darmasthala case| ಗಡ್ಡ ಬಿಟ್ಟ ಮಾಸ್ಕ ಮ್ಯಾನ್, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು
Darmasthala case| ಗಡ್ಡ ಬಿಟ್ಟ ಮಾಸ್ಕ ಮ್ಯಾನ್, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು

ಮಂಗಳೂರು/ಉಡುಪಿ:-ಧರ್ಮಸ್ಥಳ (Darmasthala)ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಬುರುಡೆ ಬಿಟ್ಟಿದ್ದ ಮುಸುಕುಧಾರಿ ಚಿನ್ನಯ್ಯನನ್ನು ಎಸ್.ಐ.ಟಿ(SIT) ಬಂಧಿಸದೆ.
ಉಡುಪಿಗೆ ಆಗಮಿಸಿರುವ ಗೃಹಸಚಿವ ಜಿ.ಪರಮೇಶ್ವರ್ ರವರು ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ ಮ್ಯಾನ್ ನನ್ನು ಬಂಧಿಸಿರುವ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ.
ಸಧ್ಯ SIT ತನಿಖೆ ನಡೆಸುತಿದ್ದು ಆತನನ್ನು ಮಂಪರು ಪರೀಕ್ಷೆ ನಡೆಸಬೇಕಾ ಬೇಡವೇ ಎಂಬಬಗ್ಗೆ ಎಸ್.ಐ.ಟಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂದು ಮಾಸ್ಕ್ ಮ್ಯಾನ್ (Mask Man) ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಧರ್ಮಸ್ಥಳದಲ್ಲಿ ಉತ್ಖನನ (Dharmasthala Mass Burials Case) ನಿಲ್ಲಿಸಿ ಮಾಸ್ಕ್ ಮ್ಯಾನ್‌ನನ್ನೇ ವಿಚಾರಣೆ ನಡೆಸಿದ್ದ ಎಸ್‌ಐಟಿ (SIT) ಅಧಿಕಾರಿಗಳು, ಆತ ಹೇಳಿದ್ದೆಲ್ಲಾ ಬುರುಡೆ ಎಂದು ಕನ್ಫರ್ಮ್ ಆದ ಬಳಿಕ ಮಾಸ್ಕ್ ಮ್ಯಾನ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ವೇಳೆ ಸತ್ಯದ ಅನಾವರಣವಾಗಿದೆ. ನನಗೆ ಈ ರೀತಿ ಹೇಳಲು ಹೇಳಿದ್ರು, ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್‌ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಮಾಸ್ಕ್ ಮ್ಯಾನ್ ಚೆನ್ನ ಹೇಳಿದ್ದಾನೆ.
ಸಧ್ಯ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಿದ್ದು ಇದೀಗ ಆತನನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರಾದ ವಿಜಯೇಂದ್ರ ಇ.ಹೆಚ್ಚ್ ಎದುರು ಹಾಜರುಪಡಿಸಿ ವಿಡಿಯೋ ರೆಕಾರ್ಡ ಮಾಡಲಾಗಿದೆ. ಸಂಪೂರ್ಣ ಗಡ್ಡ ಬಿಟ್ಟು ಬಂದಿದ್ದ ಈತ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾನೆ.
ಶವಗಳ ಚಿನ್ನ ದೋಚುತಿದ್ದ ಚಿನ್ನಿ
ದೂರುದಾರ ಮಾಸ್ಕ ಮ್ಯಾನ್ ಮೂಲತಃ ಮಂಡ್ಯ (Mandya) ಜಿಲ್ಲೆಯವನಾಗಿದ್ದು, ಸಿ.ಎನ್ ಚಿನ್ನಯ್ಯ ಅಲಿಯಾಸ್ ಚಿನ್ನಪ್ಪ ಅಲಿಯಾಸ್ ಚಿನ್ನಯ್ಯ ಅಲಿಯಾಸ್ ಚೆನ್ನಯ್ಯ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮುಸುಕುಧಾರಿಗೆ ಈ ಹೆಸರು ಬರೋದಕ್ಕೂ ಒಂದು ಕಾರಣ ಇದೆ. ಈತ ನದಿಯಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದನಂತೆ, ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದನಂತೆ. ಈ ಕಾರಣದಿಂದಾಗಿಯೇ ಚಿನ್ನಪ್ಪ, ಚಿನ್ನಯ್ಯ ಎಂದು ಕರೆಯುತ್ತಿದ್ದರಂತೆ.
ಇನ್ನು ಈತ ಧರ್ಮಸ್ಥಳದಲ್ಲಿ ಕೆಲಸ ಮಾಡುವಾಗ ಶವಗಳ ಚಿನ್ನಾಭರಣಗಳನ್ನು ದೋಚುತಿದ್ದುದ್ದು ಬಯಲಿಗೆ ಬಂದ ಕಾರಣದಿಂದ ಧರ್ಮಸ್ಥಳದಲ್ಲಿ ಈತನನ್ನು ಕೆಲಸದಿಂದ ಕಿತ್ತೊಗೆಯಲಾಗಿತ್ತು.