Shivamogga:ಬೆಳಗಾದ್ರೆ ದೇವರ ಮುಖ ನೋಡಬೇಕೆಂದು ಕಾಲಿನಿಂದ ಗಣಪತಿ ,ನಾಗ ವಿಗ್ರಹ ತುಳಿದು ಕೊಚ್ಚೆಗೆ ಹಾಕಿದ ದುಷ್ಕರ್ಮಿಗಳು -ಇಬ್ಬರ ಬಂಧನ
Shivamogga:ಬೆಳಗಾದ್ರೆ ದೇವರ ಮುಖ ನೋಡಬೇಕೆಂದು ಕಾಲಿನಿಂದ ಗಣಪತಿ ,ನಾಗ ವಿಗ್ರಹ ತುಳಿದು ಕೊಚ್ಚೆಗೆ ಹಾಕಿದ ದುಷ್ಕರ್ಮಿಗಳು -ಇಬ್ಬರ ಬಂಧನ
ಶಿವಮೊಗ್ಗ: ನಗರದ (Shivamogga) ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲಿಗೆ ಅಪಮಾನ ಮಾಡಿದ್ದ ಕಿಡಿಗೇಡಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಅರೋಪಿಗಳನ್ನು ಸದ್ದಾಂ ಹಾಗು ರೆಹಮತ್ ಉಲ್ಲಾ ಎಂದು ಗುರುತಿಸಲಾಗಿದೆ. ಆರೋಪಿಗಳು ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕಿಡಿಗೇಡಿಗಳ ಕೃತ್ಯದಿಂದ ಕೆರಳಿದ್ದ ಹಿಂದೂ ಮುಖಂಡರು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಕ್ರೋಶ ಹೊರಹಾಕಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಸ್ಥಳಕ್ಕೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹಾಗೂ ಎಂಎಲ್‌ಸಿ ಧನಂಜಯ್ ಸರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪಡೆದಿದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ MLC ಧನಂಜಯ್ ಸರ್ಜಿ, ದೇವಾಲಯದ ಶುದ್ಧೀಕರಣ ಆಗಬೇಕು. ದೇವಾಲಯ ನಿರ್ಮಾಣ ಆಗಬೇಕು. ಈ ಭಾಗದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಏನಾಗಿತ್ತು?

ಬಂಗಾರಪ್ಪ ಬಡಾವಣೆಯಲ್ಲಿ ಸದ್ದಾಂ ಹಾಗು ರೆಹಮತ್ ಉಲ್ಲಾ ನ ನಿರ್ಮಾಣ ಹಂತದ ಕಟ್ಟಡವೊಂದರ ಮುಂಭಾಗ ಖಾಲಿ ಜಾಗವಿದೆ. ಅಲ್ಲಿ ಸ್ಥಳೀಯರು ಕಟ್ಟೆ ನಿರ್ಮಿಸಿ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರು.
ಈ ವ್ಯಕ್ತಿಗಳ ನಿರ್ಮಾಣ ಹಂತದ ಕಟ್ಟಡದ ಮುಂಭಾಗವೇ ದೇವರ ವಿಗ್ರಹಗಳಿದ್ದು , ದಿನ ಬೆಳಗಾದರೇ ತಾವು ಎದ್ದಕೂಡಲೇ ದೇವರ ವಿಗ್ರಹ ನೋಡಬೇಕು ಎಂದು ಶನಿವಾರ ಈ ಮನೆ ಬಳಿ ಬಂದಿದ್ದ ಸ್ನೇಹಿತರೊಡಗೂಡಿ ನಾಗರ ಕಲ್ಲನ್ನು ಕಿತ್ತೆಸೆದಿದ್ದಾನೆ ,ಇನ್ನು ಗಣಪತಿ ವಿಗ್ರಹಕ್ಕೆ ಬೂಟ್ ನಿಂದ ಒದ್ದು ಕೀಳಲು ಪ್ರಯತ್ನಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯ ಮಹಿಳೆ ಗಂಗಮ್ಮ ಹಾಗೂ ಇತರ ಮಹಿಳೆಯರು ವಿರೋಧಿಸಿದ್ದು ನಂತರ ಈ ಕಿರಾತಕರು ಅಲ್ಲಿಂದ ತೆರಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಸೇರಿದ್ದಾರೆ. ತಕ್ಷಣ ಪೊಲೀಸರು ಸಹ ಎಚ್ಚೆತ್ತು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:-Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.