Bhatkal :5.ಲಕ್ಷ ಮೌಲ್ಯದ ಜಾನುವಾರು ವಶ
Bhatkal :5.ಲಕ್ಷ ಮೌಲ್ಯದ ಜಾನುವಾರು ವಶ
ಭಟ್ಕಳ: ಹೊನ್ನಾವರ ಕಡೆಯಿಂದ ಭಟ್ಕಳದ (bhatkal )ಕಡೆಗೆ ಶನಿವಾರ ಬೆಳಗಿನ ಜಾವ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ, ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ನೀರು, ಹುಲ್ಲು ಕೊಡದೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಶಿರಾಲಿ ಚೆಕ್‌ಪೋಸ್ಟ್ ನಲ್ಲಿ ಬೆಳಗಿನ ಜಾವ ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಭರಮಪ್ಪ ಬೆಳಗಲಿ ವಾಹನ ಸಮೇತ ವಶಕ್ಕೆ ಪಡೆದು ಸುಮಾರು 5.70,000/-ಲಕ್ಷ ಮೌಲ್ಯದ19 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಹಾವೇರಿ (Haveri) ಮೂಲದ ಆರೋಪಿಗಾಳಾದ1) ಚೇತನ ತಂದೆ ನಂದೀಶ ಕಡ್ಲಿ 26 ವರ್ಷ,2) ಸಂತೋಷ ತಂದೆ ಧ್ಯಾನಪ್ಪ ಬೋರದ 25ವರ್ಷ,ಹಾಗೂ3)ದುರ್ಗಪ್ಪ ತಂದೆ ಫಕ್ಕೀರಪ್ಪ ಛಲವಾದಿ 50ವರ್ಷ ಗದಗ ನಿವಾಸಿ ಆಗಿದ್ದಾರೆ ತಿಳಿದು ಬಂದಿದೆ. ಈ ಮೂವರನ್ನು ಆರೋಪಿಗನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:-Bhatkal:ಆಸ್ತಿಗಾಗಿ ಮಗಳ ಮನೆಯನ್ನ ನಾಶ ಮಾಡಿದ ತಂದೆ ಸಹೋದರ- ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪಿ.ಎಸ್.ಐ ಭರಮಪ್ಪ ಬೆಳಗಲಿ ದೂರನ್ನು ನೀಡಿದ್ದಾರೆ.ಕಾರ್ಯಚರಣೆ ಯಲ್ಲಿ ಪೋಲಿಸ್ ಸಿಬ್ಬಂದಿಯಾದಅಣ್ಣಪ್ಪ ನಾಯ್ಕ,ರಾಮಯ್ಯ ನಾಯ್ಕ,ಬಸವನಗೌಡ ಪಾರ್ಟಿಲ್,ಚಾಲಕ ದೇವರಾಜ್ ಮೊಗೇರ ಉಪಸ್ಥಿತಿ ಇದ್ದರು