Honnavar:ಹೊನ್ನಾವರದ ಆ ಹಳ್ಳಿಯಲ್ಲಿ ಮೇಯಲು ಹೋಗುವ ಗೋವುಗಳೇ ಮಾಯ !
Honnavar:ಹೊನ್ನಾವರದ ಆ ಹಳ್ಳಿಯಲ್ಲಿ ಮೇಯಲು ಹೋಗುವ ಗೋವುಗಳೇ ಮಾಯ !
Honnavar news : ಜನವರಿ 18 ರಂದು ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭಿಣಿ ಹಸು ಮತ್ತು ಅದರ ಕರುವನ್ನು ಬರ್ಬರವಾಗಿ ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದಾದ ನಂತರ ಗೋವು ಕಳ್ಳತನ ,ವಧೆಯಂತ ಕಾರ್ಯಗಳು ಈ ಗ್ರಾಮಗಳಲ್ಲಿ ನಿಲ್ಲಬಹುದು ಎಂಬ ನಿರೀಕ್ಷೆ ಹಳ್ಳಿಗರದ್ದಾಗಿತ್ತು.
ಆದರೇ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಡಕುಳಿಯಲ್ಲಿ ಗೋವಿನ ಅವಶೇಷಗಳು ಪತ್ತೆಯಾಗಿದೆ.
ದನದ ಮಾಂಸ ಕೊಂಡೊಯ್ದು ಉಳಿದ ಭಾಗಗಳನ್ನು ಸುಟ್ಟು ಹಾಕಿದ ರೀತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು,ದನದ ತಲೆ ಬುರುಡೆ, ಬೆನ್ನು ಮೂಳೆ ಹಾಗೂ ಕೆಲವು ಎಲುಬುಗಳು ಮಾತ್ರ ಸ್ಥಳದಲ್ಲಿ ಪತ್ತೆಯಾಗಿದೆ.
ಇನ್ನು ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ,ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾವರ ಪೊಲೀಸರು ಮೂಳೆಗಳನ್ನು ಎಫ್ಎಸ್‌ಎಲ್‌ಗೆ ಕಳುಹಿಸಿದ್ದಾರೆ.
ಈ ಹಿಂದೆಯೂ ಸಹ ಇದೇ ಗ್ರಾಮದಲ್ಲಿ ಹಸುವನ್ನು ವಧಿಸಿ ಮಾಂಸ ಕೊಂಡೊಯ್ದ ಪ್ರಕರಣ ನಡೆದಿದ್ದು,ರೈತರು ತಮ್ಮ ಹಸುಗಳನ್ನು ಮೇಯಲು ಬಿಟ್ಟಾಗ ಕಳ್ಳತ ಮಾಡಿ ಹಸುವನ್ನು ಒಯ್ಯುತಿದ್ದಾರೆ.ಜೊತೆಗೆ ಅಲ್ಲಿಯೇ ಹಸುವನ್ನು ವಧಿಸಿ ಮಾಂಸ ಕೊಂಡೊಯ್ಯುತಿದ್ದು ರೈತರು ಹಸುಗಳನ್ನು ಸಾಕುವುದೇ ಕಷ್ಟ ಎನ್ನುವಂತಾಗಿದೆ.
