Honnavar: ಅಕ್ರಮ ಮರಳುಗಾರಿಕೆ ಕಣ್ಣು,ಕಿವಿ ಮುಚ್ಚಿ ಕುಳಿತ ಜಿಲ್ಲಾಡಳಿತ !ಹಸಿರು ಪೀಠದ ಆದೇಶಕ್ಕೆ ಕಿಮ್ಮತ್ತು ಇಲ್ಲ.
Honnavar: ಅಕ್ರಮ ಮರಳುಗಾರಿಕೆ ಕಣ್ಣು,ಕಿವಿ ಮುಚ್ಚಿ ಕುಳಿತ ಜಿಲ್ಲಾಡಳಿತ !ಹಸಿರು ಪೀಠದ ಆದೇಶಕ್ಕೆ ಕಿಮ್ಮತ್ತು ಇಲ್ಲ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ನದಿ ಪಾತ್ರದಲ್ಲಿ ಮರಳನ್ನು ತೆಗೆಯದಂತೆ ಹಸಿರು ಪೀಠ ಆದೇಶ ನೀಡಿದೆ. ಇದರ ಬೆನ್ನಲ್ಲೇ ಮರಳನ್ನು ತೆಗೆಯಲು ಅನುಮತಿಕೋರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಸಿರು ಪೀಠಕ್ಕೆ ಮನವಿ ಮಾಡಿತ್ತು.
ಆದರೇ ಹಸಿರು ಪೀಠ ಯಾವುದೇ ಕಾರಣಕ್ಕೆ ನದಿ ಪಾತ್ರದ ಮರಳನ್ನು ತೆಗೆಯದಂತೆ ಸೂಚಿಸಿದ್ದು ಮುಂದಿನ ಆದೇಶ ಬರುವ ವರೆಗೆ ಮರಳಿನ ದಿಬ್ಬಗಳನ್ನು ತೆಗೆಯದಂತೆ ಸೂಚಿಸಿದೆ.
ಹೀಗಿದ್ದರೂ ಜಿಲ್ಲೆಯಲ್ಲಿ ಮರಳುಗಾರಿಕೆ ಮಾತ್ರ ನಿರಂತರ ನಡೆಯುತಿದ್ದು ಆಡಳಿತವೇ ಮರಳು ದಂಧೆಕೋರರ ಜೊತೆ ಸಹಕರಿಸುತ್ತಿದೆ.
ಮಧ್ಯರಾತ್ರಿಯಾದರೇ ಮರಳು ವಹಿವಾಟು ಸಕ್ರಿಯವಾಗುತ್ತದೆ.ಜಿಲ್ಲೆಯಿಂದ ಇತರೆಡೆ ಯಾವುದೇ ಅಡೆತಡೆ ಇಲ್ಲದೇ ಕೊಂಡೊಯ್ಯಲಾಗುತ್ತಿದೆ.
ದೂರು ನೀಡಿದರೂ ಡೋಂಟ್ ಕೇರ್.
ಹೊನ್ನಾವರದಲ್ಲಿ ಶರಾವತಿ ನದಿ ಪಾತ್ರದಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿದೆ. ಪಡುಕುಳಿಯಲ್ಲಿ ಶಾರಾವತಿ ನದಿ ಪಾತ್ರದಲ್ಲಿ ಬೋಟುಗಳ ಮೂಲಕ ಮರಳನ್ನು ತೆಗೆದು ಹೊನ್ನಾವರದಲ್ಲಿ ಡಂಪ್ ಮಾಡಿ ಅಲ್ಲಿಂದ ಇತರೆಡೆ ಕಳುಹಿಸಲಾಗುತ್ತಿದೆ.ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು,ತಹಶಿಲ್ದಾರ್ ಸಶರಿದಂತೆ ಯಾರಿಗೆಲ್ಲ ದೂರು ನೀಡಬೇಕು ಎಲ್ಲರಿಗೂ ಸ್ಥಳೀಯರು ದೂರು ನೀಡಿದ್ದಾರೆ.
ಆದರೇ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಳ್ಳುತಿಲ್ಲ. ಇನ್ನು ಹಗಲು ರಾತ್ರಿ ಎನ್ನದೇ ಮರಳನ್ನು ತೆಗೆಯುತಿದ್ದು ಡಿಸೆಲ್ ಪಂಪ್ ಗಳ ಶಬ್ದಕ್ಕೆ ಇಲ್ಲಿನ ಜನ ನಿದ್ದೆಯನ್ನೇ ಮರೆಯುವಂತಾಗಿದೆ.
ಶರಾವತಿ ನದಿಗೆ ಜಾರಿದ ಮರಳು ತುಂಬಿದ ಲಾರಿ!
ಇನ್ನು ಅಕ್ರಮವಾಗಿ ಮರಳು ತುಂಬಲು ಹೋಗಿದ್ದ ಲಾರಿಯೊಂದು ನಿನ್ನೆ ರಾತ್ರಿ ಕಾಸರಕೋಡಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೇ ಲಾರಿ ನದಿಗೆ ಬೀಳುತ್ತಿರುವ ವಿಷಯ ತಿಳಿಯುತಿದ್ದಂತೆ ರಾತ್ರೋ ರಾತ್ರಿ ಲಾರಿಯನ್ನು ಮೇಲೆತ್ತಿ ಅಲ್ಲಿಂದ ತೆಗೆದುಕೊಂಡು ಹೋಗಲಾಗಿದ್ದು ಯಾವ ಮಾಹಿತಿಯೂ ತಿಳಿಯದಂತೆ ಮುಚ್ಚಿಡಲಾಗಿದೆ. ಆದರೇ ಸ್ಥಳೀಯರೊಬ್ಬರು ತೆಗೆದ ವಿಡಿಯೋ ವೈರಲ್ ಆಗಿದೆ. ಆದ್ರೆ ಈ ಘಟನೆ ಬಗ್ಗೆ ಈವರೆಗೂ ದೂರು ದಾಖಲಾಗಿಲ್ಲ.
ಅಧಿಕಾರಿಗಳಿಗೂ ಡೋಂಟ್ ಕೇರ್!
ಇನ್ನು ಈ ಹಿಂದೆ ಗಣಿ ಇಲಾಖೆ ಅಧಿಕಾರಿಗಳು ಅಕ್ರಮ ಮರಳನ್ನು ಜಪ್ತು ಪಡಿಸಿಕೊಳ್ಳಲು ಹೋದಾಗ ಅವರಮೇಲೆಯೇ ದಾಳಿ ಮಾಡಿದ್ದಾರೆ ಅಕ್ರಮ ಮರಳು ದಂಧೆ ಕೋರರು. ಈ ಬಗ್ಗೆ ಹೊನ್ನಾವರ ಹಾಗೂ ಕುಮಟಾ ದಲ್ಲಿ ದೂರು ದಾಖಲಾಗಿದೆ.
ಇದಾದ ನಂತರ ಅಧಿಕಾರಿಗಳ್ಯಾರೂ ಇತ್ತ ಬರುವುದನ್ನ ಬಿಟ್ಟಿದ್ದು ದೂರು ಬಂದರೂ ಡೋಂಟ್ ಕೇರ್ ಎನ್ನುತಿದ್ದಾರೆ.