Train news: ನದಿಯ ಸೇತುವೆ ಮೇಲೆ ನಿಂತ ಇಂಟರ್ ಸಿಟಿ ರೈಲು ! ಆಗಿದ್ದೇನು?
Train news: ನದಿಯ ಸೇತುವೆ ಮೇಲೆ ನಿಂತ ಇಂಟರ್ ಸಿಟಿ ರೈಲು ! ಆಗಿದ್ದೇನು?
Shivamogga :- ತಾಂತ್ರಿಕ ಸಮಸ್ಯೆಯಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸುವ ಮೈಸೂರು ತಾಳಗುಪ್ಪ ಇಂಟರ್‌ಸಿಟಿ (intercity) ಎಕ್ಸ್‌ಪ್ರೆಸ್ ರೈಲು(train) ಶಿವಮೊಗ್ಗದ ತುಂಗಾ ನದಿ ಸೇತುವೆ ಹಲವು ಸಮಯ ದಿಡೀರನ್ ಇದರಿಂದ ಪ್ರಯಾಣಿಕರು ಆತಂಕಕ್ಕೀಡಾಗುವಂತೆ ಮಾಡಿತು.
ಇದನ್ನೂ ಓದಿ:-Shivamogga ನಾಳೆ ಅರ್ಧ ದಿನ ಬಂದ್ !
ಇನ್ನೇನು ಶಿವಮೊಗ್ಗ (shivamogga)ನಿಲ್ದಾಣ ಬಂತು ಎಂದು ಪ್ರಯಾಣಿಕರು ತಮ್ಮ ಲಗೇಜ್ ನೊಂದಿಗೆ ಇಳಿಯಲು ಸಿದ್ದವಾಗಿದ್ದರು. ಆದರೇ ಸೇತುವೆ ಮೇಲೆ ನಿಂತ ಕಾರಣ ಭಯ ಪಟ್ಟ ಪ್ರಯಾಣಿಕರು ಏನಾಯ್ತು ಎಂಬುದು ಅರಿವಿಗೆ ಬರಲಿಲ್ಲ.
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬೆಳಗ್ಗೆ 11.09ಕ್ಕೆ ಭದ್ರಾವತಿಯಿಂದ ಹೊರಟಿದ್ದ ಇಂಟರ್‌ಸಿಟಿ (intercity) ರೈಲು ಬೆಳಗ್ಗೆ 11.43ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ತಲುಪಿಸಿದೆ. ಸುಮಾರು 20 ನಿಮಿಷ ತುಂಗಾ ನದಿ ಸೇತುವೆ ಮೇಲೆಯೆ ರೈಲು ನಿಂತಿತ್ತು. ಇಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ನಿಂತಿತ್ತು ಎಂದು ತಿಳಿದು ಬಂದಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಿಕೊಂಡು ತೆರಳಿದ್ದು ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.