Karwar:ಕೊಡಸಳ್ಳಿ ಗುಡ್ಡ ಕುಸಿತ:ಆರು ಜನರ ರಕ್ಷಣೆ ,ಪರೀಕ್ಷೆ ಬರೆಯಲು ಜೀವ ಪಣಕ್ಕಿಟ್ಟ ವಿದ್ಯಾರ್ಥಿನಿ!
Karwar:ಕೊಡಸಳ್ಳಿ ಗುಡ್ಡ ಕುಸಿತ:ಆರು ಜನರ ರಕ್ಷಣೆ ,ಪರೀಕ್ಷೆ ಬರೆಯಲು ಜೀವ ಪಣಕ್ಕಿಟ್ಟ ವಿದ್ಯಾರ್ಥಿನಿ!

ಕಾರವಾರ :- ಉತ್ತರ ಕನ್ನಡ(uttara kannada) ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ- ಕೊಡಸಳ್ಳಿ ಭಾಗದ ರಸ್ತೆಮೇಲೆ ಗುಡ್ಡ ಕುಸಿದು ಗುರುವಾರ ಸಂಚಾರ ಬಂದ್ ಆಗಿದೆ.
ಮತ್ತೆ ಹೆಚ್ಚು ಗುಡ್ಡ ಕುಸಿಯುವ ಸಾಧ್ಯತೆ ಯನ್ನು ಭೂ ವಿಜ್ಞಾನಿಗಳು ಮಾಹಿತಿ ನೀಡಿದ್ದರಿಂದ ಕದ್ರಾ- ಕೊಡಸಳ್ಳಿ ಭಾಗದಲ್ಲಿ ಕುಸಿದ ಗುಡ್ಡದ ಮಣ್ಣನ್ನು ತೆಗೆಯದಂತೆ ಜಿಲ್ಲಾಡಳಿತ ಸೂಚಿಸಿದ್ದು, ಈ ಭಾಗದ ಜನರ ಸಂಚಾರಕ್ಕೂ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ:-Karwar ಕದ್ರಾ ಬಳಿಯ ಕೊಡಸಳ್ಳಿ ಡ್ಯಾಮ್ ಬಳಿ ಭೂ ಕುಸಿತ
ಇನ್ನು ಗುರುವಾರ ಬೆಳಗ್ಗೆ ಗುಡ್ಡ ಕುಸಿದಿದ್ದರಿಂದ ಕೊಡಸಳ್ಳಿ ಭಾಗದ ಬಾಳೆಮನೆ,ಸುಳಗೇರಿ , ಭಾಗಕ್ಕೆ ತೆರಳಿದ್ದ ಬಸ್ ಸಹ ಗ್ರಾಮದಲ್ಲೇ ಸಿಲುಕುವಂತಾಗಿದೆ. ಇನ್ನು ಕೊಡಸಳ್ಳಿ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ 25 ಜನ ಕಾರ್ಯ ನಿರ್ವಹಿಸುತಿದ್ದು ಇವರು ಸಹ ತೆರಳಲಾಗದೇ ಅಲ್ಲಿಯೇ ಉಳಿಯುವಂತಾದರೇ ,ಸುಳಗೇರಿಯ ತನ್ನ ಮನೆಗೆ ಬಂದಿದ್ದ ಸಾನಿಯಾ ಕೂಡ ತನ್ನೂರಿನಲ್ಲೇ ಸಿಲುಕಿದ್ದಾರೆ.

ದ್ವಿತೀಯ ವರ್ಷದ ಬಿಸಿಎ (BCA)ಯನ್ನು ಕಾರವಾರದ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಗೆ ಶುಕ್ರವಾರ ಪರೀಕ್ಷೆ ಸಹ ಇದ್ದು ಪರೀಕ್ಷೆಗೆ ಹಾಜುರಾಗಲು ಈ ವಿದ್ಯಾರ್ಥಿನಿ ಕಾಲು ನಡಿಗೆಯಲ್ಲೇ ಊರಿನಿಂದ ಐದು ಕಿಲೋಮೀಟರ್ ನಡೆದುಬಂದು ಕಾಳಿ ನದಿ ತೀರ ಭಾಗದಿಂದ ನದಿ ದಾಟಿ ಹೋಗಲು ಪ್ರಯತ್ನಿಸಿದ್ದು ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳು ಕೊಡಸಳ್ಳಿ ವಿದ್ಯುತ್ ಗಾರದಲ್ಲಿ ಸಿಲುಕಿದ್ದ ಐದು ಜನರೊಂದಿಗೆ ಈ ವಿದ್ಯಾರ್ಥಿನಿಯನ್ನು ಸಹ ನದಿ ತೀರಭಾಗದ ಭೂ ಕುಸಿತ ಪ್ರದೇಶದ ಅಂಚಿನಲ್ಲಿ ಮರದ ದಿಮ್ಮಿಗಳನ್ನು ಜೋಡಿಸಿ ಸುರಕ್ಷಿತವಾಗಿ ಕದ್ರಾ ಟೌನ್ ಗೆ ಕಳುಹಿಸಿಕೊಟ್ಟಿದ್ದಾರೆ.



ನಂತರ ಈಕೆ ಕದ್ರಾ ದಿಂದ ಮಧ್ಯಾಹ್ನದ ವೇಳೆ ಕಾರವಾರ ಸೇರಿದ್ದಾಳೆ. ನಾನು ಪ್ರತಿ ದಿನ ಕಾರವಾರ ದಿಂದ ಸುಳಗೇರಿಗೆ ಬಸ್ ನಲ್ಲಿ ಓಡಾಡುತ್ತೇನೆ ,ನನ್ನಂತೆ ಹಲವು ಶಾಲಾ ವಿದ್ಯಾರ್ಥಿಗಳು ಸಹ ಓಡಾಡುತ್ತಾರೆ. ಈಗ ಭೂ ಕುಸಿತವಾದ್ದರಿಂದ ಕಾಲೇಜು,ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಹೋಗಲು ಬಸ್ ಸಹ ಇಲ್ಲ ,ದಾರಿಯೂ ಇಲ್ಲ, ಊರಿನಲ್ಲಿ ವಯಸ್ಸಾದವರು ,ಅನಾರೋಗ್ಯ ಪೀಡಿತರು ಸಹ ಇದ್ದಾರೆ ,ಅವರಿಗೆಲ್ಲಾ ಸಮಸ್ಯೆ ಆಗಿದೆ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾಳೆ.

ಇನ್ನು ಸದ್ಯ ಈ ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಕಾರಣ ಈ ಭಾಗದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊಡಸಳ್ಳಿ ಮೂಲಕ ಯಲ್ಲಾಪುರ ಭಾಗಕ್ಕೆ ರಸ್ತೆ ಇದ್ದರೂ ವಾಹನಗಳ ಓಡಾಟ ಇಲ್ಲ. ಬಸ್ ಗಳು ಸಹ ಇಲ್ಲ ಹೀಗಾಗಿ ಜನರು ಕದ್ರಾ ಭಾಗದ ನದಿಯ ತಡವೇ ಅನಿವಾರ್ಯವಾಗಿದೆ .ಬಾಳೆಮನೆ,ಸುಳಗೇರಿ ,ಕೊಡಸಳ್ಳಿ ಗ್ರಾಮದ ಜನ ಕನಿಷ್ಟ ಹತ್ತು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ನಡೆದುಬರಬೇಕಾದ ಅನಿವಾರ್ಯತೆ ಇದ್ದು ನಡೆದು ಬಂದರೂ ಕದ್ರಾ ಭಾಗಕ್ಕೆ ತೆರಳಲು ಹದಿನೆಂಟು ಕಿಲೋ ಮೀಟರ್ ಗೆ ವಾಹನ ವ್ಯವಸ್ಥೆ ಇಲ್ಲ . ಹೀಗಾಗಿ ಗ್ರಾಮದ ಜನ ಸಮಸ್ಯೆ ಎದುರಿಸುವಂತಾಗಿದೆ.
6 ಜನರನ್ನು ಸುರಕ್ಷಿತವಾಗಿ ಕರೆತಂದ ಅಗ್ನಿಶಾಮಕ ದಳ ಸಿಬ್ಬಂದಿ
ಇನ್ನು ಕೊಡಸಳ್ಳಿ ವಿದ್ಯುತ್ ಗಾರದಲ್ಲಿ ಕಾರ್ಯನಿರ್ವಹಿಸುತಿದ್ದ ಐದು ಜನ ಹಾಗೂ ಓರ್ವ ವಿದ್ಯಾರ್ಥಿನಿಯನ್ನು ಸುರಕ್ಷಿತವಾಗಿ ಕದ್ರಾ ಭಾಗಕ್ಕೆ ಕರೆತರಲಾಗಿದೆ. ಗುಡ್ಡ ಕುಸಿತವಾದ ಭಾಗದ ನದಿ ಪಾತ್ರದ ತೀರದಲ್ಲಿ ಮರದ ಸಂಕ ನಿರ್ಮಿಸಿ ಕೊಡಸಳ್ಳಿ ಭಾಗಕ್ಕೆ ತೆರಳುವ ಕೆಪಿಸಿ ಸಿಬ್ಬಂದಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಎರಡು ಬೋಟುಗಳನ್ನು ರಕ್ಷಣಾ ಕಾರ್ಯಕ್ಕೆ ಸಿದ್ದವಾಗಿಎಲಾಗಿದ್ದು ಅಗತ್ಯ ವಸ್ತುಗಳನ್ನು ಬಾಳೆಮನೆ,ಸುಳಗೇರಿ ,ಕೊಡಸಳ್ಳಿ ಗೆ ತಲುಪಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ.