ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shivamogga ನಾಳೆ ಅರ್ಧ ದಿನ ಬಂದ್ !

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ (Kashmir Pahalgam Terror Attack) ಬಲಿಯಾದ ಮಂಜುನಾಥ್‌ ರಾವ್‌ ಅವರ ಪಾರ್ಥೀವ ಶರೀರ ಏ.24 ರಂದು ಬೆಳಗ್ಗೆ ಶಿವಮೊಗ್ಗ ನಗರಕ್ಕೆ ಆಗಮಿಸಿಲಿದೆ.
09:34 PM Apr 23, 2025 IST | ಶುಭಸಾಗರ್

Shivamogga ನಾಳೆ ಅರ್ಧ ದಿನ ಬಂದ್ !

Advertisement

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ (Kashmir Pahalgam Terror Attack) ಬಲಿಯಾದ ಮಂಜುನಾಥ್‌ ರಾವ್‌ ಅವರ ಪಾರ್ಥೀವ ಶರೀರ ಏ.24 ರಂದು ಬೆಳಗ್ಗೆ ಶಿವಮೊಗ್ಗ ನಗರಕ್ಕೆ ಆಗಮಿಸಿಲಿದೆ. ಹೀಗಾಗಿ ಅಂತ್ಯಸಂಸ್ಕಾರ ನೆರವೇರಿಸುವ ಹಿನ್ನೆಲೆ ಅರ್ಧದಿನ ಶಿವಮೊಗ್ಗ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್‌.ಎನ್‌ ಚನ್ನಬಸಪ್ಪ (SN Channabasappa) ತಿಳಿಸಿದರು.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್‌ ರಾವ್‌ ಅವರ ಮನೆ ಮುಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ಬೆಳಗ್ಗೆ 9 ಗಂಟೆ  ಮೃತದೇಹ ನಗರಕ್ಕೆ ಬರಲಿದೆ. ಮಧ್ಯಾಹ್ನ 12.30ರ ವರೆಗೆ ಧಾರ್ಮಿಕ ವಿಧಿ ವಿಧಾನ ಪೂರೈಸಲಾಗುವುದು,ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಇರಲಿದೆ ಇದಾದ ನಂತರ ನಗರದಲ್ಲಿ ಮೆರವಣಿಗೆ ನಡೆಯಲಿದ ಎಂದು ತಿಳಿಸಿದರು.

ನಗರದ ಸಾಗರ ರಸ್ತೆ, ಐಬಿ ಸರ್ಕಲ್, ಕುವೆಂಪು ರಸ್ತೆ, ಜೈಲ್ ವೃತ್ತ, ನೆಹರೂ ರಸ್ತೆ, ಬಿ.ಹೆಚ್‌.ರಸ್ತೆ, ಶಂಕರಮಠ ಸರ್ಕಲ್‌ನಲ್ಲಿ ಮೆರವಣಿಗೆ ಮೂಲಕ ರೋಟರಿ ಚಿತಾಗಾರಕ್ಕೆ ತಲುಪಲಿದೆ.

Advertisement

ಸೂರ್ಯ ಭಟ್ಟರ ಪುತ್ರ ಗುಂಡಾ ಭಟ್ಟರಿಂದ ಅಂತಿಮ ವಿಧಿವಿಧಾನ ನೆರವೇರಿಸುತ್ತಾರೆ. ಆಡಳಿತದಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಡ್ಡಿ ಆತಂಕ ಇಲ್ಲದೇ ಕಾರ್ಯಕ್ರಮ ನಡೆಯಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಂತಿಮ ವಿಧಿವಿಧಾನಕ್ಕೆ ಬರುತ್ತಾರೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದರು.

ಇದೇ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ಗರ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್‌ ರಾವ್‌ ಮೃತಪಟ್ಟಿದ್ದರು.

ಮಂಜುನಾಥ್ ಮನೆಯಲ್ಲಿ ಬಿಗಿ ಬಂದಬಸ್ತ್ 

ಕಾಶ್ಮೀರದಲ್ಲಿ ಪಹಾಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಾವನ್ನಪಿದ ರಿಯಲ್‌ ಎಸ್ಟೇಟ್‌ ಉದ್ಯಮಿ (Businessman) ಮಂಜುನಾಥ್‌ ರಾವ್‌ ಅವರ ಮೃತದೇಹ ಇಂದು ರಾತ್ರಿಯೆ ಶಿವಮೊಗ್ಗಕ್ಕೆ ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ಮಂಜುನಾಥ ರಾವ್‌ ಮನೆಗೆ ಬೆಳಗ್ಗೆಯಿಂದಲೇ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಬಂದೋಬಸ್ತ್‌ ನಿಯೋಜಿಸಲಾಗಿದೆ.

ಇದನ್ನೂ ಓದಿ:-Shivamogga ಸಿಗಂದೂರಿನಲ್ಲಿ ಸೇತುವೆಯಾದ್ರೂ ಲಾಂಚ್ ಸ್ಥಗಿತವಿಲ್ಲ -ಜಲಸಾರಿಗೆ ಮಂಡಳಿ ಕಾರ್ಯನಿರ್ವಹಣಾಧಿಕಾರಿ.

ವಿಜಯನಗರದ 3ನೇ ಅಡ್ಡರಸ್ತೆಯಲ್ಲಿ ಮಂಜುನಾಥ್‌ ಅವರ ಮನೆ ಇದೆ. ಗಣ್ಯರು, ಸಾರ್ವಜನಿಕರ ಭೇಟಿ ಹೆಚ್ಚಾದ ಹಿನ್ನೆಲೆ ನೇತಾಜಿ ವೃತ್ತದಲ್ಲಿಯೇ ಬ್ಯಾರಿಕೇಡ್‌ ಹಾಕಲಾಗಿದೆ. ಇನ್ನು, ಮನೆಗೆ ಹೋಗುವ ರಸ್ತೆಯ ಸುತ್ತಮುತ್ತಲು ಕೂಡ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅಲ್ಲದೆ ಪೊಲೀಸ್‌ ಬಂದೊಬಸ್ತ್‌ ಕೂಡ ನಿಯೋಜನೆ ಮಾಡಲಾಗಿದೆ.

Advertisement
Tags :
KarnatakaKashmirManjunathShivamoggaShivamogga bandterrorist attack
Advertisement
Next Article
Advertisement