Sirsi: ಅಬ್ಬ ನೋಡು ನೋಡುತಿದ್ದಂತೆ ಕುಸಿದ ಮನೆ ವಿಡಿಯೋ ನೋಡಿ.
ಕಾರವಾರ :- ನೋಡು ನೋಡುತ್ತಿದ್ದಂತೇ ಗುಡ್ಡದ ಪಕ್ಕದಲ್ಲಿ ಇದ್ದ ಮನೆ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರಾಠಿಕೊಪ್ಪದ ಜೋಡುಕಟ್ಟೆ ಬಳಿ ನಡೆದಿದೆ.
10:17 PM Jul 06, 2025 IST | ಶುಭಸಾಗರ್
Sirsi: ಅಬ್ಬ ನೋಡು ನೋಡುತಿದ್ದಂತೆ ಕುಸಿದ ಮನೆ ವಿಡಿಯೋ ನೋಡಿ.
Advertisement
ಕಾರವಾರ :- ನೋಡು ನೋಡುತ್ತಿದ್ದಂತೇ ಗುಡ್ಡದ ಪಕ್ಕದಲ್ಲಿ ಇದ್ದ ಮನೆ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರಾಠಿಕೊಪ್ಪದ ಜೋಡುಕಟ್ಟೆ ಬಳಿ ನಡೆದಿದೆ. ಈ ಭಾಗದಲ್ಲಿ ಗುಡ್ಡದ ತಳಭಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು ಹಲವು ಕಡೆ ಮಳೆಯಿಂದ ಕುಸಿದಿದೆ.
ರಾಧಾ ಗೋಪಾಲ ನಾಯ್ಕ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಮನೆಯ ಹಿಂಬದಿ ಮಣ್ಣು ಕುಸಿದು ಗೋಡೆಯಲ್ಲಿ ಬಿರುಕು ಮೂಡಿತ್ತು. ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ತೆರಳಿದ್ದು ಮುಂಜಾಗ್ರತಾ ಕ್ರಮವಾಗಿ ಮನೆಯವರನ್ನು ಕೂಡಾ ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿತ್ತು. ಇನ್ನು ಮನೆಯಲ್ಲಿ ಇದ್ದ ಜನರನ್ನು ಸ್ಥಳಾಂತರಿಸಲಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ದಾಖಲೆಗಾಗಿ ಸಂಜೆ ವೇಳೆ ಈ ಭಾಗದ ವಿಡಿಯೋ ಚಿತ್ರಿಸುತಿದ್ದವೇಳೆ ನೋಡು ನೋಡುತ್ತಲೇ ಮನೆಯ ಭಾಗ ಧರೆಗುರುಳಿದ ಭಾಗಶಃ ಮನೆ ಹಾನಿಯಾಗಿದೆ. ಮನೆಯ ಜನರನ್ನು ಸ್ಥಳಾಂತರಿಸಿದ್ದರಿಂದ ಮಾನವ ಹಾನಿ ತಪ್ಪಿದಂತಾಗಿದೆ.
Advertisement