Sirsi:ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ
ಕಾರವಾರ :- ಆಹಾರ ಅರಸಿ ಬಂದಿದ್ದ ಚಿರತೆಯೊಂದು ಮನೆಯೊಂದರಲ್ಲಿ ಅಡಗಿ ಕುಳಿತ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೂಲೆ ಮನೆಯಲ್ಲಿ ನಡೆದಿದೆ.
11:06 PM May 02, 2025 IST | ಶುಭಸಾಗರ್
ಆಹಾರ ಅರಸಿ ಮನೆಯಲ್ಲಿ ಅಡಗಿ ಕುಳಿತು ಚಿರತೆ
Advertisement

ಕಾರವಾರ :- ಆಹಾರ ಅರಸಿ ಬಂದಿದ್ದ ಚಿರತೆಯೊಂದು ಮನೆಯೊಂದರಲ್ಲಿ ಅಡಗಿ ಕುಳಿತ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಮೂಲೆ ಮನೆಯಲ್ಲಿ ನಡೆದಿದೆ.
ಮುಂಜಾನೆ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಲು ಸ್ನಾನ ಗೃಹಕ್ಕೆ ಬಂದ ಮನೆಯ ಯಜಮಾನ ಮಹಾಬಲೇಶ್ವರ ಹೆಗಡೆಯವರು ಚಿರತೆ ಘರ್ಜನೆ ಕೇಳಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ನೋಡಿದಾಗ ಕೃಷಿ ಉಪಕರಣಗಳನ್ನು ಇಡುವ ಜಾಗದಲ್ಲಿ ಚಿರತೆ ಅಡಗಿ ಕುಳಿತಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಚಿರತೆ ಹೊರಹೋಗುವಂತೆ ಮಾಡಿದ್ದಾರೆ.
Advertisement