Sirsi : ಶಿರಗುಣಿ ಗ್ರಾಮಕ್ಕಿಲ್ಲ ಮೂಲ ಸೌಕರ್ಯ- ಬದುಕಲು ಬಿದಿರ ಗಳವೇ ಗತಿ!
Sirsi : ಶಿರಗುಣಿ ಗ್ರಾಮಕ್ಕಿಲ್ಲ ಮೂಲ ಸೌಕರ್ಯ- ಬದುಕಲು ಬಿದಿರ ಗಳವೇ ಗತಿ!
ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಯಿತು ಎಂದರೇ ಗುಡ್ಡ ಕುಸಿತ ,ಗ್ರಾಮಗಳು ಜಲಾವೃತ , ರಸ್ತೆ ಸಂಪರ್ಕ ಕಡಿತ ಸಾಮಾನ್ಯವಾಗಿದೆ.
ಜಿಲ್ಲೆಯ ಜನ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ಇಲ್ಲಿನದ್ದು. ಹೌದು ಮನೆಯಲ್ಲಿ ಕಾಲು ಜಾರಿ ಬಿದ್ದ ವೃದ್ದೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಬಿದಿರ ಗಳದಲ್ಲಿ ಕಟ್ಟಿ ಜೋಲಿ ಮಾಡಿ ಜೀವ ಪಣಕ್ಕಿಟ್ಟು 40 ಕಿಲೋಮೀಟರ್ ಕ್ರಮಿಸಿ ಚಿಕಿತ್ಸೆ ಕೊಡಿಸಿದ ಮನಕಲಕುವ ಘಟನೆ ಜರುಗಿದೆ.
ಇದನ್ನೂ ಓದಿ:-Sirsi: ಅಂದರ್ ಬಾಹರ್ ಕೌಶಲ್ಯದ ಆಟ-ಪ್ರಕರಣದ FIR ರದ್ದು ಪಡಿಸಿದ ಹೈಕೋರ್ಟ
ಹೌದು ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ತಾಲೂಕಿನ ಶಿರಗುಣಿಯಲ್ಲಿ. ನಿನ್ನೆ ರಾತ್ರಿ ಶಿರಗುಣಿ ಗ್ರಾಮದ ಮಾದೇವಿ ಸುಬ್ರಾಯ್ ಹೆಗಡೆ(75) ಎಂಬುವವರು ಮನೆಯ ಅಂಗಳದಲ್ಲಿ ಮಳೆಗೆ ಕಾಲುಜಾರಿ ಬಿದ್ದು ಕಾಲು ಮುರಿದಿದೆ. ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ಗೆ ಕರೆ ಮಾಡಲು ನೆಟ್ವರ್ಕ ಸಂಪರ್ಕವೇ ಇಲ್ಲ. ಇನ್ನು ಮಳೆಯಿಂದ ವಿದ್ಯುತ್ ಸಂಪರ್ಕವೂ ಇಲ್ಲ. ಇನ್ನು ತಕ್ಷಣ ವಾಹನದಲ್ಲಿ ಕರೆದೊಯ್ಯಲು ರಸ್ತೆಯೇ ಸರಿ ಇಲ್ಲದೇ ಬಿದಿರ ಗಳದಲ್ಲಿ ವೃದ್ಧೆಯನ್ನು ಜೋಲಿಮಾಡಿ ಕಟ್ಟಿ ಬುಜದಲ್ಲಿ ಹೊತ್ತು ಐದಕ್ಕೂ ಹೆಚ್ಚು ಕಿಲೋಮೀಟರ್ ದೂರ ದುರ್ಗಮ ಹಾದಿಯಲ್ಲಿ ಜೀವ ಪಣಕ್ಕಿಟ್ಟು ಮಳೆಯಲ್ಲೇ ತೆರಳಿದ್ದಾರೆ.

ನಂತರ ಸಂಪರ್ಕದ ರಸ್ತೆಗೆ ಬಂದು ಸಿಕ್ಕ ವಾಹನದಲ್ಲಿ ಹಾಕಿಕೊಂಡು ಶಿರಸಿಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ಮನಕಲಕುವ ಘಟನೆ ಜರುಗಿದೆ.
ಇನ್ನು ಈ ಗ್ರಾಮದಲ್ಲಿ ಪ್ರತಿ ವರ್ಷ ಮಳೆ ಬಂತು ಎಂದರೇ ವಾಹನವಿರಲಿ ,ಹೆಜ್ಜೆ ಹಾಕುವುದೂ ಕಷ್ಟಕರ , ರಸ್ತೆ ಮಾಡಿಕೊಡುವಂತೆ ಕಚೇರಿಗಳಿಗೆ ಇಲ್ಲಿನ ಜನ ಚಪ್ಪಲಿ ಸವಿಸಿದ್ದಾರೆ. ಇಲ್ಲಿನ ಶಾಸಕ ಭೀಮಣ್ಣ ನಾಯ್ಕ ರವರಿಗೂ ಮನವಿ ಮಾಡಿದ್ದಾರೆ. ಆದರೇ ಗ್ರಾಮಕ್ಕೆ ರಸ್ತೆಮಾಡುವ ಔದಾರ್ಯ ಮಾತ್ರ ತೋರಿಲ್ಲ.
ಮಳೆ ಪ್ರಾರಂಭವಾದಾಗಿನಿಂದ ಈ ಗ್ರಾಮದ ಜನ ನಗರ ಸಂಪರ್ಕ ಕಡಿತವಾಗುತ್ತದೆ. ಈ ಗ್ರಾಮದಲ್ಲಿ 80 ಕ್ಕೂ ಹೆಚ್ಚು ಹವ್ಯಕ ಮನೆಗಳಿವೆ. ಊರಿನಲ್ಲಿ ಅಂಗನವಾಡಿ ಇದೆ.ಶಾಲೆಗೆ ಹೋಗುವ ಮಕ್ಕಳಿದ್ದಾರೆ.

ಮಳೆ ಹೆಚ್ಚಾದಾಗ ಕೆಸರು,ನೀರು ತುಂಬಿಕೊಂಡು ಮಕ್ಕಳು ಶಾಲೆಗೆ ತೆರಳುವುದೇ ತ್ರಾಸದಾಯಕ ಸಾಹಸ. ಹೀಗಿರುವ ಈ ಗ್ರಾಮಕ್ಕೆ ಯಾವ ಸೌಕರ್ಯ ಕೊಡದಿದ್ದರೂ ,ಕೊನೆ ಪಕ್ಷ ರಸ್ತೆ ಮಾಡಿಕೊಟ್ಟರೇ , ಬಿದಿರಿನ ಗಳವನ್ನ ನಂಬಿ ಬದುಕು ಬಿಗಿಹಿಡಿದು ಕುಳಿತಿರುವ ಈ ಗ್ರಾಮದ ಜನ ನಿಟ್ಟುಸಿರು ಬಿಡಬಹುದಾಗಿದೆ.
ಇನ್ನಾದರೂ ಜಡ್ಡು ಹಿಡಿದ ಆಡಳಿತ ,ಬಿಟ್ಟಿ ಭ್ಯಾಗ್ಯ ನೀಡುವ ಸರ್ಕಾರ ಇತ್ತ ಗಮನ ಹರಿಸಿ ರಸ್ತೆ ಭಾಗ್ಯ ಕಲ್ಪಿಸಿ ಜನರ ಬದುಕಿಗೆ ಗ್ಯಾರಂಟಿ ಭಾಗ್ಯ ನೀಡಲಿ.