ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shirur: ಶಿರೂರು ಗುಡ್ಡ ಕುಸಿಯುವ ಹಿನ್ನಲೆ- ನಿಷೇಧಾಜ್ಞೆ ಜಾರಿ

ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು (shirur)ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇರುವ ಗ್ರಾಮದ ಜನರು ಗುಡ್ಡದ ಸಮೀಪ ನಿಲ್ಲದಂತೆ ಹಾಗೂ ಫೋಟೋ ಶೂಟ್ ಮಾಡದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ  ಆದೇಶ ಮಾಡಿದ್ದಾರೆ.
08:20 PM May 22, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು (shirur)ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇರುವ ಗ್ರಾಮದ ಜನರು ಗುಡ್ಡದ ಸಮೀಪ ನಿಲ್ಲದಂತೆ ಹಾಗೂ ಫೋಟೋ ಶೂಟ್ ಮಾಡದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ  ಆದೇಶ ಮಾಡಿದ್ದಾರೆ.

Shirur: ಶಿರೂರು ಗುಡ್ಡ ಕುಸಿಯುವ ಹಿನ್ನಲೆ- ನಿಷೇಧಾಜ್ಞೆ ಜಾರಿ.

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು (shirur)ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇರುವ ಗ್ರಾಮದ ಜನರು ಗುಡ್ಡದ ಸಮೀಪ ನಿಲ್ಲದಂತೆ ಹಾಗೂ ಫೋಟೋ ಶೂಟ್ ಮಾಡದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ  ಆದೇಶ ಮಾಡಿದ್ದಾರೆ.

ಇದಲ್ಲದೇ ಗುಡ್ಡದ ಪಕ್ಕದಲ್ಲೇ ಇರುವ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಹಾಗೂ ಸಾರ್ವಜನಿಕರು ಇಳಿಯುವುದಕ್ಕೆ ನಿರ್ಭಂದ ವಿಧಿಸಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇದನ್ನೂ ಓದಿ:-Karwar: ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕಿಸ್ತಾನಿ ಪ್ರಜೆ !

Advertisement

ಕಳೆದವರ್ಷ ಜುಲೈ 16 ರಂದು ಶಿರೂರಿನಲ್ಲಿ  ಗುಡ್ಡ ಕುಸಿತದಿಂದ 11 ಜನ ಮೃತಪಟ್ಟಿದ್ದರು. ಈವರೆಗೂ ಇಬ್ಬರ ಶವ ದೊರಕಬೇಕಿದೆ. ಹೀಗಿದ್ದರೂ ಈ ಭಾಗದ ಗಂಗಾವಳಿ ನದಿ ಭಾಗದಲ್ಲಿ ಬಿದ್ದ ಮಣ್ಣನ್ನು ತೆರವು ಮಾಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನು ಹೆದ್ದಾರಿಯ ಇನ್ನೊಂದು ಭಾಗದಲ್ಲಿ ಮಣ್ಣು ತೆಗೆದಿಲ್ಲ. ಈ ಭಾಗದಲ್ಲಿ ಇದೀಗ ಮಣ್ಣು ಜರಿಯುತಿದ್ದು ಈ ಹಿನ್ನಲೆಯಲ್ಲಿ ಈ ನಿರ್ಬಂಧ ಮಾಡಲಾಗಿದೆ.

ಜಿಲ್ಲಾಧಿಕಾರಿ ಆದೇಶ ಪ್ರತಿಯಲ್ಲಿ ಏನಿದೆ?

 2024 ನೇ ಸಾಲಿನಲ್ಲಿ ದಿನಾಂಕ 19-07-2024 ರಂದು ಅಂಕೋಲಾ ತಾಲೂಕಿನ ಬಳಲೆ ಹೋಬಳಿ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಶಿರೂರು ಗ್ರಾಮ ವ್ಯಾಪ್ತಿಯ 147 300 ರಿಂದ ಕೋಡ್ಸಣಿ ಗ್ರಾಮದ ವ್ಯಾಪ್ತಿಯ 148 800 ಚೈನೆಜ್ ನಡುವೆ ಭಾರಿ ಗುಡ್ಡ ಕುಸಿತ ಉಂಟಾಗಿ 10 ಜನ ಮೃತಪಟ್ಟಿದ್ದು 2 ಕಾಣೆಯಾಗಿದ್ದು, ಈ ಸ್ಥಳವು ಭೂಕುಸಿತ ಸೂಕ್ಷ್ಮ ಪ್ರದೇಶವಾಗಿರುತ್ತದೆ.

ಪ್ರಸ್ತುತ ವರ್ಷದ ಮಳೆಗಾಲವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ ಅಂಕೋಲಾ ರವರು ಸ್ಥಳ ಪರಿಶೀಲನೆ ಕೈಗೊಂಡ ಅವಧಿಯಲ್ಲಿ ಗುಡ್ಡದ ಕೆಲವು ಭಾಗಗಳಲ್ಲಿ ಮಣ್ಣು ಸಡಿಲುಗೊಂಡು ನೆಲಕ್ಕೆ ಉರುಳುತ್ತಿರುವುದು ಕಂಡುಬoದಿದ್ದು, ಈ ವರ್ಷವು ಸಹ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಪ್ರಸ್ತುತ ಈ ಸ್ಥಳದಲ್ಲಿ ಹಲವಾರು ಟ್ರಕ್‌ಗಳು ಹಾಗೂ ಕೆಲ ಪ್ರವಾಸಿಗರು ಈ ಪ್ರದೇಶದಲ್ಲಿ ನಿಂತು ಫೋಟೋಗಳನ್ನು ತೆಗೆಯುವುದು ನದಿಯ ನೀರಿನಲ್ಲಿ ಸ್ನಾನ ಮಾಡುವುದು ಅಥವಾ ವಾಹನ ನಿಲ್ಲಿಸಿ ಅದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಪ್ರಾರಂಭಗೊ0ಡಿರುವುದರಿ0ದ ಹಾಗೂ ಹವಾಮಾನ ರೆಡ್ ಆಲರ್ಟ ಘೋಷಣೆ ಮಾಡಿರುವುದರಿಂದ ಮತ್ತು ಮುಂಗಾರು ಸಹ ಶೀಘ್ರದಲ್ಲಿ ಆರಂಭಗೊಳ್ಳುವುದರಿoದ ಅಂಕೋಲಾ ತಾಲೂಕಿನ ಬಳಲೆ ಹೋಬಳಿಯ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಚೈನೇಜ್ 147 300 ರಿಂದ 148 800 ವರೆಗಿನ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಹಾಗೂ ಅದರ ಮುಂಭಾಗದಲ್ಲಿ ಇರುವ ಗಂಗಾವಳಿ ನದಿಯ ವ್ಯಾಪ್ತಿಯನ್ನು ಆಪಾಯಕಾರಿ ವಲಯವೆಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಘೋಷಿಸಿ , ಈ ಭಾಗದ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಅಥವಾ ಸಾರ್ವಜನಿಕರು ನದಿಗೆ ಇಳಿಯುವುದು , ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವುದು, ಸ್ಥಳದಲ್ಲಿ ನಿಂತು ಭಾವಚಿತ್ರಗಳನ್ನು ತೆಗೆಯವುದು ಹಾಗೂ ಇತರೇ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ , ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಪ್ರತಿ
Advertisement
Tags :
AnkolaDc orderRainShirur landslideನಿಷೇಧಾಜ್ಞೆ ಜಾರಿಶಿರೂರು ಭೂಕುಸಿತ
Advertisement
Next Article
Advertisement