For the best experience, open
https://m.kannadavani.news
on your mobile browser.
Advertisement

Bhatkal: ಎಮ್ಮೆ ಕಡಿದು ತಲೆ ಎಸೆದುಹೋದ ಮದರಸಾ ಶಿಕ್ಷಕನ ಬಂಧನ!

ಉತ್ತರ ಕನ್ನಡ(uttara kannada) ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ನೀರಗದ್ದೆ ಗುಡ್ಡದ ಮೇಲೆ ಎಮ್ಮೆ ಕಡಿದು ತಲೆಯನ್ನು ಎಸದು ಹೋದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮದರಸ ದಲ್ಲಿನ ಶಿಕ್ಷಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
10:52 PM Jul 05, 2025 IST | ಶುಭಸಾಗರ್
ಉತ್ತರ ಕನ್ನಡ(uttara kannada) ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ನೀರಗದ್ದೆ ಗುಡ್ಡದ ಮೇಲೆ ಎಮ್ಮೆ ಕಡಿದು ತಲೆಯನ್ನು ಎಸದು ಹೋದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮದರಸ ದಲ್ಲಿನ ಶಿಕ್ಷಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
bhatkal  ಎಮ್ಮೆ ಕಡಿದು ತಲೆ ಎಸೆದುಹೋದ ಮದರಸಾ ಶಿಕ್ಷಕನ ಬಂಧನ

Bhatkal: ಎಮ್ಮೆ ಕಡಿದು ತಲೆ ಎಸೆದುಹೋದ ಮದರಸಾ ಶಿಕ್ಷಕನ ಬಂಧನ!

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಉತ್ತರ ಕನ್ನಡ(uttara kannada) ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿ ನೀರಗದ್ದೆ ಗುಡ್ಡದ  ಮೇಲೆ ಎಮ್ಮೆ ಕಡಿದು ತಲೆಯನ್ನು ಎಸದು ಹೋದ  ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮದರಸ ದಲ್ಲಿನ ಶಿಕ್ಷಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಘಟನೆ ಏನು?

ಹೊನ್ನಪ್ಪ ಈರಯ್ಯ ನಾಯ್ಕ ಸತ್ಯನಾರಾಯಣ ನಗರ ಮುಂಡಳ್ಳಿ ಇವರ  ಕೊಟ್ಟಿಗೆಯಲ್ಲಿ ಕಟ್ಟಿದ್ದ

ಎಮ್ಮೆಯನ್ನು ಕಳ್ಳತನ ಮಾಡಿಕೊಂಡು ಬಂದು ಹಿಂಸಾತ್ಮಕವಾಗಿ ವಧೆ ಮಾಡಿ ತಲೆಯನ್ನು ಕತ್ತರಿಸಿ   ಮುಂಡಳ್ಳಿ ನೀರಗದ್ದೆಯ ಮಾರಕಲ್ಲ ಗದ್ದೆಯ  ಖಾಲಿ ಜಮೀನಿನಲ್ಲಿ  ಬಿಸಾಡಿ ಹೋಗಿದ್ದ ಬಗ್ಗೆದೂರು‌‌ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು  ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:-Bhatkal: ಚಿನ್ನದ ಹೂಡಿಗೆ ಭಟ್ಕಳದ ಉದ್ಯಮಿಗೆ ವಂಚನೆ!

ಹಾವೇರಿ ಮೂಲದ ಹಾನಗಲ್ ನಿವಾಸಿ ಅಬ್ದುಲ್ ಹುಸೇನ್ (22) ಭಟ್ಕಳದ(bhatkal) ಕಾರಗದ್ದೆಯ ಮೊಹಮ್ಮದ್ ಇಬ್ರಾಹಿಂ (55) ಎಂಬಾತನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜುರು ಪಡಿಸಿದ್ದಾರೆ.

ಭಟ್ಕಳದ ಕಾರಗದ್ದೆಯ ಮೊಹಮದ್ ಇಬ್ರಾಹಿಂ ಮದರಸ ಒಂದರಲ್ಲಿ ಶಿಕ್ಷಕನಾಗಿದ್ದಾನೆ.ಶಿಕ್ಷಕನಾಗಿಯೂ ಸಹ ಈತ ಗೋ ಕಳ್ಳತನ ಮಾಡುತಿದ್ದು ಪೊಲೀಸರು ಇಬ್ಬರ ಹೆಡೆಮುರಿ ಕಟ್ಟಿದ್ದಾರೆ.

ಪ್ರಕರಣ ಬೇಧಿಸುವಲ್ಲಿ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕರಾದ  ಮಂಜುನಾಥ ಎ ಲಿಂಗಾರೆಡ್ಡಿ ಹಾಗೂ ಗ್ರಾಮೀಣ ಠಾಣೆ ಪಿ.ಎಸ್ ಐ ರನ್ನಗೌಡ ಅವರ ನೇತ್ರತ್ವದಲ್ಲಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದಾರೆ. ಈ ಹಿಂದೆ ಹೊನ್ನಾವರ ಕವಲಕ್ಕಿ ಭಾಗದಲ್ಲಿ ಗೋವನ್ನು ಕದ್ದು ಮಾಂಸಕ್ಕಾಗಿ ಕಡಿದು ತಲೆ ಮತ್ತು ಗೋವಿನ ಹೊಟ್ಟೆಯಲ್ಲಿದ್ದ ಕರುವನ್ನು ಎಸೆದುಹೋಗಿದ್ದ ಪ್ರಕರಣ ರಾಜ್ಯದಲ್ಲಿ ಸಹ ಸದ್ದುಮಾಡಿತ್ತು. ಇದರ ನಂತರ ಜಿಲ್ಲೆಯಲ್ಲಿ ಗೋ ಕಳ್ಳರನ್ನು ಸದೆ ಬಡಿಯುವಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ