Yallapur :ಆಲದ ಮರ ಬಿದ್ದು ಗರ್ಭಿಣಿ ಮಹಿಳೆ ಸಾವು: ಏಳು ಜನರಿಗೆ ಗಾಯ
Yallapur :ಆಲದ ಮರ ಬಿದ್ದು ಗರ್ಭಿಣಿ ಮಹಿಳೆ ಸಾವು: ಏಳು ಜನರಿಗೆ ಗಾಯ
ಕಾರವಾರ :- ಅಂಗನವಾಡಿ ಬಳಿ ಆಲದಮರ ಕುಸಿದು ಗರ್ಭಿಣಿ ಮಹಿಳೆ ಸಾವು ಕಂಡು ಏಳು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಡೊಮಗೇರಿ ಬಳಿಯ ಕಿರವತ್ತಿಯಲ್ಲಿ ನಡೆದಿದೆ.
Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ
ಸಾವಿತ್ರಿ ಬಾಬು ಖರಾತ್ (28), ಸಾವಿಗೀಡಾದ 5 ತಿಂಗಳ ಗರ್ಭಿಣಿ ಮಹಿಳೆಯಾಗಿದ್ದು , ಘಟನೆಯಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯವಾಗಿದ್ದರೇ ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸಾವಿತ್ರಿ ಬಾಬು ಖರಾತ್ ರವರು ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ ಆಲದ ಮರ ದಿಢೀರ್ ಕುಸಿತವಾಗಿದ್ದರಿಂದ ಮರದ ಅಡಿ ಸಿಲುಕಿ ದಾರುಣ ಸಾವು ಕಂಡರೇ ಮಕ್ಕಳು ಹಾಗೂ ಇತರರು ಅಲ್ಲಿಯೇ ತೆರಳುತಿದ್ದಾಗ ಈ ಘಟನೆ ನಡೆದಿದೆ.ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನೆ ಮಾಡಿದ್ದು ,ಉಳಿದವರಿಗೆ ಯಲ್ಲಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆಲದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಸಹ ತುಂಡಾಗಿ ನೆಲಕ್ಕುರುಳಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.