For the best experience, open
https://m.kannadavani.news
on your mobile browser.
Advertisement

Bhatkal:ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ|ಏನಿದು ಇ-ಸಿಗರೇಟ್ ,ನಿಷೇಧ ಏಕೆ ಗೊತ್ತಾ?

ಭಟ್ಕಳದಲ್ಲಿ ನಿಷೇಧಿತ ಇ-ಸಿಗರೇಟ್ ವಶಕ್ಕೆ|2.39 ಲಕ್ಷ ರೂ. ಮೌಲ್ಯದ ವಶ|ಭಾರತದಲ್ಲಿ ಇ-ಸಿಗರೇಟ್ ನಿಷೇಧದ ಕಾರಣ ಮತ್ತು ಶಿಕ್ಷೆಯ ಮಾಹಿತಿ ತಿಳಿಯಿರಿ.
10:22 PM Sep 02, 2025 IST | ಶುಭಸಾಗರ್
ಭಟ್ಕಳದಲ್ಲಿ ನಿಷೇಧಿತ ಇ-ಸಿಗರೇಟ್ ವಶಕ್ಕೆ|2.39 ಲಕ್ಷ ರೂ. ಮೌಲ್ಯದ ವಶ|ಭಾರತದಲ್ಲಿ ಇ-ಸಿಗರೇಟ್ ನಿಷೇಧದ ಕಾರಣ ಮತ್ತು ಶಿಕ್ಷೆಯ ಮಾಹಿತಿ ತಿಳಿಯಿರಿ.
bhatkal ನಿಷೇಧಿತ ಇ ಸಿಗರೇಟ್ ವಶಕ್ಕೆ ಆರೋಪಿ ಬಂಧನ ಏನಿದು ಇ ಸಿಗರೇಟ್  ನಿಷೇಧ ಏಕೆ ಗೊತ್ತಾ

ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ|ಏನಿದು ಇ-ಸಿಗರೇಟ್ ,ನಿಷೇಧ ಏಕೆ ಗೊತ್ತಾ?

Advertisement

https://chat.whatsapp.com/HbI3YG8zHwtAYxenaKEbAg?mode=ems_copy_t

ಕಾರವಾರ:- ಭಟ್ಕಳದಲ್ಲಿ ನಿಷೇಧಿತ ಇ-ಸಿಗರೇಟ್ ಮಾಫಿಯಾ ಜಾಲ ಪತ್ತೆಯಾಗಿದ್ದು  ಪೊಲೀಸರಿಂದ 2.39ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.ಭಟ್ಕಳ ನಗರದ ಹೂವಿನ ಚೌಕ್ ಬಳಿ ಟೌನ್ ಸೆಂಟರ್ ನಲ್ಲಿರುವ ರಿಮ್ಸ್ ಅಂಗಡಿಗೆ ಪೊಲೀಸರ ದಾಳಿ ನಡೆಸಿದ್ದು 2.39 ಲಕ್ಷ ರೂ. ಮೌಲ್ಯದ 51 ಇ-ಸಿಗರೇಟ್ ಹಾಗೂ 154 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು ವಶಕ್ಕೆ ಪಡೆದಿದ್ದಾರೆ.

Bhatkal|ಅರಬ್ಬಿ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ- 25 ಮೀನುಗಾರರ ರಕ್ಷಣೆ

ಭಟ್ಕಳ ನಗರ ಠಾಣೆ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ. ನೇತೃತ್ವದ ಪಿಎಸ್‌ಐಗಳಾದ ನವೀನ್ ಎಸ್. ನಾಯ್ಕ, ತಿಮ್ಮಪ್ಪ ಎಸ್. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ,ಭಟ್ಕಳ ಮುಗ್ದುಂ ಕಾಲೋನಿ ನಿವಾಸಿ ಅಂಗಡಿ ಮಾಲೀಕ ಮಕ್ಬುಲ್ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇ-ಸಿಗರೇಟ್ ನಿಷೇಧದ ಬಳಿಕ ಇದೇ ಮೊದಲಬಾರಿಗೆ ದೊಡ್ಡ ಮೊಟ್ಟದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿದೆ.

ಇ -ಸಿಗರೇಟ್ ಭಾರತದಲ್ಲಿ ನಿಷೇಧ ಏಕೆ?

ಸಂಗ್ರಹ ಚಿತ್ರ(Google)-ಇ-ಸಿಗರೇಟ್

ಭಾರತದಲ್ಲಿ ಇ-ಸಿಗರೇಟ್ (E- cigarettes)ನನ್ನು ಡ್ರಗ್ಸ್ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ 2019 ರಲ್ಲಿ ಇದನ್ನು ಬ್ಯಾನ್ ಮಾಡಲಾಯಿತು.

ಇದಲ್ಲದೇ ಇ-ಸಿಗರೇಟ್ ನನ್ನು ಆಮದು/ರಫ್ತು ಮಾಡುವುದು,ಮಾರಾಟ,ಶೇಕರಣೆ,ಜಾಹಿರಾತು ನೀಡಿಕೆ,ಉಪಯೋಗವನ್ನು ಸಹ ನಿಷೇಧಿಸಲಾಗಿದೆ.

Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ 

ಇ ಸಿಗರೇಟು ಉತ್ಪನ್ನಗಳನ್ನು ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆ 1940(ಡಿಸಿಎ) ಸೆಕ್ಷನ್ 3 (ಬಿ) ಅಡಿಯಲ್ಲಿ ತರಲು ಸಾಧ್ಯವಾಗಿಲ್ಲ. ಸೆಕ್ಷನ್ 26 (ಎ) ಅಡಿಯಲ್ಲಿ ನಿಷೇಧಕ್ಕೆ ಯತ್ನಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಅಗತ್ಯ ತಿದ್ದುಪಡಿ ತರಲಾಗಿದೆ. ಪಂಜಾಬ್, ಹರ್ಯಾಣ ಹಾಗೂ ಚಂಡೀಗಢದಲ್ಲಿ ಮಾತ್ರ ಇ ಸಿಗರೇಟ್, ಇ-ಶೀಶಾ, ಇ ನಿಕೋಟಿನ್, ಪರಿಮಳ ಭರಿತ ಹುಕ್ಕಾ ಎಲ್ಲದರ ಮೇಲೆ ನಿಷೇಧವಿದೆ.

ಏನಿದು ಇ ಸಿಗರೇಟ್?

ತಂಬಾಕು ಎಲೆಗಳನ್ನು ಸಂಪೂರ್ಣವಾಗಿ ಸುಡದೆ ಬಿಸಿ ಮುಟ್ಟಿಸಿ, ದ್ರವ ರೂಪದ ನಿಕೋಟಿನ್ ಅವಿಯನ್ನು ಸೇವಿಸುವ ಸಾಧನಗಳೇ ಇ-ಸಿಗರೇಟ್.

 ಈ ಹಿಂದೆ ಭಾರತದಲ್ಲಿ ಸುಮಾರು 460ಕ್ಕೂ ಅಧಿಕ ಇ ಸಿಗರೇಟು ಬ್ರ್ಯಾಂಡ್ ಗಳು ಇದ್ದವು. ಸರಿ ಸುಮಾರು 7,700ಕ್ಕೂ ಅಧಿಕ ಮಾದರಿಯಲ್ಲಿ ಲಭ್ಯವಿದ್ದು ಇದೀಗ ಈ ಬ್ರಾಂಡ್ ಗಳು ಬಂದ್ ಆಗಿವೆ.

ಇ-ಸಿಗರೇಟ್ ಸೇದಿದರೇ ಮಾರಾಟ ಮಾಡಿದರೇ ಏನು ಶಿಕ್ಷೆ.

ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 1 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದವರೆಗೆ 5 ಲಕ್ಷ ರೂ. ದಂಡ, 3 ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಸಹಿತ ಸೆರೆಮನೆವಾಸ ವಿಧಿಸಬಹುದು.

ಕರ್ನಾಟಕದಲ್ಲಿ ಅಧಿಕ ಮಂದಿ ಬಲಿ

ಭಾರತದಲ್ಲಿ 2019 ರ ಅಂಕಿ ಅಂಶದ ಪ್ರಕಾರ  27.4 ಕೋಟಿ ಜನರು ತಂಬಾಕನ್ನು ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ತಂಬಾಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷ 35000 ಮಂದಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಬಾಕು ಎಲೆಯಲ್ಲಿ ನಾಲ್ಕು ಸಾವಿರ ರಾಸಾಯನಿಕಗಳಿರುತ್ತವೆ. ಅದರಲ್ಲಿ ನಾಲ್ಕು ನೂರು ಕಾಸ್ಮೋಜೆನಿಕ್ ರಾಸಾಯಕನಿಕಗಳು ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ಡಾ ಚಂದ್ರಕಿರಣ್ 2019 ರಲ್ಲಿ ವರದಿ ನೀಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ